ಮಡಿಕೇರಿ, ಸೆ. ೨೧: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ (ಡಿಸಿಸಿ ಬ್ಯಾಂಕ್) ವೃತ್ತಿಪರ ನಿರ್ದೇಶಕರನ್ನಾಗಿ ಕೇಕಡ ಎಂ. ದೇವಯ್ಯ (ವಿಜು) ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ೧೯೫೯ ಕಲಂ ೨೮ ಎ (೪ಎ) ಅನ್ವಯ ಬ್ಯಾಂಕು ವೃತ್ತಿಪರ ನಿರ್ದೇಶಕರನ್ನು ಹೊಂದಬೇಕಾಗಿದೆ. ಇದರಂತೆ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕರಾದ ದೇವಯ್ಯ ಅವರನ್ನು ವೃತ್ತಿಪರ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿಕೊಳ್ಳಲು ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.