ಚೆಟ್ಟಳ್ಳಿ, ನ. ೨೩: ಭಾರತದಂತಹ ರಾಷ್ಟçದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಮತ್ತು ಗೌರವವಿದ್ದು, ಹೆಣ್ಣು ಕೇವಲ ಕುಟುಂಬ ನಿರ್ವಹಣೆ ಅಷ್ಟೇ ಅಲ್ಲದೆ ಎಲ್ಲ ರಂಗದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿದ್ದಾಳೆ, ಇದು ಸಂತಸದ ವಿಚಾರ ಎಂದು ಮುಲ್ಲೆಂಗಡ ಮಧೂಶ್ ಪೂವಯ್ಯ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ನಾಂದಿ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಸಹಭಾಗಿತ್ವದೊಂದಿಗೆ ಕಾಲೇಜಿನ ಐ.ಕ್ಯೂ.ಎ.ಸಿ. ಮತ್ತು ಉದ್ಯೋಗ ಕೋಶ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಒಂದು ವಾರದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೆಂಗಡ ಮಧೂಶ್ ಪೂವಯ್ಯ ಅವರು ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು, ಇಂತಹ ತರಬೇತಿ ಉದ್ಘಾಟನೆ ನಡೆಸಿದ್ದು, ಹರ್ಷ ತಂದಿದ್ದು ತರಬೇತಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ತರಬೇತಿಗೆ ಆಗಮಿಸಿರುವ ನಾಂದಿ ಫೌಂಡೇಶನ್ ತರಬೇತುದಾರರಾದ ಚಿನ್ನಿ ಅಜಯ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ಉದ್ಯೋಗವಿಲ್ಲದೆ ಸಂಕಷ್ಟದ ಸ್ಥಿತಿ ತಲುಪುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅನೇಕ ಉದ್ಯೋಗಗಳು ಖಾಲಿ ಇವೆ. ಆದರೆ ಖಾಸಗಿ ವಲಯ ಬಯಸುವ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಗೌಣವಾಗಿದೆ. ಹಾಗಾಗಿ ನೌಕರ ಮತ್ತು ಸಂಸ್ಥೆಯ ನಡುವೆ ಇರುವ ಅಂತರವನ್ನು ಹೋಗಲಾಡಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ನಾಂದಿ ಫೌಂಡೇಶನ್ ಮುಂದಾಗಿದೆ. ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡು ಉದ್ಯೋಗ ಹೊಂದುವAತೆ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ ಮಾತನಾಡಿ, ಪ್ರತಿಯೊಬ್ಬರೂ ಉದ್ಯೋಗವನ್ನು ಪಡೆದು ಸ್ವಾವಲಂಬಿಗಳಾಗಿ ರಾಷ್ಟçದ ಅಭಿವೃದ್ಧಿಗೆ ಪಾತ್ರರಾಗಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ನಿಗಮದ ಸಂಯೋಜಕ ರವಿಕುಮಾರ್, ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಸುನೀತ ಎಂ.ಎA, ಕಾಲೇಜಿನ ಉದ್ಯೋಗ ಕೋಶ ಸಮಿತಿಯ ಸಂಚಾಲಕ ರಘುರಾಜ್ ಆರ್. ಮತ್ತು ಕಾರ್ಯಕ್ರಮ ನಿರೂಪಣೆ ನಡೆಸಿದ ವಿದ್ಯಾರ್ಥಿನಿ ಪೂಜಾ ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ೯೦ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.