ಶ್ರೀಮಂಗಲ, ಸೆ. ೨೧: ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಜಂಟಿ ಆಶ್ರಯದಲ್ಲಿ ಕೊಡವ ಜನಾಂಗದಲ್ಲಿ ವಧು-ವರ ಅನ್ವೇಷಣೆ ಯನ್ನು ಬಲವರ್ಧನೆಗೊಳಿಸಿ, ಜನಾಂಗದಲ್ಲಿ ವಧು-ವರ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿರುವ ವರನ್ನು ಗುರುತಿಸಿ,ಅವರಲ್ಲಿ ಪರಸ್ಪರ ಸಂಪರ್ಕ ಸಾಧಿಸಿ ವಿಚಾರ ವಿನಿಮಯಕ್ಕೆ ವೇದಿಕೆ ನಿರ್ಮಿಸುವ ಉದ್ದೇಶದಿಂದ "ತಂದ್-ಬೆAದ್'ಕಾರಡ ಮೋಪ್ ಕೂಟ ಕಾರ್ಯಕ್ರಮವನ್ನು ತಾ.೨೫ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೂರ್ವಾಹ್ನ ೧೦ ಗಂಟೆಗೆ ಆಯೋಜಿಸಲಾಗಿದೆ.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಭಯ ಸಂಘಟನೆ ಮುಖಂಡರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸಮಾಲೋಚನೆ ನಡೆಸಿ,ಈ ವಿಚಾರ ತಿಳಿಸಿದರು.

ಕೊಡವ ಜನಾಂಗದಲ್ಲಿ ಮದುವೆಯಾಗಲು ಉದ್ದೇಶಿಸಿರುವ ಗಂಡು ಮತ್ತು ಹೆಣ್ಣುಗಳಿಗೆ ಸೂಕ್ತ ವರ-ವಧುವನ್ನು ಹುಡುಕಿ ಸಂಪರ್ಕಕೊAಡಿಯಾಗಿ ಸೇವೆ ಸಲ್ಲಿಸುವ ಜನಾಂಗದ ಸುಮಾರು ೬೦ ಕ್ಕೂ ಅಧಿಕ ವರ-ವಧು ಅನ್ವೇಷಕರನ್ನು ಈ ಸಭೆಗೆ ಅಮಂತ್ರಿಸಲಾಗಿದೆ.ಇವರ ಸಂಪರ್ಕದಲ್ಲಿರುವ ವಧು-ವರರ ಮಾಹಿತಿಯನ್ನು ಪರಸ್ಪರ ಹಂಚಿಕೊAಡು ಜನಾಂಗದ ಹಿತದೃಷ್ಟಿಯಿಂದ ಸೇವೆ ಸಲ್ಲಿಸಲು ಪೂರಕ ವಾತಾವರಣ ನಿರ್ಮಿಸುವ ಅಗತ್ಯತೆ ಬಗ್ಗೆ ಕಾರ್ಯಕ್ರಮದಲ್ಲಿ ಸಲಹೆ ಪಡೆದು ಮುಂದಿನ ಕಾರ್ಯಯೋಜನೆ ರೂಪಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.ತಾ.೨೫ ರ ಸಭೆಗೆ ಈಗಾಗಲೇ ಸುಮಾರು ೬೦ ಕ್ಕೂ ಅಧಿಕ ತಂದ್-ಬೆAದ್ ಮಾಡುವವರನ್ನು ಗುರುತಿಸಿ ಅಮಂತ್ರಿಸಲಾಗಿದೆ.ಈ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಕರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.ಅಂತವರು ಜಬ್ಬೂಮಿ ಸಂಘಟನೆ ದೂರವಾಣಿ ಸಂಖ್ಯೆ ೯೪೮೦೭೩೧೮೭೬ ಮೂಲಕ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಕೋರಲಾಗಿದೆ.

ಈ ಸಂದರ್ಭ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಮಾಚಿಮಾಡ ರವೀಂದ್ರ, ನಿರ್ದೇಶಕ ಉಳುವಂಗಡ ಲೋಹಿತ್ ಭೀಮಯ್ಯ, ಮಾಚಿಮಾಡ ತೇಜ್ ತಿಮ್ಮಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ.ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಸಹ ಕಾರ್ಯದರ್ಶಿ ಆಲೇಮಾಡ ಸುಧೀರ್ ನಿರ್ದೇಶಕ ರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೀರಂಡ ಕಂದಾ ಸುಬ್ಬಯ್ಯ ಹಾಜರಿದ್ದರು.