‘ಸಿಐಡಿ ಅಧಿಕಾರಿಗಳು ೩ ಕೋಟಿ ಲಂಚ ಕೇಳಿದ್ದರು’
ಬೆಂಗಳೂರು, ಜ. ೨೪: ಪಿಎಸ್ಐ ನೇಮಕಾತಿ ಹಗರಣ ಸಂಬAಧ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್, ಪಿಎಸ್ಐ ಹಗರಣ ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು ಮೂರು ಕೋಟಿ ರೂಪಾಯಿ ಕೇಳಿದ್ದರು. ನಾನು ರೂ. ೭೬ ಲಕ್ಷ ಕೊಟ್ಟಿದ್ದೇನೆ ಎಂದು ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ ಎಂದು ಹೇಳಿದೆ. ಈ ಸಂಬAಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಪಾರದರ್ಶಕತೆ ಇದೇನಾ? ಎಂದು ಪ್ರಶ್ನಿಸಿದೆ. ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪಿಎಸ್ಐ ಹಗರಣ, ಸ್ಯಾಂಟ್ರೋ ರವಿ ಹಗರಣಗಳನ್ನು ಮುಚ್ಚಿಹಾಕುವುದು ನಿಶ್ಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ಅವರೇ ಹೇಳಿದ್ದರು. ಬೊಮ್ಮಾಯಿ ಅವರ ಪಾರದರ್ಶಕ, ಪ್ರಾಮಾಣಿಕ ತನಿಖೆಯ ಅಸಲಿಯತ್ತು ಈಗ ಬಯಲಾಗಿದೆ. ಸಿಎಂಗೆ ದಮ್ಮು, ತಾಕತ್ತು ಇದ್ದರೆ ಪಿಎಸ್ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ನಾಟು ನಾಟು ಹಾಡು ಆಸ್ಕರ್ಗೆ ನಾಮನಿರ್ದೇಶನ
ನವದೆಹಲಿ, ಜ. ೨೪: ಸಿನಿಮಾ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಆರ್ಆರ್ಆರ್ ಸಿನಿಮಾ ಮತ್ತೊಂದು ದಾಖಲೆ ನಿರ್ಮಿಸಿದೆ. ಚಿತ್ರದ ಬಹುಜನಪ್ರಿಯ ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ನಾಟು ನಾಟು ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್ಗೆ ನಾಮ ನಿರ್ದೇಶನಗೊಂಡಿದೆ. ಈ ವಿಭಾಗದಲ್ಲಿ ಈ ಸಿನಿಮಾ ಜೊತೆಗೆ ಟೆಲ್ ಇಟ್ ಲೈಕ್ ಎ ವುಮೆನ್ ಸಿನಿಮಾದಿಂದ ಅಪ್ಲೌಸ್ ಎಂಬ ಹಾಡು, ಟಾಪ್ ಗನ್ ಸಿನಿಮಾದಿಂದ ಹೋಲ್ಡ್ ಮೈ ಹ್ಯಾಂಡ್, ಬ್ಲಾಕ್ ಪ್ಯಾಂಥರ್ ಸಿನಿಮಾ ದಿಂದ ಲಿಫ್ಟ್ ಮೀ ಅಪ್ ಹಾಡುಗಳು ನಾಮನಿರ್ದೇಶನಗೊಂಡಿವೆ. ನಾವು ಇತಿಹಾಸ ಸೃಷ್ಟಿಸಿದ್ದೇವೆ. ನಾಟು ನಾಟು ಹಾಡು ೯೫ ನೇ ಅಕಾಡೆಮಿ ಅವಾ ರ್ಡ್ಸ್ನಲ್ಲಿ ಅತ್ಯುತ್ತಮ ಮೂಲ ಹಾಡುಗಳ ವಿಭಾಗಕ್ಕೆ ನಾಮನಿರ್ದೇಶನ ಗೊಂಡಿದೆ ಎಂದು ಸಿನಿಮಾದ ಅಧಿಕೃತ ಟ್ವೀಟ್ ಪೇಜ್ ಟ್ವೀಟ್ ಮಾಡಿದೆ.
ಫ್ಲೆöÊಓವರ್ನಿಂದ ನೋಟಿನ ಮಳೆ ಸುರಿಸಿದ ವ್ಯಕ್ತಿ
ಬೆಂಗಳೂರು, ಜ. ೨೪: ಮಂಗಳವಾರ ಬೆಳಿಗ್ಗೆ ಕೆ.ಆರ್. ಮಾರುಕಟ್ಟೆ ಫ್ಲೆöÊಓವರ್ನಿಂದ ಹಣದ ಮಳೆ ಸುರಿದಿದ್ದು, ಹತ್ತು ರೂಪಾಯಿ ನೋಟುಗಳ ಈ ಮಳೆಯಿಂದ ಜನರು ಆಶ್ಚರ್ಯಚಕಿತರಾದರೆ ಕೆಲವರು ಹಣವನ್ನು ಆಯ್ದುಕೊಳ್ಳಲು ಮುಂದಾಗಿದ್ದರು. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೆöÊಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೆöÊಓವರ್ ಮೇಲೆ ನಿಂತು ತಾನು ತಂದಿದ್ದ ರೂ. ೧೦ ನೋಟುಗಳ ರಾಶಿಯನ್ನು ಫ್ಲೆöÊಓವರ್ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿ ರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ವ್ಯಕ್ತಿಯ ವರ್ತನೆಯಿಂದ ಕೆಳಗೆ ಮಾತ್ರವಲ್ಲದೇ ಫ್ಲೆöÊಓವರ್ ಮೇಲೂ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಈ ವ್ಯಕ್ತಿ ಹಣ ಎರಚುತ್ತಿರುವ ವೀಡಿಯೋಗಳು ವ್ಯಾಪಕ ವೈರಲ್ ಆಗಿದ್ದು, ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ವ್ಯಕ್ತಿ ಫ್ಲೆöÊಓವರ್ ಮೇಲಿಂದ ರೂ. ೧೦ ನೋಟುಗಳಿರುವ ಸುಮಾರು ೩ ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ವೀಡಿಯೋದಲ್ಲಿ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬೇಕಾಬಿಟ್ಟಿ ಹಣ ಎಸೆದು ಹೋದ ವ್ಯಕ್ತಿ ನಾಗರಬಾವಿಯ ನಿವಾಸಿ ಅರುಣ್ ಆಗಿದ್ದು, ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಅರುಣ್, ಅರುಣ್ ವಿ ಡಾಟ್ ೯ ಇವೆಂಟ್ನ ಸಿಇಓ ಆಗಿದ್ದಾನೆ. ಪೊಲೀಸರು ಅರುಣ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಿದ್ದು ಯಾಕೆ ಅನ್ನೋ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದಾರೆ.
ಮಾದಕ ದ್ರವ್ಯ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ
ಮಂಗಳೂರು, ಜ. ೨೪: ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ಪ್ರಕರಣದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ ಹಲವು ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಅವೈಜ್ಞಾನಿಕ ಹಾಗೂ ಕಾನೂನು ಆಧಾರ ರಹಿತವಾಗಿ ತನಿಖೆ ನಡೆಸಲಾಗಿದೆ ಎಂದು ಆರೋಪಿಸಿರುವ ವಿಧಿ ವಿಜ್ಞಾನ ತಜ್ಞ ಡಾ. ಮಹಾಬಲ ಶೆಟ್ಟಿ ಮತ್ತು ಹಿರಿಯ ವಕೀಲ ಮನೋರಾಜ್ ರಾಜೀವ, ಹೈಕೋರ್ಟ್ ಮಧ್ಯ ಪ್ರವೇಶಿಸ ಬೇಕು ಮತ್ತು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ. ಇಲ್ಲವಾದರೆ ತಾವು ಮನವಿ ಮಾಡಿರುವಂತೆ ಪ್ರಕರಣದ ತನಿಖೆಯಲ್ಲಿ ಮೇಲ್ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಮಾದಕ ವ್ಯಸನಿಗಳನ್ನು ಡ್ರಗ್ ಪೆಡ್ಲರ್ಗಳೆಂದು ಪರಿಗಣಿಸಲು ಲಭ್ಯವಿರುವ ಸಾಕ್ಷಿಗಳ ಬಗ್ಗೆ ಗಂಭೀರವಾದ ಅನುಮಾನವಿದೆ. ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷಿ ಆಧಾರಗಳಿಲ್ಲ ಅನ್ನಿಸುತ್ತಿದ್ದು, ತನಿಖೆ ಕಳಪೆ, ಅವೈಜ್ಞಾನಿಕ ಮತ್ತು ಕಾನೂನು ಆಧಾರ ರಹಿತವಾಗಿದೆ ಎಂದು ಎಂದು ಶೆಟ್ಟಿ ಮತ್ತು ರಾಜೀವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಡ್ಯ ಉಸ್ತುವಾರಿ ಸಚಿವರಾಗಿ ಆರ್. ಅಶೋಕ್
ಬೆಂಗಳೂರು, ಜ. ೨೪: ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಸರ್ಕಾರ, ಈಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಂದಾಯ ಸಚಿವ ಆರ್. ಅಶೋಕ ಅವರನ್ನು ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಈ ಹಿಂದೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈಗ ಚುನಾವಣೆ ಇನ್ನು ಎರಡು ತಿಂಗಳು ಬಾಕಿ ಇರುವಾಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನಿಯೋಜನೆ ಮಾಡಿದೆ.