ವೀರಾಜಪೇಟೆ, ಜ. ೨೪: ಹುಲಿ ದಾಳಿಗೆ ಹಾಲು ನೀಡುತಿದ್ದ ಹಸು ಬಲಿಯಾದ ಘಟನೆ ಕಿರುಮಕ್ಕಿ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.

ಆರ್ಜಿ ಗ್ರಾಮದ ಕಿರುಮಕ್ಕಿ ನಿವಾಸಿ ಹೆಚ್.ಪಿ. ಲವ ಎಂಬವರಿಗೆ ಸೇರಿದ ಹಸು ಹುಲಿ ದಾಳಿಯಿಂದ ಮೃತಪಟ್ಟಿದೆ. ತಾ. ೨೩ ರಂದು ಸಂಜೆ ವೇಳೆಗೆ ಹಾಲು ಕರೆದು ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಿಂದಿರುಗಿದ್ದು, ಮರುದಿನ ಮುಂಜಾನೆ ಎಂದಿನAತೆ ಹಾಲು ಕರೆಯುವ ಸಲುವಾಗಿ ಕೊಟ್ಟಿಗೆ ಬಳಿ ತೆರಳಿದಾಗ ಹಸು ಕಾಣೆಯಾಗಿತ್ತು. ಬಳಿಕ ಹುಡುಕಾಡಿದಾಗ ಗುಡ್ಡಂಡ ನರೇಶ್ ಎಂಬವರ ಗದ್ದೆಯಲ್ಲಿ ಹಸುವಿನ ಮೃತ ದೇಹ ಪತ್ತೆಯಾಗಿದೆ ಎಂದು ಲವ ಅವರು ನೀಡಿರುವ ದೂರಿನ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯ ಇಲಾಖೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.