ಮಡಿಕೇರಿ, ಸೆ. ೨೨: ನಗರಸಭಾ ವ್ಯಾಪ್ತಿಯ ಕನ್ನಂಡಬಾಣೆ ಪಂಪ್‌ಹೌಸ್‌ನಿAದ ನಗರದ ವಿವಿಧೆಡೆಗೆ ಪೂರೈಕೆಯಾಗುವ ನೀರು ಕಲುಷಿತಗೊಂಡಿದ್ದು, ಸೂಕ್ತ ಕ್ರಮಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಒತ್ತಾಯಿಸಿದೆ.
ಪಂಪ್‌ಹೌಸ್‌ನ ಸುತ್ತಮುತ್ತಲಿನ ತ್ಯಾಜ್ಯ ಬಾವಿಗೆ ಹರಿದು ಹೋಗುತ್ತಿದ್ದು, ವಾತಾವರಣ ಕೂಡ ಅಶುಚಿತ್ವದಲ್ಲಿ ಕೂಡಿದೆ. ಇದರ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸಾಂಕ್ರಮಿಕ ರೋಗ ಹರಡುವ ಭೀತಿ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಗರಸಭೆ ಪೌರಾಯುಕ್ತ ವಿಜಯ ಅವರಿಗೆ ಮನವಿ ಪತ್ರವನ್ನು ಘಟಕದ ಪ್ರಮುಖರು ಸಲ್ಲಿಸಿದರು.
ಈ ಸಂದರ್ಭ ನಗರಾಧ್ಯಕ್ಷ ಕೆ.ಜಿ. ಪೀಟರ್, ಬ್ಲಾಕ್ ಅಧ್ಯಕ್ಷ ಎಂ.ಎA. ಯಾಕೂಬ್, ನಗರ ಉಪಾಧ್ಯಕ್ಷ ಫಾರೂಕ್ ಎಂ.ಇ., ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್, ಖಜಾಂಚಿ ಅಜೀಜ್ ಇದ್ದರು.