ಸೋಮವಾರಪೇಟೆ, ಸೆ. ೨೧: ಪ್ರಸಕ್ತ ಸಾಲಿನಲ್ಲಿ ರೂ. ೫೦೯.೫೭ ಲಕ್ಷ ಕೃಷಿ ಮತ್ತು ಕೃಷಿಯೇತರ ಸಾಲ ವಿತರಿಸಲಾಗಿದ್ದು ರೂ. ೩.೩೦ ಲಕ್ಷ ಲಾಭ ಗಳಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ನಡೆದ ಬ್ಯಾಂಕಿನ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭ ನಷ್ಟದಲ್ಲಿದ್ದ ಬ್ಯಾಂಕ್ ಇದೀಗ ಸತತ ಎರಡು ವರ್ಷಗಳಲ್ಲಿ ಮತ್ತೆ ಪ್ರಗತಿ ಸಾಧಿಸಿದ್ದು, ಸಾಲ ವಸೂಲಾತಿಯಲ್ಲೂ ಕೂಡ ಉತ್ತಮ ಸಾಧನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬ್ಯಾಂಕಿನಲ್ಲಿ ಒಟ್ಟು ೧೯೧೯ ಪೂರ್ಣ ಪ್ರಮಾಣದ ಸದಸ್ಯರಿದ್ದು, ಷೇರು ಬಂಡವಾಳ ರೂ. ೧೪೫.೦೨ ಲಕ್ಷಗಳಿರುತ್ತದೆ. ಮುಂದೆ ರೈತರು ಮತ್ತು ಸಾರ್ವಜನಿಕರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಬ್ಯಾಂಕಿನ ಆರ್ಥಿಕ ಪ್ರಗತಿಗೆ ಸಹಕರಿಸಬೇಕೆಂದು ಈ ಸಂದರ್ಭ ಮನವಿ ಮಾಡಿದರು. ಮಹಾಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಬಿ.ಜಿ. ಹೂವಮ್ಮ, ನಿರ್ದೇಶಕರುಗಳು ಮತ್ತು ಪ್ರಭಾರ ವ್ಯವಸ್ಥಾಪಕರಾದ ಬಿ.ವಿ. ಶಿವಕುಮಾರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.