ವೀರಾಜಪೇಟೆ, ಸೆ. ೨೦: ವ್ಯಾಪಾರಿ, ಶ್ರಮಜೀವಿ ಸೋಗಿನಲ್ಲಿ ಜಿಲ್ಲೆಯ ಮಣ್ಣಿನಲ್ಲಿ ನೆಲೆಕಂಡು ಪುಟ್ಟ ಅಂಗಡಿಯನ್ನಿಟ್ಟು ವ್ಯಾಪಾರದಲ್ಲಿ ತೊಡಗಿದ್ದ ಒಡಿಸ್ಸಾ ಮೂಲದ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಿ ಬಂಧನಕ್ಕೊಳಗಾದ ಘಟನೆ ನಗರ ಹೃದಯ ಭಾಗದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಕೊಡವ ಸಮಾಜದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಒಡಿಸ್ಸಾ ರಾಜ್ಯದ ಕೊರಪೂತ್ ಜಿಲ್ಲೆ ಮಲ್ಕನಗಿರಿ ಲಕ್ಷಿö್ಮÃಪುರ ಗ್ರಾಮದ ನಿವಾಸಿ ಶಂಕರ್ ಮೋಹಂತಿ ಎಂಬವರ ಪುತ್ರ ಸೂರ್ಯಕಾಂತ್ ಮೋಹಂತಿ (೩೬)
(ಮೊದಲ ಪುಟದಿಂದ) ಬಂಧಿತ ಆರೋಪಿ. ಈತ ಸುಮಾರು ೧೫ ವರ್ಷಗಳ ಹಿಂದೆ ವೀರಾಜಪೇಟೆ ನಗರಕ್ಕೆ ತನ್ನ ಅಣ್ಣನೊಂದಿಗೆ ಬಂದು ನೆಲೆಸಿದ್ದ. ಎಫ್.ಎಂ.ಸಿ ರಸ್ತೆಯ ಸನಿಹದ ಖಾಸಗಿ ಕಟ್ಟಡದಲ್ಲಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು ಚೈನೀಸ್ ಫಾಸ್ಟ್ ಫುಡ್ ಅಂಗಡಿಯನ್ನು ಆರಂಭಿಸಿ ಜೀವನ ಸಾಗಿಸುತಿದ್ದ. ಈತನ ಸ್ವಗ್ರಾಮವಾದ ಲಕ್ಷಿö್ಮÃಪುರ ಎಂಬ ಗ್ರಾಮವು ಆಂಧ್ರ ಪ್ರದೇಶ ರಾಜ್ಯ ಮತ್ತು ಒಡಿಸ್ಸಾ ರಾಜ್ಯಗಳ ಗಡಿಪ್ರದೇಶ ವಾಗಿದ್ದು, ಗ್ರಾಮದ ಕೆಲವು ಭಾಗದಲ್ಲಿ ಪ್ರಭಾವಿಗಳ ಕುಮ್ಮಕ್ಕಿನಿಂದ ಗಾಂಜಾ ಕೃಷಿ ಮಾಡಲಾಗುತ್ತಿದೆ ಎನ್ನಲಾಗಿದ್ದು, ಬಂಧಿತ ವ್ಯಕ್ತಿ ಸ್ವಗ್ರಾಮಕ್ಕೆ ತೆರಳಿ ಹಿಂತಿರುಗುವ ಸಂದರ್ಭದಲ್ಲಿ ಗಾಂಜಾ ಸಾಗಾಟ ಮಾಡುತಿದ್ದ ಎನ್ನಲಾಗಿದೆ. ಬಂಧಿತನಿಗೆ ನಗರದ ವ್ಯಕ್ತಿಗಳ ಸಂಪರ್ಕ ವಿರಳವಾಗಿದ್ದರೂ ಕೇರಳ ರಾಜ್ಯದ ಗಾಂಜಾ ಮಾರಾಟ ಜಾಲದ ಸಂಪರ್ಕ ಸಾಧಿಸಿದ್ದ.
ಸಮಯ ಕಳೆದಂತೆ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕ್ಯಾಂಟಿನ್ ಆರಂಭಿಸಿದ ಈತ ಮುಂದೆ ಗೋಣಿಕೊಪ್ಪ-ಪೊನ್ನಂಪೇಟೆಯ ಕಾಲೇಜುಗಳಲ್ಲೂ ಕ್ಯಾಂಟಿನ್ ವ್ಯವಹಾರ ಮುಂದುವೆರೆಸಿದ್ದ. ಮಗ್ಧನಂತೆ ವರ್ತಿಸುತ್ತಿದ್ದ ಈತ ತನ್ನ ಸ್ವಗ್ರಾಮದಿಂದ ಗಾಂಜಾ ಖರೀದಿಸಿ ತಂದು ಕೇರಳ ಮೂಲದ ವ್ಯಕ್ತಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತಿದ್ದ. ವರಮಾನ ಹೆಚ್ಚಾದಾಗ ನಿವೇಶನ ಖರೀದಿಗೂ ಮುಂದಾಗಿ ಸ್ವಗ್ರಾಮದಲ್ಲಿ ಕೋಟಿ ಬೆಲೆಯ ಮನೆ, ನಗರದ ಹೊರವಲಯದಲ್ಲಿ ನಿವೇಶನ ಹೊಂದಿದ್ದ. ಶ್ರೀಮಂತಿಕೆ ಪ್ರದರ್ಶನ ಮಾಡದೆ ಸಾಮಾನ್ಯ ವ್ಯಕ್ತಿಯಂತೆ ನಟಿಸುತ್ತಾ ದಂಧೆ ಮುಂದುವರಿಸಿದ್ದ ಈತ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ತಾ. ೧೯ ರಂದು ಬೆಳಿಗ್ಗೆ ಸುಮಾರು ೧೧ರ ವೇಳೆಗೆ ಗಾಂಜಾದೊAದಿಗೆ ಕೇರಳ ವ್ಯಕ್ತಿಗಳಿಗೆ ಮಾರಾಟ ಮಾಡಲು ತನ್ನ ಅಣ್ಣನ ಹುಂಡೈ ಸ್ಯಾಂಟ್ರೋ ಕಾರಿನಲ್ಲಿ (ಕೆಎ ೧೨ ಎಂಎ ೩೭೦೯) ತೆರಳಿದ್ದ ಈತನನ್ನು ಖಚಿತ ಮಾಹಿತಿ ಯೊಂದಿಗೆ ಪೊಲೀಸರು ಆರ್ಜಿ ಮುಖ್ಯ ರಸ್ತೆಯಲ್ಲಿ ಬಂಧಿಸಿದ್ದಾರೆ. ಸುಮಾರು ೩ ಕೆ.ಜಿ. ೧೦೦ ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯುತ್ತಾರೆ. ನಂತರ ಆರೋಪಿಯ ಮಳಿಗೆ, ಮನೆ, ಕ್ಯಾಂಟಿನ್ನಲ್ಲಿ ತಪಾಸಣೆಗೆ ಮುಂದಾ ದಾಗ ಎಫ್.ಎಂ.ಸಿ. ರಸ್ತೆಯಲ್ಲಿದ್ದ ಆರೋಪಿಯ ಚೈನೀಸ್ ಫಾಸ್ಟ್ ಫುಡ್ ಅಂಗಡಿಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದ್ದ ೬೮ ಗಾಂಜಾ ಪೊಟ್ಟಣಗಳು ಪತ್ತೆಯಾಗಿವೆ. ಒಟ್ಟು ೬ ಕೆ.ಜಿ. ೪೮೦ ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ೫ ರಿಂದ ೬ ಲಕ್ಷ ಎಂದು ಅಂದಾಜಿಸಲಾಗಿದೆ.
ಬAಧಿತ ವ್ಯಕ್ತಿಯಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಎರಡು ಮೊಬೈಲ್, ರೂ. ೧೨೦೦ ನಗದನ್ನು ವಶಪಡಿಸಿ ಕೊಳ್ಳಲಾಗಿದೆ. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎಸ್ಪಿ ಎಂ.ಎ. ಅಯ್ಯಪ್ಪ, ಡಿವೈಎಸ್ಪಿ ನಿರಂಜನ್ರಾಜೆ ಅರಸ್ ಮಾರ್ಗದÀರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ನೇತೃತ್ವದಲ್ಲಿ ವೀರಾಜಪೇಟೆ ನಗರ ಪಿ.ಎಸ್.ಐ. ಸಿ.ಎ. ಶ್ರೀಧರ್, ಜಿಲ್ಲಾ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಮತ್ತು ಪ್ರವೀಣ್, ಅಪರಾಧ ವಿಭಾಗದ ಪಿ.ಎಸ್.ಐ. ಎಂ.ಸಿ. ಮುತ್ತಣ್ಣ, ಪ್ರೋಬೇಷನರಿ ಪಿ.ಎಸ್.ಐ. ಮಂಜುನಾಥ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಗಿರೀಶ್, ಮುಸ್ತಾಫ, ಧರ್ಮ ಸತೀಶ್, ಶೆಟ್ಟಪ್ಪ ಮತ್ತು ಚಾಲಕರಾದ ರಮೇಶ್ ಹಾಗೂ ಅಭಿಶೇಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯು ವಿವಿಧೆಡೆಗಳಲ್ಲಿ ೭ ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ. ಅಲ್ಲದೇ ದುಶ್ಚಟಗಳಿಗೂ ದಾಸನಾಗಿದ್ದರಿಂದ ಹಣಕ್ಕಾಗಿ ಗಾಂಜಾ ದಂಧೆಗೆ ಇಳಿದಿದ್ದ. ಸುಮಾರು ೩ ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂಬುದು ತನಿಖೆ ವೇಳೆಯಲ್ಲಿ ತಿಳಿದುಬಂದಿದೆ.
ಮೇ ೨೦೨೨ ರಿಂದ ಇಂದಿನವರೆಗೆ ವೀರಾಜಪೇಟೆ ನಗರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಆರು ಗಾಂಜಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ೨೨ ಆರೋಪಿಗಳ ಬಂಧನವಾಗಿದೆ. ವೀರಾಜಪೇಟೆ ನಗರ ಸೇರಿದಂತೆ ದ.ಕೊಡಗಿನಲ್ಲಿ ಗಾಂಜಾ ದಂಧೆ ಮಾಡುವವರನ್ನು ಮಟ್ಟ ಹಾಕಲು ಇಲಾಖೆಯು ಸನ್ನದ್ಧವಾಗಿದೆ. ಗಾಂಜಾ ದಂಧೆಯನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಸಾರ್ವಜನಿಕರು ಸಹಕರಿಸಬೇಕೆಂದು ಡಿವೈಎಸ್ಪಿ ನಿರಂಜನ್ರಾಜೇ ಅರಸ್ ಮನವಿ ಮಾಡಿದರು. -ಕಿಶೋರ್ ಶೆಟ್ಟಿ