ಮಡಿಕೇರಿ, ಜ. ೨೪: ಕೊಡಗಿನ ಹೆಸರಾಂತ ಹಾಡುಗಾರ, ದಿ. ಮುಲ್ಲೇರ ಜಿಮ್ಮಿ ಅಯ್ಯಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಆನ್‌ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿದೆ.
ತಾ. ೩೧ ರಂದು ಸಂಜೆ ೭ ಗಂಟೆಗೆ ಗೂಗಲ್ ಮೀಟ್ ವೆಬಿನಾರ್‌ನಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು. ಕವನವು ಐಚಿಕ ವಿಷಯಾ ಧಾರಿತ ಕೊಡವ ಭಾಷೆಯಲ್ಲಿರಬೇಕು. ೨೪ ಗೆರೆಗಳು ಮೀರಬಾರದು. ಜಾತಿ, ಧರ್ಮ, ಲಿಂಗ, ವಯಸ್ಸಿನ ನಿರ್ಬಂಧವಿಲ್ಲದೆ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ತಾ. ೨೫ ರೊಳಗಾಗಿ, ಕವಿಗೋಷ್ಠಿ ಸಂಚಾಲಕ ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಅವರ ಮೊಬೈಲ್ ಸಂಖ್ಯೆ ೯೪೪೯೨೫೪೩೪೯ಗೆ ವಾಟ್ಸಪ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮದಲ್ಲಿ ಕವನ ವಾಚಿಸುವ ಪ್ರತಿಯೊಬ್ಬರಿಗೂ ಆನ್‌ಲೈನ್ ಪ್ರಶಂಸಾ ಪತ್ರ ವಿತರಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ಕೋರಿದೆ.