ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ವಿಚಾರಕ್ಕೆ ಸಂಬAಧಿಸಿದAತೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರು ಉತ್ತರ ಒದಗಿಸಿದ್ದಾರೆ. ಜಾಗ ಮಂಜೂರಾತಿ ವಿಚಾರದಲ್ಲಿ ಮಾಜಿ ಸೈನಿಕರು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿರುವುದನ್ನು ಉಲ್ಲೇಖಿಸಿ ಶಾಸಕರು ಪ್ರಶ್ನೆ ಮುಂದಿರಿಸಿದ್ದರು.

ಸಚಿವರ ಉತ್ತರ ಇಂತಿವೆ

ಕೊಡಗು ಜಿಲ್ಲೆಯಲ್ಲಿ ಸೈನಿಕ, ಮಾಜಿ ಸೈನಿಕರಿಂದ ಜಮೀನು ಮಂಜೂರಾತಿ ಕೋರಿ ಒಟ್ಟು ೧೨೨೬ ಅರ್ಜಿಗಳು ಸ್ವೀಕೃತವಾಗಿರುತ್ತದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ದಾಖಲೆಯಂತೆ ಲಭ್ಯವಿರುವ ಬಹುತೇಕ ಜಮೀನುಗಳು ಒತ್ತುವರಿಯಾಗಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೪ (ಎ), ೯೪ (ಬಿ), ೯೪(ಎ)(೪) ರಡಿ ಸಕ್ರಮಕ್ಕೆ ಅವಕಾಶ ಕಲ್ಪಿಸಿರುವುದರಿಂದ ಒತ್ತುವರಿ ಜಮೀನು ಸಕ್ರಮಕ್ಕೆ ಪ್ರತ್ಯೇಕವಾಗಿ ಕ್ರಮವಹಿಸಲಾಗುತ್ತಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೪ ರಲ್ಲಿ ಸೈನಿಕರು ಮತ್ತು ಮಾಜಿ ಸೈನಿಕರಿಗೆ ಅವರ ವಾರ್ಷಿಕ ವರಮಾನವು ರೂ. ೮ ಲಕ್ಷ ಮೀರದೇ ಇದ್ದಲ್ಲಿ ಬೇಸಾಯದ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ ೫(೧) ಎ ರನ್ವಯ ಯಾವುದೇ ಗ್ರಾಮದಲ್ಲಿ ವಿಲೇ ಮಾಡುವುದಕ್ಕೆ ದೊರೆಯುವ ಜಮೀನಿನ ಪೈಕಿ ಶೇ. ೧೦ ರಷ್ಟು ಜಮೀನನ್ನು ಮಾಜಿ ಸೈನಿಕರಿಗೆ ಮತ್ತು ಸೈನಿಕರಿಗೆ ಮೀಸಲಿಡಬೇಕಾಗಿರುತ್ತದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ೧೯೬೯ರ ನಿಯಮ (೧೨(೫) ರಲ್ಲಿ ಎರಡು ಹೆಕ್ಟೇರುಗಳವರೆಗೆ ಖುಷ್ಕಿ ಜಮೀನನ್ನು ಅಥವಾ ಒಂದು ಹೆಕ್ಟೇರುಗಳ ಬಾಗಾಯ್ತು ಜಮೀನನ್ನು ಅಥವಾ ಕೆರೆಗಳಿಂದ ಅಥವಾ ನಾಲೆಗಳಿಂದ ಖಾತ್ರಿ ನೀರಾವರಿ ಸೌಲಭ್ಯಗಳಿಂದ ಕೂಡಿದ ತರಿ ಭೂಮಿಯನ್ನು ಮೊದಲು ಸೇನಾ ಸೇವೆಯಲ್ಲಿದ್ದವರಿಗೆ ಮತ್ತು ಸೈನಿಕರಿಗೆ ಮಂಜೂರಾದ ಜಮೀನುಗಳ ಸಂಬAಧದಲ್ಲಿ ಯಾವ ಬೆಲೆಯೂ ಸಂದಾಯವಾಗತಕ್ಕದ್ದಲ್ಲ ಎಂದು ತಿಳಿಸಲಾಗಿದೆ.

ಅದರಂತೆ ಸುತ್ತೋಲೆ ಸಂಖ್ಯೆ : ಆರ್‌ಡಿ ೨೨ ಎಲ್‌ಜಿಪಿ ೨೦೧೯, ದಿನಾಂಕ: ೨೪.೦೬.೨೦೨೧ ರಲ್ಲಿ ಸೈನಿಕ, ಮಾಜಿ ಸೈನಿಕರಿಗೆ ಭೂ ಮಂಜೂರಾತಿಗೆ ಸಂಬAಧಿಸಿದAತೆ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ : ೨೬೭೦೦/೨೦೧೩ರ ಪ್ರಕರಣದಲ್ಲಿ ದಿನಾಂಕ: ೨೫.೦೮.೨೦೧೪ ರಂದು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿರುವಂತೆ ಈಗಾಗಲೇ ಹೊರಡಿಸಿರುವ ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್‌ಡಿ ೨೪೧ ಎಲ್‌ಜಿಸಿ ೨೦೧೬, ದಿನಾಂಕ: ೧೯.೧೧.೨೦೧೬ರ ಸುತ್ತೋಲೆಯಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಹಾಗೂ ಈ ಕಾರ್ಯದಲ್ಲಿ ಯಾವುದೇ ದೂರುಗಳಿಗೆ ಆಸ್ಪದೆ ನೀಡದಂತೆ ಸಂಪೂರ್ಣ ಪಾರದರ್ಶಕತೆಯನ್ನು ಪಾಲಿಸತಕ್ಕದ್ದು, ಯಾವುದೇ ಅಧಿಕಾರಿ, ನೌಕರರ ಲೋಪವನ್ನು ಸರ್ಕಾರವು ತೀವ್ರ ಗಂಭೀರವಾಗಿ ಪರಿಗಣಿಸಲಾಗುವುದೆಂದು ಹಾಗೂ ಅವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತಿಳಿಸಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮ ೧೯೬೯ರ ನಿಯಮ ೩ ರಂತೆ ಮಂಜೂರಾತಿಗೆ ಲಭ್ಯವಿರುವ ಸರ್ಕಾರಿ ಜಮೀನನ್ನು ಲಭ್ಯತಾ ಪಟ್ಟಿಗೆ ತಂದು, ಪ್ರಕಟಿಸಿ ನಿಯಮ ೫ರಡಿ ವಿವಿಧ ವರ್ಗಗಳಿಗೆ ಮೀಸಲಾತಿಯಡಿ ಪರಿಶೀಲಿಸಿ ಮಂಜೂರಾತಿಗೆ ಕ್ರಮವಹಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ದಿನಾಂಕ : ೦೧.೦೭.೨೦೨೨ ರಂದು ಒಟ್ಟು ೩೫೯.೯೭ ಎಕರೆ ಸರ್ಕಾರಿ ಜಮೀನು ಭೂ ಲಭ್ಯತಾ ಪಟ್ಟಿಯಲ್ಲಿದ್ದು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ರ ನಿಯಮ ೫ ರಂತೆ ಲಭ್ಯವಿರುವ ಜಮೀನಿನ ಪೈಕಿ ಶೇ. ೧೦ ರಷ್ಟು ಜಮೀನನ್ನು ಮಾತ್ರ ಸೈನಿಕರು, ಮಾಜಿ ಸೈನಿಕರಿಗೆ ಆದ್ಯತಾನುಸಾರ ಮಂಜೂರು ಮಾಡಬಹುದಾಗಿದೆ. ಮುಂದುವರಿದು, ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್.ಡಿ ೨೬ ಎಲ್‌ಜಿಪಿ ೨೦೨೧ ದಿನಾಂಕ: ೨೭.೧೦.೨೦೨೧ ರಂತೆ ಜಮೀನು ಮಂಜೂರು ಮಾಡಲು ಸಾಕಷ್ಟು ಜಮೀನು ಲಭ್ಯವಿಲ್ಲದ ಪಕ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ೨೪೦೦ ಚದರ ಅಡಿ ಅಥವಾ ನಗರ ಪ್ರದೇಶಗಳಲ್ಲಿ ೧೨೦೦ ಚದರ ಅಡಿ ವಿಸ್ತೀರ್ಣದ ನಿವೇಶನ ಜಾಗವನ್ನು ಸರಕಾರದ ಯಾವುದಾದರೂ ವಸತಿ ಯೋಜನೆ ಅಥವಾ ವಿಶೇಷ ಯೋಜನೆಯಡಿ ಉಚಿತವಾಗಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಅದರಂತೆ ಕ್ರಮವಹಿಸಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೮೬ ಪ್ರಕರಣಗಳಲ್ಲಿ ೪೭೭.೮೮ ಎಕರೆ ಜಮೀನನ್ನು ಸೈನಿಕ, ಮಾಜಿ ಸೈನಿಕರಿಗೆ ಮಂಜೂರು ಮಾಡಲಾಗಿದೆ. ೨೦೨೨ರಲ್ಲಿ ಒಂದು ಪ್ರಕರಣದಲ್ಲಿ ೦.೦೫ ಎಕರೆ ನಿವೇಶನವನ್ನು ಮೃತ ಸೈನಿಕರ ಪತ್ನಿಗೆ ಮಂಜೂರು ಮಾಡಲಾಗಿದ್ದು, ಇನ್ನುಳಿದ ಎಲ್ಲಾ ಪ್ರಕರಣಗಳಲ್ಲಿ ಸುತ್ತೋಲೆ ಸಂಖ್ಯೆ : ಆರ್‌ಡಿ ೨೨ ಎಲ್‌ಜಿಪಿ ೨೦೧೯, ದಿನಾಂಕ: ೨೪.೦೬.೨೦೨೧ರಲ್ಲಿ ತಿಳಿಸಿರುವಂತೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.