ಮಡಿಕೇರಿ, ಸೆ. ೨೧: ಕಡಗದಾಳುವಿನಲ್ಲಿ ನಡೆದಿದ್ದ ಎರಡು ಗೋವು ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದAತೆ ಐವರು ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊನ್ನತ್‌ಮೊಟ್ಟೆಯ ಹುಸೇನ್ (೪೫), ಹಮೀದ್ (೪೦), ಕೊಂಡAಗೇರಿಯ ಸಲೀಂ (೩೧), ಕಡಗದಾಳುವಿನ ಚಂಗಪ್ಪ (೪೦), ಅಭ್ಯತ್‌ಮಂಗಲದ ಶ್ರೀಧರ (೬೦) ಬಂಧಿತ ಆರೋಪಿಗಳಾಗಿದ್ದಾರೆ. ಮಾರ್ಚ್ ೮ ಮತ್ತು ಸೆ.೯ರಂದು ನಡೆದಿದ್ದ ಗೋವು ಕಳವು ಪ್ರಕರಣ ಸಂಬAಧ ದಿನು ಸೋಮಣ್ಣ ಹಾಗೂ ಮಂದಣ್ಣ ಎಂಬವರುಗಳು ನೀಡಿದ್ದ ದೂರಿನಡಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಇತ್ತೀಚೆಗೆ ಕಡಗದಾಳುವಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.