ಚೆಟ್ಟಳ್ಳಿ, ಸೆ. ೨೨: ಚೆಟ್ಟಳ್ಳಿಯ ಅವರ್ಸ್ ಕ್ಲಬ್ ವತಿಯಿಂದ ತಾ.೨೪ರಂದು ಮೊಟ್ಟ ಮೊದಲ ಬಾರಿಗೆ ಮಹಿಳೆಯರ ನಾಕ್‌ಔಟ್ ಕ್ರಿಕೆಟ್ ಟೂರ್ನಮೆಂಟ್ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಪೂರ್ವಾಹ್ನ ೮.೩೦ಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ. ಅಯ್ಯಪ್ಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿರುವರು. ೯.೩೫ಕ್ಕೆ ಅತಿಥಿಗಳಿಂದ ಕ್ರೀಡಾಚಾಲನೆ ನೀಡಲಾಗುವುದು.

ಕೊಡಗಿನ ೧೭ ಮಹಿಳಾ ಕ್ರಿಕೆಟ್ ತಂಡಗಳು ಭಾಗವಹಿಸಲಿದ್ದು, ಸಂಜೆ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರು ತಯಾರಿಸಿದ ವಿವಿಧ ಖಾದ್ಯ, ಕುಶಲ ವಸ್ತುಗಳ ಪ್ರದರ್ಶನ ಹಾಗು ಮಾರಾಟ ಏರ್ಪಡಿಸಲಾಗಿದೆ. ಸಂಜೆ ಡಿಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.