ಮಡಿಕೇರಿ, ಜ. ೨೫: ಮಡಿಕೇರಿಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ನೂತನ ಅಧ್ಯಕ್ಷರಾಗಿ ಹೊದ್ದೂರು ಗ್ರಾಮದ ನ್ಯೂ ಇಂಡಿಯಾ ಅಸ್ಯೂರೆನ್ಸ್ನ ಸಿಬ್ಬಂದಿಯಾಗಿರುವ ಎ.ಎ. ಅಯ್ಯಣ್ಣ (ಮನು) ಅವರು ಆಯ್ಕೆಗೊಂಡಿ ದ್ದಾರೆ.
ಇವರು ಸೇರಿದಂತೆ ಇತರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದಲ್ಲಿ ನಡೆಯಿತು. ಅಧ್ಯಕ್ಷ ಎ.ಎ. ಅಯ್ಯಣ್ಣ ಅವರೊಂದಿಗೆ ಉಪಾಧ್ಯಕ್ಷರಾಗಿ ಕೆ.ಬಿ. ವಿಜಯಕುಮಾರ್, ಪಿ.ಕೆ. ನಾಗೇಶ್, ಕಾರ್ಯಾಧ್ಯಕ್ಷರಾಗಿ ಬಿ.ಎಂ. ರಾಜಶೇಖರ್, ಖಜಾಂಚಿಯಾಗಿ ಕೆ.ಎಂ. ರವೀಂದ್ರನ್, ಸಂಘಟನಾ ಕಾರ್ಯದರ್ಶಿಯಾಗಿ ಡಿ.ಪಿ. ದಯಾನಂದ ಹಾಗೂ ೯ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಬಳಿಕ ಅಯ್ಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿ ಗಳು ಹಾಗೂ ಘಟಕದ ಸದಸ್ಯರು ಹಾಜರಿ ದ್ದರು. ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸ ಲಾಯಿತು.
ಮುಂದಿನ ದಿನದಲ್ಲಿ ನರಿಮಲೆ, ಪಕ್ಷಿಪಾತಾಳಕ್ಕೆ ಚಾರಣ ಆಯೋಜಿಸಲು ತೀರ್ಮಾನಿಸಲಾ ಯಿತು. ೨೦೧೮ರಿಂದ ಚಾರಣ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದನ್ನು ಮತ್ತೆ ಮುಂದುವರಿಸಿ ಯೂತ್ ಹಾಸ್ಟೆಲ್ ಮಡಿಕೇರಿ ಘಟಕದ ಬೆಳವಣಿಗೆಗೆ ಶ್ರಮಿಸುವುದಾಗಿ ಅಧ್ಯಕ್ಷರು ಹೇಳಿದರು. ಸಹಕಾರ್ಯದರ್ಶಿ ಎಂ.ಕೆ. ಮನೋಹರ್ ವಂದಿಸಿದರು.