ಗೋಣಿಕೊಪ್ಪಲು. ಸೆ. ೨೦: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಗೋಣಿಕೊಪ್ಪ ನಗರದಲ್ಲಿ ನಿರ್ಮಾಣವಾಗಿರುವ ಸ್ವಾತಂತ್ರö್ಯ ಹೋರಾಟಗಾರ ಭವನಕ್ಕೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.

ಹಲವು ದಶಕಗಳನ್ನು ಕಂಡಿರುವ ಈ ಕಟ್ಟಡವು ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಅನುದಾನದ ಕೊರತೆಯಿಂದ ಹಲವಾರು ಕೆಲಸಗಳು ಬಾಕಿ ಉಳಿದಿದ್ದವು. ಸಭಾಂಗಣ ಅಭಿವೃದ್ಧಿಗೆ ಸಮಿತಿಯ ಪ್ರಮುಖರಾದ ಡಾ. ಜೆ. ಸೋಮಣ್ಣ ಈ ಹಿಂದೆ

(ಮೊದಲ ಪುಟದಿಂದ) ಪ್ರಾಧಿಕಾರದ ಅಧ್ಯಕ್ಷರ ಗಮನ ಸೆಳೆದಿದ್ದರು, ಈ ಹಿನ್ನೆಲೆಯಲ್ಲಿ ಕೊಡಗಿಗೆ ಭೇಟಿ ನೀಡಿದ ಸಂದರ್ಭ ಅಧ್ಯಕ್ಷರು ಗೋಣಿಕೊಪ್ಪ ನಗರಕ್ಕೆ ಆಗಮಿಸಿ ಭವನ ನಿರ್ಮಾಣಗೊಂಡಿರುವ ಕಟ್ಟಡದ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಈ ವೇಳೆ ಪ್ರಾಧಿಕಾರದ ವತಿಯಿಂದ ಕಟ್ಟಡದ ಅಭಿವೃದ್ಧಿಗೆ ರೂ. ೧೦ ಲಕ್ಷ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ಗೋಣಿಕೊಪ್ಪ ನಗರದಲ್ಲಿ ಏಕೈಕ ರಂಗಮAದಿರವಾಗಿದ್ದು ಇನ್ನೂ ಹಲವು ಬಗೆಯ ಕೆಲಸಗಳು ನಡೆಯಬೇಕಾಗಿದೆ ಎಂದು ಪ್ರಮುಖರಾದ ಮೂಕಳೇರ ಕುಶಾಲಪ್ಪ ಅಧ್ಯಕ್ಷರ ಗಮನ ಸೆಳೆದರು.

ಭೇಟಿ ವೇಳೆ ಭವನ ಸಮಿತಿ ಪದಾಧಿಕಾರಿಗಳಾದ ಚೆಪ್ಪುಡೀರ ಪಿ. ಬೆಳ್ಯಪ್ಪ, ಕೆ.ಎನ್. ಚಂಗಪ್ಪ, ಶಾಂತು ಅಪ್ಪಯ್ಯ, ಮೂಕಳೇರ ಕುಶಾಲಪ್ಪ, ಆಪಟ್ಟೀರ ಟಾಟು ಮೊಣ್ಣಪ್ಪ, ತೀತಿರ ಜಯ ಅಯ್ಯಪ್ಪ, ಗಿರೀಶ್, ಬಿ.ಎನ್. ಪ್ರಥ್ವಿ, ಡಾ. ಜೆ. ಸೋಮಣ್ಣ ತಿತಿಮತಿ ಸಮೀಪದ ಆನೆ ಚೌಕೂರು ಗಡಿಗೆ ತೆರಳಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರನ್ನು ಬರಮಾಡಿಕೊಂಡರು.

ಗೋಣಿಕೊಪ್ಪ ಕಾರ್ಯಕ್ರಮ ಮುಗಿಸಿದ ಅಧ್ಯಕ್ಷರು ಕರಿಕೆ, ಭಾಗಮಂಡಲ ಮುಂತಾದ ಗಡಿ ಗ್ರಾಮಗಳಿಗೆ, ಗಡಿ ಶಾಲೆಗಳಿಗೆ ಭೇಟಿ ನೀಡಿದರು.

ಈ ವೇಳೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ವಾರ್ತಾ ಇಲಾಖೆಯ ಅಧಿಕಾರಿ ಚಿನ್ನಸ್ವಾಮಿ ಹಾಜರಿದ್ದರು.