ಕುಶಾಲನಗರ, ಜ. ೨೪ : ಕುಶಾಲನಗರ ಹಾಗೂ ಹಾರಂಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಶಾಲನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಹಾರಂಗಿಗೆ ತೆರಳುವ ರಸ್ತೆಯು, ಗುಂಡಿಗಳಿAದ ಕೂಡಿದೆ. ಹಾರಂಗಿಗೆ ಆಗಮಿಸುವ ಪ್ರವಾಸಿಗರನ್ನು ಗುಂಡಿಗಳು ಸ್ವಾಗತಿಸುತ್ತಿವೆ. ಸಂಪೂರ್ಣ ಗುಂಡಿಗಳಿAದ ಕೂಡಿರುವ ಕುಶಾಲನಗರ - ಹಾರಂಗಿಯ ರಸ್ತೆಯು, ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾರಂಗಿ ಪ್ರವಾಸಿ ತಾಣ, ಕುಶಾಲನಗರದ ಕೈಗಾರಿಕಾ ಪ್ರದೇಶ, ಸುಂದರನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಲ್ಮೀಕಿ ಭವನಕ್ಕೆ ಇದೇ ರಸ್ತೆಯನ್ನು ಅವಲಂಭಿಸ ಬೇಕಾಗಿದೆ. ದಿನನಿತ್ಯ ಹಾರಂಗಿ ರಸ್ತೆಯಲ್ಲಿ ನಿರಂತರವಾಗಿ ವಾಹನಗಳ ಓಡಾಟವಿರುತ್ತದೆ. ಗುಂಡಿಮಯವಾದ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಚಾಲಕರು, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ಸಂಚರಿಸುತ್ತಿದ್ದಾರೆ.
ಅಪಘಾತಕ್ಕೆ ಕಾರಣ: ಕುಶಾಲನಗರ - ಹಾರಂಗಿ ರಸ್ತೆ ಗುಂಡಿಗಳಿAದ ಕೂಡಿರುವ ಕಾರಣ, ವಾಹನಗಳು ರಸ್ತೆ ಗುಂಡಿಗಳನ್ನು ತಪ್ಪಿಸುವ ಪ್ರಯತ್ನ ಮಾಡಿ ಅಪಘಾತಗಳು ಸಂಭವಿಸುತ್ತಿರುತ್ತಿವೆ. ದ್ವಿಚಕ್ರ ವಾಹನಗಳಂತೂ, ರಸ್ತೆಯಲ್ಲಿರುವ ಬೃಹತ್ ಗುಂಡಿಗಳಿAದ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿವೆ. ಸುಂದರನಗರ, ಚಿಕ್ಕತ್ತೂರು, ದೊಡ್ಡತ್ತೂರು, ಹುಲಗುಂದ, ಹಾರಂಗಿಗೆ ತೆರಳಲು ಆಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರೂ. ೨೫ ರಿಂದ ೩೦ ಬಾಡಿಗೆಗೆೆ ಹಣಕ್ಕೆ ಆಸೆಪಟ್ಟು, ಬಾಡಿಗೆ ಮಾಡಿದರೆ ಆಟೋಗಳನ್ನು ಗುಜರಿಗೆ ಹಾಕಬೇಕಾಗುತ್ತಿದೆ. ಸಂಚಾರಕ್ಕೆ ಯೋಗ್ಯವಾದ ರಸ್ತೆ ಮಾಡಿಕೊಡಲು ಸಾಧ್ಯವಾಗದ ಜನಪ್ರತಿನಿಧಿ
ಯಾತಕ್ಕೆ ಬೇಕು ಎಂದು ಕೆಲವು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.