ಮಡಿಕೇರಿ, ಸೆ. ೨೧: ಐತಿಹಾಸಿಕ ಮಡಿಕೇರಿ ದಸರಾಗೆ ದಿನಗಣನೆ ಆರಂಭಗೊAಡಿದೆ. ಸಾಂಪ್ರದಾಯಿಕ ಉತ್ಸವಗಳೊಂದಿಗೆ ನವರಾತ್ರಿಯ ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ದಸರಾದ ಆಕರ್ಷಣೆಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಡಿಕೇರಿ ದಸರಾ ಜನೋತ್ಸವವಾಗಿ ಖ್ಯಾತಿ ಗಳಿಸಿದ್ದು, ಈ ಬಾರಿ ‘ಯುವಕಲೋತ್ಸವ’ ನಾಡಹಬ್ಬದ ರಂಗನ್ನು ಹೆಚ್ಚಿಸಲಿದೆ.

ಈ ಬಾರಿ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ‘ಕಿಂಬರ್ಲಿ ರಿಕ್ರಿಯೇಷನ್ಸ್’ ತಂಡ ಸಿದ್ಧವಾಗಿದ್ದು, ಯುವದಸರಾ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯ ಕ್ರಮವನ್ನು ‘ಯುವಕಲೋತ್ಸವ’ ಎಂದು ಬದಲಿಸಿ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ. ಕೇವಲ ಡಿ.ಜೆ, ರಸಮಂಜರಿ, ನೃತ್ಯ ಮಾತ್ರವಲ್ಲದೆ ಪ್ರವಾಸೋದ್ಯಮ, ವೈಜ್ಞಾನಿಕ ಕಸ ವಿಲೇವಾರಿ ಸೇರಿದಂತೆ ಇನ್ನಿತರ ಸಾಮಾಜಿಕ ಸಂದೇಶಗಳನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ತಂಡ ಮುಂದಾಗಿದೆ.

ವಿವಿಧ ರೀತಿಯ ಕಾರ್ಯಕ್ರಮಗಳು

ಯುವಕಲೋತ್ಸವದ ಅಂಗವಾಗಿ ೮ ವಿವಿಧ ಮಾದರಿಯ ಮನರಂಜನಾ ಕಾರ್ಯಕ್ರಮಗಳನ್ನು ಸಮಿತಿ ಘೋಷಣೆ ಮಾಡಿದೆ. ಒಂದೊAದು ಕಾರ್ಯಕ್ರಮಕ್ಕೆ ವಿಭಿನ್ನ ಶೀರ್ಷಿಕೆಯನ್ನು ನೀಡಲಾಗಿದೆ. ಅಕ್ಟೋಬರ್ ೧ ರಂದು ಗಾಂಧಿ ಮೈದಾನ ಯುವಜನಾಂಗದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

‘ಆರ್.ಸಿ. ಕಾರ್ ಬ್ಯಾಟಲ್’ ಎಂಬ ನವತಂತ್ರಜ್ಞಾನ ಜನರು ಈ ಬಾರಿ ಕಣ್ತುಂಬಿಕೊಳ್ಳಬಹುದಾಗಿದೆ. ರಿಮೋಟ್ ಕಾರ್‌ಗಳು ಹಾಗೂ ರೋಬೋಟ್ಸ್ಗಳ ಪ್ರದರ್ಶನ ಬೆಳಿಗ್ಗೆ ನಡೆಯಲಿದೆ. ರಿಮೋಟ್ ಚಾಲಿತ ಕಾರ್‌ಗಳ ರ‍್ಯಾಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರದರ್ಶನ ಗೊಳ್ಳಲಿದೆ. ಜೊತೆಗೆ ನುರಿತ ಬೈರ‍್ಸ್ಗಳಿಂದ ಸಾಹಸ ಹಾಗೂ ‘ಬಿ.ಬಾಯ್’ ಪ್ರದರ್ಶನಗಳು ದೂಳೆಬ್ಬಿಸಲಿವೆ.

‘ಮಿಸ್ಟರ್ ಆ್ಯಂಡ್ ಮಿಸ್ ಯುವಕಲೋತ್ಸವ ಫ್ಯಾಷನ್ ಶೋ’ ಆಯೋಜಿಸಲಾಗಿದೆ. ಆಸಕ್ತರು ರ‍್ಯಾಂಪ್’ನಲ್ಲಿ ಈ ಬಾರಿ ಹೆಜ್ಜೆ ಹಾಕಬಹುದಾಗಿದೆ. ಇವರಿಗೆ ತರಬೇತಿ ನೀಡಿ ಸಜ್ಜುಮಾಡುವ ಜವಾಬ್ದಾರಿ ಯನ್ನು ಸಮಿತಿ ಹೊತ್ತುಕೊಂಡಿದೆ. ನೃತ್ಯ ಕಲೋತ್ಸವ ಚಾಂಪಿಯನ್‌ಶಿಪ್ ಎಂಬ ಹೆಸರಿನಲ್ಲಿ ನೃತ್ಯ ಸ್ಪರ್ಧೆಗೆ ಈ ಬಾರಿ ಹೊಸತನದ ಸ್ಪರ್ಶ ನೀಡಲಾಗಿದೆ. ೧೮ ವರ್ಷ ಮೇಲ್ಪಟ್ಟ ತಂಡಗಳಿಗೆ ಅವಕಾಶ ಒದಗಿಸಲಾ ಗಿದ್ದು, ಕನಿಷ್ಟ ೧೫ ಜನರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈಗಾಗಲೇ ಆಡಿಷನ್ ಮೂಲಕ ಜಿಲ್ಲೆಯ ೫ ತಂಡಗಳನ್ನು ಆಯ್ಕೆಮಾಡ ಲಾಗಿದೆ. ಆಡಿಷನ್ ಮೂಲಕ ಬೇರೆ ಜಿಲ್ಲೆಯ ೫ ತಂಡಗಳಿಗೆ ಅವಕಾಶ ನೀಡಲಾಗುತ್ತದೆ. ಮೊದಲ ಮೂರು ಸ್ಥಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಅಲ್ಲದೆ, ರೋಲಿಂಗ್ ಟ್ರೋಫಿ ಪ್ರಥಮ ಸ್ಥಾನ ಪಡೆದ ತಂಡದ ಪಾಲಾಗಲಿದೆ.

ಈ ಬಾರಿ ತೀರ್ಪುಗಾರರೊಂದಿಗೆ ಜನರ ಮಧ್ಯೆ ಯಾರಿಗೂ ತಿಳಿಯದಂತೆ ಓರ್ವ ತೀರ್ಪುಗಾರರು ಇರಲಿದ್ದಾರೆ. ಬಹುಮಾನದಲ್ಲಿ ಗೊಂದಲ ಸೃಷ್ಟಿ ಯಾಗಬಾರದೆಂದು ತಂಡದ ಪ್ರದರ್ಶನ ವಾದಂತೆ ತೀರ್ಪುಗಾರರು ನೀಡಿದ ಅಂಕಗಳನ್ನು ಪಡೆದುಕೊಳ್ಳ ಲಾಗುವುದು.

ಯುವಜನತೆಯ ಮೈನವಿ ರೇಳಿಸಲು ರ‍್ಯಾಪ್ ಎಕ್ಸಿಬಿಟ್ಸ್’ ನಡೆಯಲಿದ್ದು, ಹೆಸರಾಂತ ಹಾಗೂ ಉದಯೋನ್ಮುಖ ರ‍್ಯಾರ‍್ಸ್ಗಳು ಪ್ರದರ್ಶನ ನೀಡಲಿದ್ದಾರೆ. ಯುವ ಸಾಧಕರನ್ನು ಗುರುತಿಸಿ ‘ಯೂತ್ ಐಕನ್’ ಪ್ರಶಸ್ತಿ ನೀಡಲಾಗುತ್ತದೆ.

ವಿವಿಧ ಕ್ಷೇತ್ರದ ಹೆಸರಾಂತ ವ್ಯಕ್ತಿಗಳು ‘ಸ್ಟಾರ್ ನೈಟ್’ ಕಾರ್ಯಕ್ರಮಕ್ಕೆ ಬರಲಿದ್ದಾರೆ. ‘ಬೀಟ್ ಎಕ್ಸ್ಪ್ಲೋಷನ್’ ಹೆಸರಿನಲ್ಲಿ ಡಿ.ಜೆ. ಕಾರ್ಯಕ್ರಮ ನಡೆಯಲಿದೆ. ವಿವಿಧ ಸಂಗೀತ ವಾದ್ಯಗಳನ್ನು ಬಳಸಿಕೊಂಡು ‘ರಿದಮ್ ಬೇಸ್’ ಎಂಬ ಶೀರ್ಷಿಕೆಯಡಿ ಸಂಗೀತ ಕಾರ್ಯಕ್ರಮ ಕಲೋತ್ಸವದ ಆಕರ್ಷಣೆಯಾಗಲಿದೆ.

ಸಾಮಾಜಿಕ ಸಂದೇಶ-ದಿನವಿಡಿ ಕಾರ್ಯಕ್ರಮ

ಬೈಕ್ ಜಾಥದ ಮೂಲಕ ಸುಸ್ಥಿರ ಪ್ರವಾಸೋದ್ಯಮ ಹಾಗೂ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಅರಿವು ಮೂಡಿಸ ಲಾಗುತ್ತದೆ. ಭಗವತಿ ನಗರದಿಂದ ಮುಖ್ಯಬೀದಿಗಳಲ್ಲಿ ಬೈರ‍್ಸ್ಗಳು ಸಾಗಿ ಸಂದೇಶ ನೀಡಲಿದ್ದಾರೆ.

ಬೆಳಿಗ್ಗೆಯಿಂದ ಮಧ್ಯರಾತ್ರಿಯ ತನಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ೩ ಗಂಟೆಯಿAದ ನೃತ್ಯ ಸ್ಪರ್ಧೆಗಳು ನಡೆದು ಬಳಿಕ ರಾತ್ರಿ ಮನರಂಜನಾ ಕಾರ್ಯಕ್ರಮಗಳು ನಡೆದು ನೃತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗು ವುದು. ಹೆಚ್ಚಿನ ಮಾಹಿತಿಗೆ ೮೭೬೨೫೪೭೯೮೭ ಸಂಖ್ಯೆಯನ್ನು ಸಂಪರ್ಕಿಸಿ ವಿವರ ಪಡೆಯ ಬಹುದಾಗಿದೆ.-ಹೆಚ್. ಜೆ. ರಾಕೇಶ್