ಭಾಗಮಂಡಲ, ಸೆ. ೨೧: ಚೇರಂಗಾಲ ಗ್ರಾಮದ ಮತ್ತಾರಿ ಲವ ಎಂಬವರ ಮನೆ ಹತ್ತಿರದ ಗದ್ದೆಯಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಅಂದಾಜು ೧೦ ಅಡಿ ಉದ್ದದ ಹೆಬ್ಬಾವನ್ನು ಉಪವಲಯ ಅರಣ್ಯ ಅಧಿಕಾರಿ ಶ್ರೀ ಮಂಜುನಾಥ ನಾಯಕ್. ಅರಣ್ಯ ರಕ್ಷಕರಾದ ರಫೀಕ್ ಆರ್ ಜಿ ಮತ್ತು ಯಮನೂರಿ ಹಾಗೂ ಉರಗತಜ್ಞ ಪೂನ್ನಿರ ಸ್ನೇಕ್ ಗಗನ್ ಸ್ಥಳಕ್ಕೆ ದಾವಿಸಿ ಹೆಬ್ಬಾವನ್ನು ಸೆರೆಹಿಡಿದು ತಲಕಾವೇರಿ ವನ್ಯಜೀವಿಧಾಮಕ್ಕೆ ಬಿಟ್ಟರು.