ವೀರಾಜಪೇಟೆ, ಸೆ. ೨೨: ಮಲಬಾರ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ, ನಿಯಮಿತ ಕಟ್ಟಡವು ನಿಯಮ ಬಾಹಿರವಾಗಿದ್ದು, ಹಿಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಒಳಪಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ, ನಿಯಮಿತ ಇದರ ವಾರ್ಷಿಕ ಮಹಾಸಭೆಯು, ವೀರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಕಂಜಿತAಡ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಮಲಬಾರ್ ರಸ್ತೆಯಲ್ಲಿರುವ ಕಟ್ಟಡವನ್ನು ಹಿಂದಿನ ಆಡಳಿತ ಮಂಡಳಿ ೨೦೧೮ರಲ್ಲಿ ಕ್ರಿಯಾಯೋಜನೆ ಮತ್ತು ಅಂದಾಜು ಪಟ್ಟಿ ಮಾಡಿಸಿ ರೂ.೨.೬೨ ಕೋಟಿಗಳಲ್ಲಿ ನಿರ್ಮಾಣ ಮಾಡುವಂತೆ ತೀರ್ಮಾನಿಸಿ, ಮಹಾಸಭೆಯಲ್ಲೂ ಅನುಮತಿ ಪಡೆದು, ಕಟ್ಟಡ ಕಾಮಾಗಾರಿ ಪೂರ್ಣಗೊಳಿಸಿ ಇಲಾಖಾ ಅನುಮತಿ ಪಡೆಯದೇ ರೂ.೧.೯೭ ಕೋಟಿಗಳನ್ನು ಹೆಚ್ಚುವರಿಯಾಗಿ ವ್ಯಯಮಾಡಿದ್ದು, ಹೆಚ್ಚುವರಿ ಹಣಕ್ಕೆ ಎಂ.ಬಿ. ಪುಸ್ತಕದಲ್ಲಿ ಯಾವುದೇ ದಾಖಲೆಗಳು ಇರುವುದಿಲ್ಲ. ಈ ವಿಚಾರದಲ್ಲಿ ಸಂಘವು ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸುವಂತೆ ಸಹಕಾರಿ ನಿಬಂಧಕರಿಗೆ ಪತ್ರ ಬರೆಯಲಾಗಿದೆ.
ಸಂಘದ ಕಟ್ಟಡದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆ ನಡೆಸಲು ಸಂಘದ ಸದಸ್ಯರಾದ ಮಾದಂಡ ಎಸ್.ಪೂವಯ್ಯ, ಚೇಂದ್ರಿಮಾಡ ಗಣೇಶ್ ನಂಜಪ್ಪ ಹಾಗೂ ಕಾಂಡAಡ ಚರ್ಮಣ ಅವರುಗಳ ಉಪಸಮಿತಿಯನ್ನು ರಚಿಸಿ ತನಿಖೆ ನಡೆಸಿದಾಗ ದಾಖಲೆಗಳಲ್ಲಿ ಲೋಪದೋಷಗಳು ಇವೆ ಎಂದು ಅವರುಗಳು ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಮಹಾಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು ಸಭೆಯಲ್ಲಿ ಹಾಜರಾದ ಸರ್ವ ಸದಸ್ಯರು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಮಹಾಸಭೆ ನಿರ್ಣಯ ಕೈಗೊಂಡಿತ್ತು.
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಜಿತAಡ ಮಂದಣ್ಣರವರು ಸಂಘದಲ್ಲಿ ಒಟ್ಟು ೨೧೧೦ ಸದಸ್ಯರಿದ್ದು, ಪಾಲು ಬಂಡವಾಳ ೮,೮೮,೦೪೯-೦೦ ಇರುತ್ತದೆ. ೨೦೨೧-೨೨ ನೇ ಸಾಲಿನಲ್ಲಿ ಒಟ್ಟು ೬೮.೯೮೬ ಕೆ.ಜಿ. ಜೇನು ಸಂಗ್ರಹಿಸಲಾಗಿದ್ದು, ಈ ಪೈಕಿ ೬೨೪೭-೯೮ ಕೆ.ಜಿ. ಜೇನನ್ನು ಸಂಸ್ಕರಿಸಿ ಮಾರಾಟ ಮಾಡಲಾಗಿದೆ. ವ್ಯಾಪಾರ ಮಳಿಗೆ, ಮನೆ ಬಾಡಿಗೆ ರೂ.೧೪,೬೦,೯೦೬-೦೦ ಜಮಾ ಆಗಿರುತ್ತದೆ. ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿರುವ ಹೂಡಿಕೆಗಳಿಂದ ೬,೭೪,೩೯೬.೩೬ ಬಡ್ಡಿ ಬಂದಿರುತ್ತದೆ. ವರದಿ ಸಾಲಿನಲ್ಲಿ ಒಟ್ಟು ೧,೬೬,೫೩,೦೭೮.೦೦ ರೂ. ಗಳ ವಹಿವಾಟು ನಡೆಸಲಾಗಿದೆ. ೨೦೨೧-೨೨ನೇ ಸಾಲಿಗೆ ರೂ.೭,೨೩,೬೩೦.೦೭ ನಿವ್ವಳ ಲಾಭ ಗಳಿಸಲಾಗಿದೆ.
ಸಂಘವು ಪ್ರಸ್ತುತ ೪ ಶಾಖೆಗಳನ್ನು ಹೊಂದಿದ್ದು, ಮುಖ್ಯ ಕಛೇರಿಯ ಶಾಖೆಯಲ್ಲಿ ರೂ.೨೧,೨೨,೧೪೩.೦೦ ವಹಿವಾಟು ನಡೆಸಿದೆ. ವೀರಾಜಪೇಟೆ ಶಾಖೆಯಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡಿ ರೂ.೨೭,೫೨,೩೯೯.೦೦ ವಹಿವಾಟು ನಡೆಸಿದೆ. ಗೋಣಿಕೊಪ್ಪ ಶಾಖೆಯಲ್ಲಿ ರೂ.೩೦,೧೭,೬೦೨.೦೦, ಮಲಬಾರ್ ರಸ್ತೆಯ ಶಾಖೆಯಲ್ಲಿ ರೂ.೨,೭೯,೪೪೬.೦೦ ವಹಿವಾಟು ನಡೆಸಲಾಗಿದೆ. ಶಾಖೆಗಳಲ್ಲಿ ಒಟ್ಟು ರೂ. ೮೧,೭೧,೫೯೦ ಗಳ ವ್ಯಾಪಾರ ನಡೆಸಿದ್ದು ಆದಾಯದಲ್ಲಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರಾದ ಕೋಡಿರ ಎಂ.ಚAಗಪ್ಪ, ಕಾದಿರ ಪಳಂಗಪ್ಪ, ಬೊಳೆಯಾಡಿರ ದೇವಯ್ಯ, ಮೊಳ್ಳೆರ ಪೂಣಚ್ಚ, ಕಾಟುಮಣಿಯಂಡ ಉಮೇಶ್, ಕೊಲ್ಲೀರ ಗೋಪಿ ಚಿಣ್ಣಪ್ಪ, ಬಾಚಮಾಡ ಸುಬ್ರಮಣಿ, ಕುಡಿಯರ ತಮ್ಮಯ್ಯ, ಕೆ.ಬಿ.ವಿಜಯನ್, ಹೆಚ್.ಪಿ.ಉದಯ, ಅಮ್ಮೇಕಂಡ ದಮಯಂತಿ, ಅಪ್ಪಚ್ಚೀರ ನೀಲಮ್ಮ, ಹೆಚ್.ಆರ್. ರಾಮಕೃಷ್ಣ, ಕುಯ್ಯಮುಡಿ ತೀರ್ಥಕುಮಾರ್ ಇವರುಗಳು ಉಪಸ್ಥಿತರಿದ್ದರು.