ಸಿದ್ದಾಪುರ, ಸೆ. ೨೧: ಮಾಲ್ದಾರೆ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ನಿನ್ನೆ ದಿನ ಸೆರೆ ಹಿಡಿಯಲ್ಪಟ್ಟ ಹುಲಿಗೆ ಅರಣ್ಯಾಧಿಕಾರಿಗಳು ಮೈಸೂರಿನ ಕೂರ್ಗಹಳ್ಳಿ ಎಂಬಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಬನ್ನೇರುಘಟ್ಟದಲ್ಲಿರುವ ಹುಲಿಗಳ ಸಂರಕ್ಷಣಾ ಕೇಂದ್ರಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ. ಮಾಲ್ದಾರೆಯ ಕಾಫಿ ತೋಟದೊಳಗೆ ಬೀಡುಬಿಟ್ಟು ಜಾನುವಾರುಗಳ ಮೇಲೆ ದಾಳಿ ನಡೆಸಿ ೫ ಜಾನುವಾರುಗಳನ್ನು ಹುಲಿ ಹೊಂದು ಹಾಕಿತ್ತು.

ಈ ಸಂದರ್ಭ ವೀರಾಜಪೇಟೆ ಎಸಿಎಫ್ ನೆಹರು, ಕುಶಾಲನಗರ ಎಸಿಎಫ್ ಗೋಪಾಲ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಉಮಾಶಂಕರ್, ರಂಜನ್ ಹಾಗೂ ಇನ್ನಿತರರು ಹಾಜರಿದ್ದರು. -ವಾಸು