ಮುಳ್ಳೂರು, ಸೆ. ೨೧: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಶನಿವಾರಸಂತೆಯ ಇಬ್ಬರು ಸಾಧಕರನ್ನು ಗುರುತಿಸಿ ಸಾಧಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮೀಪದ ಚಿನ್ನಳ್ಳಿ ಗ್ರಾಮದಲ್ಲಿರುವ ಏರಿ ರೆಸಾರ್ಟ್ನಲ್ಲಿ ನಡೆದ ರೋಟರಿ ಕ್ಲಬಿನ ‘ನೇಷನ್ ಬಿಲ್ಡರ್ಸ್ ಅವಾರ್ಡ್’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರಾದ ಶನಿವಾರಸಂತೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ನಾಸಿರ್, ಶನಿವಾರಸಂತೆಯ ನಿವೃತ್ತ ಉಪನ್ಯಾಸಕಿ, ಕವಿಯತ್ರಿ ಹಾಗೂ ಪತ್ರಕರ್ತೆಯಾಗಿರುವ ಶ.ಗ. ನಯನತಾರ ಪ್ರಕಾಶ್ಚಂದ್ರ ಇವರುಗಳಿಗೆ ನೇಷನ್ ಬಿರ್ಲ್ಡ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ. ಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರೋಟರಿ ಕ್ಲಬ್ ವಲಯ ಸೇನಾನಿ ಎಚ್.ವಿ.ದಿವಾಕರ್ ಉದ್ಘಾಟಿಸಿ ಮಾತನಾಡಿ-ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಜೊತೆಯಲ್ಲೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನಿಯ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ಜಯಕುಮಾರ್ ಮಾತನಾಡಿ, ಸೈನಿಕ, ಶಿಕ್ಷಕ ಮತ್ತು ಕೃಷಿಕ ಈ ಮೂವರು ರಾಷ್ಟçವನ್ನು ಕಟ್ಟುವಲ್ಲಿ, ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅವರಿಗೆ ಗೌರವ ಸಲ್ಲಿಸಬೇಕೆಂದರು. ಪ್ರಶಸ್ತಿ ಸ್ವೀಕರಿಸಿದ ಸಾಧಕರಾದ ಶ.ಗ. ನಯನತಾರ ಪ್ರಕಾಶ್ಚಂದ್ರ ಮತ್ತು ಅಬ್ದುಲ್ ನಾಸಿರ್ ಮಾತನಾಡಿದರು.

ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ರೋಟರಿ ಕ್ಲಬ್ ಪ್ರಮುಖರಾದ ಚಂದ್ರಕಾAತ್, ಸೋಮಶೇಖರ್, ಮೋಹನಕುಮಾರಿ ಸೋಮಶೇಖರ್, ರೋಟರಿ ಕ್ಲಬ್ ಮಹಿಳಾ ಸದಸ್ಯರು, ರೋಟರಿ ಕ್ಲಬ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.