ಮಡಿಕೇರಿ, ಜ. ೨೫: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ತಾ.ಪಂ. ಕ್ಷೇತ್ರಗಳಿಗೆ ಸದಸ್ಯರ ಸಂಖ್ಯೆ ಹಾಗೂ ಸೀಮಾ/ಗಡಿ ನಿಗದಿಪಡಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಮೂರು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಜನವರಿ ೨ ರಂದು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಹೊಸ ಬದಲಾವಣೆಯನ್ನು ಪ್ರಕಟಿಸಿ ಈ ಬಗ್ಗೆ ಆಕ್ಷೇಪಣೆಗೆ ಜ. ೧೬ರ ವರೆಗೆ ಅವಕಾಶ ನೀಡಿತ್ತು.

ಸೀಮಾ ನಿರ್ಣಯ ಆಯೋಗದ ಹೊಸ ಪ್ರಕಟಣೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಜಿಲ್ಲಾ ಪಂಚಾಯಿತಿಯ ೨೯ ಕ್ಷೇತ್ರಗಳ ಬದಲಿಗೆ ೪ ಸ್ಥಾನ ಕಡಿತಗೊಂಡು ಇದು ೨೫ ಸದಸ್ಯ ಸ್ಥಾನಕ್ಕೆ ನಿಗದಿಯಾಗಿದೆ.

ತಾ.ಪಂ. ಕ್ಷೇತ್ರಗಳಲ್ಲೂ ಬದಲಾವಣೆಯಾಗಲಿದೆ. ಈ ಬದಲಾವಣೆ ಕುರಿತಾಗಿ ಕಾಂಗ್ರೆಸ್ ಪಕ್ಷದಿಂದ ಒಂದು ಹಾಗೂ ಸೋಮವಾರಪೇಟೆಯ ಗಣಪತಿ ಎಂಬವರಿAದ ಎರಡು ಸೇರಿದಂತೆ ಒಟ್ಟು ಮೂರು ಆಕ್ಷೇಪಣೆಗಳು ಸಲ್ಲಿಸಲ್ಪಟ್ಟಿವೆ. ಈ ಬಗ್ಗೆ ಇನ್ನಷ್ಟೆ ಅಂತಿಮ ನಿರ್ಧಾರವಾಗಬೇಕಿದೆ.