ಮಡಿಕೇರಿ, ಜ. ೨೫: ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ನೆಹರು ಯುವ ಕೇಂದ್ರ, ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕು ಯುವ ಒಕ್ಕೂಟ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರö್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ೧೨೬ನೇ ಜನ್ಮದಿನಾಚರಣೆ ಹಾಗೂ ನೇತಾಜಿ ಯುವಕ ಹಾಗೂ ಯುವತಿ ಮಂಡಳದ ೩೧ನೇ ವಾರ್ಷಿಕೋತ್ಸವವನ್ನು ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆಸಲಾಯಿತು.

ಉದ್ಯಮಿ ಬಿ.ಎಸ್. ಅಶ್ವಥ್, ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನೇತಾಜಿ ಯುವಕ ಸಂಘದ ಧ್ವಜಾರೋಹಣವನ್ನು ನೇತಾಜಿ ಯುವಕ ಸಂಘದ ಅಧ್ಯಕ್ಷ ಪರ್ಲಕೋಟಿ ಜೀವನ್ ನೇರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ನೇತಾಜಿ ಯುವಕ ಸಂಘದ ಅಧ್ಯಕ್ಷ ಪರ್ಲಕೋಟಿ ಜೀವನ್ ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನವೀನ ಬಿ.ಎಸ್. ಮತ್ತು ಯುವತಿ ಮಂಡಳಿ ಅಧ್ಯಕ್ಷೆ ಬಿ.ಹೆಚ್. ವಿಶಾಲಕ್ಷಿ ರೈ ಹಾಜರಿದ್ದರು.

ನಂತರ ಸಾರ್ವಜನಿಕ ಪುರುಷರ, ಮಹಿಳೆಯರ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಗುಡ್ಡಗಾಡು ಓಟ ನಡೆಸಲಾಯಿತು. ಸಾರ್ವಜನಿಕ ಪುರುಷರ ಗ್ರಾಮೀಣ ಗುಡ್ಡಗಾಡು ಓಟವನ್ನು ಅಶ್ವಥ್ ಇವರು ಉದ್ಘಾಟಿಸಿದರು. ಗ್ರಾಮೀಣ ಗುಡ್ಡಗಾಡು ಓಟದಲ್ಲಿ ಮಾಸ್ಟರ್ ಅಪ್ ಅಥ್ಲೆಟ್ ಸೂದನ ಡಾಲಿ ಭಾಗವಹಿಸಿದ್ದರು.

ಜಿಲ್ಲಾಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳನ್ನು ನಡೆಸಲಾಯಿತು. ವಾಲಿಬಾಲ್ ಪಂದ್ಯಾಟಕ್ಕೆ ಒಟ್ಟು ೧೦ ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯಾಟವನ್ನು ಶಾಸಕ ಕೆ.ಜಿ. ಬೋಪಯ್ಯ ಇವರು ಉದ್ಘಾಟಿಸಿದರು. ಫೈನಲ್ ಪಂದ್ಯದಲ್ಲಿ ಝಡ್‌ವೈಸಿ-ಎ ಕೊಟ್ಟಮುಡಿ ತಂಡವು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನೇತಾಜಿ ಯುವಕ ಸಂಘದ ಅಧ್ಯಕ್ಷ ಪರ್ಲಕೋಟಿ ಜೀವನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ಮದೆ ಗ್ರಾ.ಪಂ ಅಧ್ಯಕ್ಷ ರಾಮಯ್ಯ, ರೋಷನ್ ತಮ್ಮಯ್ಯ ಹಾಜರಿದ್ದರು. ಸಮಾರೋಪ ಭಾಷಣವನ್ನು ಬಾಲಕೃಷ್ಣ ರೈ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರು ನೀಡಿದರು.

ಇದೇ ಸಂದರ್ಭದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ಹಾಕಿ ಆಟಗಾರ್ತಿ ಚೆರಿಯಮನೆ ಆರ್. ಕುಮುದ ಇವರನ್ನು ಸನ್ಮಾನಿಸಲಾಯಿತು. ನೇತಾಜಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಬಿ.ಡಿ. ಲೋಕೇಶ್ ರೈ, ನೇತಾಜಿ ಯುವತಿ ಮಂಡಳಿ ಮಾಜಿ ಅಧ್ಯಕ್ಷೆ ಬಿ.ಈ. ಸರೋಜ ರೈ ಇವರನ್ನು ಸನ್ಮಾನಿಸಲಾಯಿತು. ನಂತರ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.