ಮಡಿಕೇರಿ, ಸೆ. ೨೨: ಕಾವೇರಿ ಜಾತ್ರೆ ಪ್ರಯುಕ್ತ ಅಕ್ಟೋಬರ್ ೧೪ ರಂದು ಗ್ರೀನ್ ಸಿಟಿ ಫೋರಂ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಕಳೆದ ೮ ವರ್ಷದಿಂದ ಗ್ರೀನ್ ಸಿಟಿ ಫೋರಂ ವತಿಯಿಂದ ತೀರ್ಥೋದ್ಭವಕ್ಕಿಂತ ಮುಂಚಿತವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಭಾಗಮಂಡಲದಿAದ ತಲಕಾವೇರಿವರೆಗೆ ರಸ್ತೆಬದಿ ಸ್ವಚ್ಛತಾ ಕಾರ್ಯ ನಡೆಯಲಿದೆ.

ಅ.೧೪ ರಂದು ಬೆಳಗ್ಗೆ ೧೦ ಗಂಟೆಗೆ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ. ಗ್ರೀನ್ ಸಿಟಿ ಫೋರಂ ಜತೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಲಿz್ದÁರೆ ಎಂದು ಫೋರಂ ಅಧ್ಯP್ಷÀ ಚೈಯ್ಯಂಡ ಸತ್ಯ ಗಣಪತಿ ತಿಳಿಸಿz್ದÁರೆ.