ಸೋಮವಾರಪೇಟೆ, ಜ. ೨೫: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾ. ೨೮ ರಂದು ದೊಡ್ಡಮಳ್ತೆ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಹೊನ್ನಮ್ಮನ ಕೆರೆಯ ದಂಡೆಯ ಮೇಲೆ ೭ನೇ ವರ್ಷದ ರಥ ಸಪ್ತಮಿ ಹಾಗೂ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೬ ಗಂಟೆಯಿAದ ೧೦೮ ಸೂರ್ಯ ನಮಸ್ಕಾರಗಳೊಂದಿಗೆ ಧ್ಯಾನ ಹಾಗೂ ಹೊನ್ನಮ್ಮ ದೇವಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.