ಮಡಿಕೇರಿ, ಸೆ. ೨೩: ಇಲ್ಲಿನ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ವತಿಯಿಂದ ಚೌಡೇಶ್ವರಿ ದೇವಾಲಯದಲ್ಲಿ ೬೦ನೇ ದಸರಾ ಉತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ.
ತಾ. ೨೬ ರಿಂದ ಅಕ್ಟೋಬರ್ ೫ರ ತನಕ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದೆ. ಅ. ೩ ರಂದು ಶ್ರೀ ಶಾರದಾ ದೇವಿಯ ಪೂಜೆ ಹಾಗೂ ಅ. ೫ ರಂದು ವೈಭವೊಪೇತ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಅಮ್ಮನವರ ವಿಜಯದಶಮಿ ಉತ್ಸವವನ್ನು ಏರ್ಪಡಿಸಲಾಗಿದೆ. ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಪ್ರತಿದಿನ ಸಾಮೂಹಿಕ ದುರ್ಗಾ ಪೂಜೆಯನ್ನು ಏರ್ಪಡಿಸಲಾಗಿದೆ ಮತ್ತು ವಿಜಯದಶಮಿ ದಿವಸದಂದು ವಿದ್ಯಾರಂಭ (ಅಕ್ಷರಭ್ಯಾಸ) ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.