ಸುಂಟಿಕೊಪ್ಪ, ಸೆ: ೨೨ ನಿಲುಗಡೆಗೊಂಡಿದ್ದ ಸ್ಕೂಟರ್‌ನ ಹ್ಯಾಂಡಲ್‌ನಲ್ಲಿ ಹಾವೊಂದು ಪತ್ತೆಯಾಗಿದ್ದು, ಇದು ಭಯಕ್ಕೆ ಕಾರಣವಾಯಿತು. ತಾ. ೨೧ ರ ಮಧ್ಯಾಹ್ನ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ಪ್ರಾವಿಷನ್ ಅಂಗಡಿ ನಡೆಸುತ್ತಿರುವ ಅನಿಲ್ ಅವರ ಸ್ಕೂಟಿಯನ್ನು ಪರಿಚಿತರೊಬ್ಬರು ತೆಗೆದುಕೊಂಡು ಹೋಗಿದ್ದು, ಸಂಜೆ ವಾಪಸ್ಸು ತಂದು ನಿಲ್ಲಿಸಿದ್ದಾರೆ.

ರಾತ್ರಿ ವ್ಯಾಪಾರ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಹೋಗಿದ್ದಾರೆ. ಸ್ಕೂಟಿಯನ್ನು ನಿಲ್ಲಿಸಿ ಕೆಳಗಿಳಿಯಬೇಕೆನ್ನುವಷ್ಟರಲ್ಲಿ ಹ್ಯಾಂಡಲ್‌ನಲ್ಲಿ ಹಾವು ಗೋಚರಿಸಿದೆ. ಹ್ಯಾಂಡಲ್‌ನ ಸಂದಿನೊಳಗಿನಿAದ ಕಟ್ಟಾವಿನ ಮರಿ ತಲೆ ಹೊರಗೆ ಹಾಕಿ ಇಣುಕಿ ನೋಡುತ್ತಿತ್ತು. ತಕ್ಷಣ ಸುನಿಲ್ ಸ್ಕೂಟಿಯನ್ನು ಕೆಳಮುಖವಾಗಿ ಬಗ್ಗಿಸಿದಾಗ ಅದು ಕೆಳಗೆ ಹರಿದು ಕಣ್ಮರೆಯಾಗಿದೆ.