ಸಿದ್ದಾಪುರ, ಸೆ. ೨೦: ಜಾನುವಾರುಗಳ ಮೇಲೆ ದಾಳಿ ನಡೆಸಿ ತಪ್ಪಿಸಿಕೊಂಡಿದ್ದ ವ್ಯಾಘ್ರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಮಾಲ್ದಾರೆ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದ ಹುಲಿ ಮಂಗಳವಾರದAದು ಮಾಲ್ದಾರೆಯ ಕಲ್ಲಳದ ಬಳಿ ಕಾಫಿ ತೋಟವೊಂದರಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಸೆರೆೆಸಿಕ್ಕಿದೆ. ಮಾಲ್ದಾರೆ ಹಾಗೂ ಬಾಡಗ ಬಾಣಂಗಾಲ ಗ್ರಾಮದಲ್ಲಿ ಐದು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಹುಲಿಯನ್ನು ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕಳೆದ ೧೦ ದಿನಗಳಿಂದ ಹಗಲಿರುಳು ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ, ಮಾಲ್ದಾರೆ ಭಾಗದಲ್ಲಿ ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ಕೈಗೊಂಡಿದ್ದರು. ಈತನ್ಮದ್ಯೆ ತಾ. ೧೫ ರಂದು ಘಟ್ಟದಳದ ಕಾಫಿ ತೋಟದಲ್ಲಿ ಹುಲಿಯು ಕಂಡುಬAದಿದ್ದು, ಹುಲಿಯನ್ನು ಸೆರೆ ಹಿಡಿಯಲು ಅರವಳಿಕೆ ಚುಚ್ಚು ಮದ್ದನ್ನು ಪ್ರಯೋಗಿಸಲಾಗಿತ್ತು. ಈ ಸಂದರ್ಭ ದಷ್ಟಪುಷ್ಟವಾಗಿದ್ದ ಹುಲಿಯು ಅರವಳಿಕೆಗೆ ಬೀಳದೇ ಕಾಫಿ ತೋಟದ ಮೂಲಕ ತಪ್ಪಿಸಿಕೊಂಡು ದುಬಾರೆ ಅರಣ್ಯ ಪ್ರದೇಶದ ಮಾಲ್ದಾರೆ ಕಾಡಿನಲ್ಲಿ ಕಣ್ಮರೆಯಾಗಿತ್ತು. ನಂತರ ಮಾಲ್ದಾರೆಯ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಅಸ್ತಾನದಲ್ಲಿ ಜಾನುವಾರುವೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಜಾನುವಾರುವಿನ ಕಳೇಬರವನ್ನು ಅರಣ್ಯ ಇಲಾಖಾಧಿಕಾರಿಗಳು ಅದೇ ಜಾಗದಲ್ಲಿ ಇರಿಸಿ, ಸಿ.ಸಿ. ಕ್ಯಾಮೆರಾವನ್ನು ಅಳವಡಿಸಿದ್ದರು. ಇದಲ್ಲದೇ ವಾಹನವೊಂದರಲ್ಲಿ ಸೊಪ್ಪುಗಳನ್ನು ಮುಚ್ಚಿ ರಾತ್ರಿ ಕಾವಲು ಕುಳಿತಿದ್ದರು. ರಾತ್ರಿ ವೇಳೆ ಹುಲಿ ಬಂದಿದ್ದು, ಇದರ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿತ್ತು. ಇದರಿಂದ ಕಾರ್ಯಾಚರಣೆ ಚುರುಕುಗೊಳಿಸಿದ ಕಾರ್ಯಾಚರಣೆ ತಂಡವು ಸಾಕಾನೆಗಳ ನೆರವಿನಿಂದ ಮಾಲ್ದಾರೆ ಭಾಗದಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿತು. ಮಂಗಳವಾರ ಬೆಳಗ್ಗೆ ಮಾಲ್ದಾರೆಯ ಕಲ್ಲಳ ಭಾಗದ ಉಣ್ಣಿಕೃಷ್ಣನ್ ಎಂಬವರಿಗೆ ಸೇರಿದ ಹಸು ಕಾಣೆಯಾಗಿದ್ದು, ಹಸುವನ್ನು ಹುಡುಕಿಕೊಂಡು ಸ್ಥಳೀಯ ಕಾಫಿ ತೋಟಗಳಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಕಲ್ಲಳ

(ಮೊದಲ ಪುಟದಿಂದ) ಭಾಗದ ಅಚ್ಯುತ ಎಸ್ಟೇಟ್ ನ ಒಳಭಾಗದಲ್ಲಿ ಹುಲಿ ಮಲಗಿರುವುದನ್ನು ಕಂಡಿದ್ದು, ಉಣ್ಣಿಕೃಷ್ಣ ಅವರು ಕೂಡಲೇ ಓಡಿ ಪರಾರಿಯಾಗಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತವಾದ ಕಾರ್ಯಾಚರಣೆ ತಂಡವು ಕಾಫಿ ತೋಟವನ್ನು ಸುತ್ತುವರೆದು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕಾರ್ಯಾಚರಣೆ ತಂಡದ ಶೂಟರ್ ಕನ್ನಂಡ ರಂಜನ್ ಹಾಗೂ ವನ್ಯಜೀವಿ ವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ಹಾಗೂ ಡಾ.ರಮೇಶ್ ಸೇರಿ ಹುಲಿಗೆ ಅರವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದ ಕೂಡಲೇ ಹುಲಿ ಶೂಟರ್ ರಂಜನ್ ಅವರನ್ನು ಕಂಡು ಓಡಲು ಯತ್ನಿಸಿತು. ದಷ್ಟಪುಷ್ಟವಾದ ಹುಲಿ ಮೊದಲ ಅರವಳಿಕೆಗೆ ಬೀಳದ ಕಾರಣ ವೈದ್ಯಾಧಿಕಾರಿಗಳ ನಿರ್ದೇಶನದಂತೆ ಮತ್ತೊಂದು ಬಾರಿ ಅರವಳಿಕೆ ಪ್ರಯೋಗಿಸಲಾಯಿತು. ಈ ವೇಳೆ ಸ್ವಲ್ಪ ದೂರ ಓಡಿದ ಹುಲಿಯು ಕಾಫಿ ತೋಟದ ಒಳಭಾಗದಲ್ಲಿ ಬಿದ್ದಿತ್ತು. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯನ್ನು ಬಲೆ ಹಾಕಿ ಸೆರೆ ಹಿಡಿದರು. ಕಾಲಿನ ಭಾಗಕ್ಕೆ ಗಾಯವಾಗಿದ್ದ ಹುಲಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಕಾಫಿ ತೋಟದಿಂದ ಎತ್ತಿಕೊಂಡು ಮುಖ್ಯ ರಸ್ತೆಗೆ ಬಂದು ವಾಹನಕ್ಕೆ ಏರಿಸಲಾಯಿತು. ಹುಲಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಮೈಸೂರಿನ ಕೂರ್ಗಳ್ಳಿಗೆ ರವಾನಿಸಲಾಯಿತು.

ಕಳೆದ ಒಂದು ತಿಂಗಳಿನಿAದ ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದರು. ಗ್ರಾಮಸ್ಥರು ಆತಂಕಗೊAಡಿದ್ದರು. ಇದೀಗ ಹುಲಿ ಸೆರೆಯಿಂದ ನಿಟ್ಟುಸಿರು ಬಿಡುವಂತಾಗಿದೆ.

೧೩ ವರ್ಷ ಪ್ರಾಯ: ಸೆರೆಯಾದ ಹುಲಿಯು ದಷ್ಟಪುಷ್ವಾಗಿದ್ದು, ಸುಮಾರು ೧೩ ವರ್ಷ ಪ್ರಾಯ ಇರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯ ಕಾಲಿನ ಕೆಳಭಾಗದಲ್ಲಿ ಗಾಯವಾಗಿದ್ದು, ವನ್ಯ ಜೀವಿಗಳ ನಡುವಿನ ಕಾದಾಟದಲ್ಲಿ ಗಾಯವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಹುಲಿ ಗಣತಿಯ ವರದಿಯ ಪ್ರಕಾರ ಹುಲಿಯ ಸಂಖ್ಯೆ: ಯು ೨೩೧ ಎಂದು ಡಿ.ಎಫ್.ಓ ಪೂವಯ್ಯ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿ.ಎಫ್.ಓ ಪೂವಯ್ಯ ನೇತೃತ್ವದಲ್ಲಿ ಎ.ಸಿ.ಎಫ್ ಗೋಪಾಲ, ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹನಗುಂದ, ಆರ್.ಆರ್.ಟಿ ತಂಡ, ದುಬಾರೆ ಸಾಕಾನೆ ಶಿಬಿರದ ೪ ಸಾಕಾನೆಗಳೊಂದಿಗೆ ಸುಮಾರು ೫೦ ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವರದಿ : ವಾಸು / ಸುಧಿ