ಮಡಿಕೇರಿ, ಸೆ. ೨೧: ಮೂಲ ದಾಖಲೆ/ಕಡತಗಳಿಲ್ಲದ ಜಮೀನುಗಳ ದುರಸ್ತಿ ಕಾರ್ಯ ವಿಳಂಬವಾಗದAತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಮಂಡಿಸಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಜಮೀನು ದುರಸ್ತಿಗೆ ಮೂಲ ಕಡತದ ನೆಪ ನೀಡಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವದು ಸರಕಾರದ ಗಮನಕ್ಕೆ ಬಂದಿದೆಯೇ? ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ, ರೈತರಿಗೆ ತೊಂದರೆಯಾಗದAತೆ ಜಾಗವನ್ನು ಸುಲಲಿತವಾಗಿ ದುರಸ್ತಿಪಡಿಸಿ ಪೋಡಿ ಮಾಡಲು ತಹಶೀಲ್ದಾರ್ ಹಂತದಲ್ಲಿ ದುರಸ್ತಿಪಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆಯೇ? ಎಂದು ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆ ಮಂಡಿಸಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವರು, ಭೂಮಾಪನಾ ಇಲಾಖೆ ಸುತ್ತೋಲೆ ಸಂ, ತಾಂತ್ರಿಕ ದರಕಾಸ್ತು ಪೋಡಿ ಆಂದೋಲನ ೪೦/೨೦೦೮-೯ ದಿನಾಂಕ ೨೦-೧೦೨೦೦೮ರನ್ವಯ ದರಖಾಸ್ತು ಪೋಡಿ ಅಳತೆಗೆ ಒಳಪಡುವ ಸರಕಾರದಿಂದ ಮಂಜೂರಾದ ಜಮೀನಿನ ಕುರಿತು ಆ ನಂಬರಿನಲ್ಲಿ ಇದುವರೆಗೆ ಆಗಿರುವ ಎಲ್ಲ ಜಮೀನುಗಳ ಮಂಜೂರಿ ದಾಖಲೆಗಳನ್ನು ಪರಿಶೀಲಿಸಿಕೊಂಡು ನಮೂನೆ ೧ ರಿಂದ ೫ನ್ನು ಭರ್ತಿ ಮಾಡಿ ದೃಢೀಕರಿಸಿ ಮಂಜೂರಿಯAತೆ ಪೋಡಿ ಮಾಡಲು ಭೂಮಾಪನಾ ಇಲಾಖೆಗೆ ಕಳುಹಿಸಿದಲ್ಲಿ ನಂತರ ಅಳತೆ ಕಾರ್ಯ ಕೈಗೊಂಡು ಸುತ್ತೋಲೆ ತಾಂತ್ರಿಕ ಆಡಳಿತ ಸುತ್ತೋಲೆ ೨೯/೨೦೦೯-೧೦ ದಿನಾಂಕ ೨೫-೧-೨೦೧೦ರನ್ವಯ ನಮೂನೆ ೬ರಿಂದ ೧೦ನ್ನು ಭರ್ತಿ ಮಾಡಿ ಅರ್ಹ ಪ್ರಕರಣದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ತುರ್ತು ಮತ್ತು ವಿಶೇಷ ಸಂದರ್ಭಗಳ ಪ್ರಕರಣಗಳಲ್ಲಿ ಭೂ ಮಂಜೂರಾತಿಯು ನೈಜತೆಯಿಂದ ಕೂಡಿರುವ ಬಗ್ಗೆ ಪರಿಶೀಲಿಸಿ ನಮೂನೆ ೧ ರಿಂದ ೫ ಭರ್ತಿ ಮಾಡಿ ದೃಢೀಕರಿಸಿ ಏಕವ್ಯಕ್ತಿಗೆ ಪೋಡಿ ಮಾಡಲು ಆದೇಶಿಸಲು ಸುತ್ತೋಲೆ ಸಂಖ್ಯೆ ಕಂ. ೮ ಎಲ್‌ಪಿಜಿ ೨೦೧೬ (ಭಾಗ-೧೦ ದಿನಾಂಕ ೧೮-೭-೨೦೧೬ರನ್ವಯ ಸಂಬAಧಿಸಿದ ತಹಶೀಲ್ದಾರರಿಗೆ ಅಧಿಕಾರ ನೀಡಿದ್ದು, ಅದರಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯಾವುದೇ ಮಂಜೂರಿ ಪ್ರಕರಣದಲ್ಲಿ ಮೂಲ ಮಂಜೂರಿ ದಾಖಲೆ/ ಕಡತ ಲಭ್ಯವಿಲ್ಲದಿದ್ದಲ್ಲಿ ಸರಕಾರದ ಸುತ್ತೋಲೆ ಸಂಖ್ಯೆ ಆರ್ ಡಿ ೭೪ ಎಲ್‌ಪಿಜಿ ೨೦೦೯ ದಿನಾಂಕ ೧೭-೯-೨೦೦೯ ಮತ್ತು ಕಂ.ಞ ೮ ಎಲ್‌ಪಿಜಿ ೨೦೧೬ ದಿನಾಂಕ ೨೦-೬-೨೦೧೬ರನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಗೈರು ವಿಲೇ ಕಡತ ಪುನರ್ ನಿರ್ಮಾಣದ ಸಮಿತಿಯಲ್ಲಿ ಮಂಡಿಸಿ ಸೂಕ್ತ ಆದೇಶವಾದ ನಂತರ ಕಡತ ಪುನರ್ ನಿರ್ಮಾಣ ಮಾಡಿಕೊಂಡು ಪೋಡಿ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಅರ್ಜಿದಾರರ ವಿವರ ಸಹಿತ ಮಾಹಿತಿ ನೀಡಿದ್ದಾರೆ.