ಮಡಿಕೇರಿ, ಜ. ೨೫: ೧೧ನೇ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾ. ೨೮ ರಂದು ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬೆಕಲ್ ನವೀನ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಅಂದು ಬೆಳಿಗ್ಗೆ ೮ ಗಂಟೆಗೆ ರಾಷ್ಟç ಧ್ವಜಾರೋಹಣವನ್ನು ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವಕಾಮತ್, ಕನ್ನಡ ಧ್ವಜಾರೋಹಣವನ್ನು ಅಂಬೆಕಲ್ ನವೀನ್ ಇವರುಗಳು ನೆರವೇರಿಸಲಿದ್ದಾರೆ. ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆ ಮಕ್ಕಳಿಂದ ರಾಷ್ಟçಗೀತೆ ಗಾಯನ, ನಾಪೋಕ್ಲು ಕೆಪಿಎಸ್ ಶಾಲಾ ಮಕ್ಕಳಿಂದ ನಾಡಗೀತೆ ಗಾಯನ ನಡೆಯಲಿದೆ. ೮.೩೦ ಗಂಟೆಗೆ ದ್ವಾರಗಳ ಉದ್ಘಾಟನೆ ನೆರವೇರಲಿದ್ದು, ಹೊಸೂರು ಜೋಯಪ್ಪ ದ್ವಾರವನ್ನು ಡಿಸಿಸಿ ಬ್ಯಾಂಕ್ ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ತೋರೇರ ಎಂ. ಮುದ್ದಯ್ಯ, ಕೆ.ಸಿ. ರಾಮಮೂರ್ತಿ ಮತ್ತು ಚೌರೀರ ಎಂ. ಪೆಮ್ಮಯ್ಯ ದ್ವಾರವನ್ನು ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ದ್ವಾರವನ್ನು ಉದಯ ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷ ಕೊಡಪಾಲು ಎಸ್. ಗಣಪತಿ, ಫೀ.ಮಾ. ಕೆ.ಎಂ. ಕಾರ್ಯಪ್ಪ ದ್ವಾರವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಕೆ.ಟಿ. ಬೇಬಿಮ್ಯಾಥ್ಯು ಇವರುಗಳು ಉದ್ಘಾಟನೆ ಮಾಡಲಿದ್ದಾರೆ.
ನಂತರ ಕಲಾತಂಡಗಳ ಉದ್ಘಾಟನೆ ನಡೆಯಲಿದ್ದು, ಬೆಟ್ಟಗೇರಿ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ವರ್ತಕರಾದ ಪಿ.ಎ. ಹಮೀದ್, ಕಾಫಿ ಬೆಳೆಗಾರ ಸಿ.ಕೆ. ಸೋಮಣ್ಣ ಹಾಗೂ ಬೆಟ್ಟಗೇರಿ ಗ್ರಾ.ಪಂ. ಸದಸ್ಯರುಗಳು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ೯.೪೫ ಗಂಟೆಗೆ ಸಮ್ಮೇಳನಾಧ್ಯಕ್ಷರಾದ ಹಂಪಿ ಕನ್ನಡ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯ ಪೂಣಚ್ಚ ತಂಬAಡ ಇವರ ಮೆರವಣಿಗೆ ವಿವಿಧ ಕಲಾ ತಂಡಗಳನ್ನು ಒಳಗೊಂಡು ಬೆಟ್ಟಗೇರಿ ನಾಪೋಕ್ಲು ಕೂಡು ರಸ್ತೆಯಿಂದ ವೇದಿಕೆಯವರೆಗೆ ನಡೆಯಲಿದೆ.
ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮದೆನಾಡು ಗ್ರಾ.ಪಂ. ಅಧ್ಯಕ್ಷ ನಡುಗಲ್ಲು ಕುಮಾರ್, ಮೇಕೇರಿ ಗ್ರಾ.ಪಂ. ಅಧ್ಯಕ್ಷ ಬಿ. ದಿನೇಶ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷೆ ಪಮಿತಾ ಮತ್ತಿತರರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ ಪುಸ್ತಕ ಮಳಿಗೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಟಿ. ಮಂಜುನಾಥ್, ಮಳಿಗೆಗಳ ಉದ್ಘಾಟನೆಯನ್ನು ಅಬಕಾರಿ ಇಲಾಖೆ ಅಧೀಕ್ಷಕರಾದ ಜಗದೀಶ್ ನಾಯಕ್, ತಹಶೀಲ್ದಾರ್ ಮಹೇಶ್ ಉದ್ಘಾಟನೆ ಮಾಡಲಿದ್ದಾರೆ. ನೀರ್ಕಜೆ ಮಹಾಬಲೇಶ್ವರ ಭಟ್ ಸಭಾಂಗಣವನ್ನು ಮಾಜಿ ಸೈನಿಕ ಬೊಳ್ಳಿಯಂಡ ಎಸ್. ಗಣೇಶ್, ಡಾ. ಕೋಡಿ ಕುಶಾಲಪ್ಪ ಗೌಡ ವೇದಿಕೆಯನ್ನು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಕೆ. ಅಪ್ಪಣ್ಣ ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ ೧೦.೩೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗಾನಕಾವೇರಿ ತಂಡ ನಾಡಗೀತೆ, ಶ್ರೀರಕ್ಷಾ ಪ್ರಭಾಕರ್ ತಂಡ ರೈತಗೀತೆ ಹಾಡಲಿದೆ. ಉದ್ಘಾಟನೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದು, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಆಶಯನುಡಿಗಳನ್ನಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರ ಭಾಷಣವನ್ನು ಡಾ. ವಿಜಯ ಪೂಣಚ್ಚ ತಂಬAಡ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಬಿಡುಗಡೆ ಮಾಡಲಿದ್ದಾರೆ.
ಅತಿಥಿಗಳಾಗಿ ಶಾಸಕರುಗಳಾದ ಅಪ್ಪಚ್ಚುರಂಜನ್, ಸುಜಾ ಕುಶಾಲಪ್ಪ, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮತ್ತಿರರರು ಪಾಲ್ಗೊಳ್ಳಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಲಿದ್ದಾರೆ.
೨೦೨೧-೨೨ನೇ ಸಾಲಿನಲ್ಲಿ ಹತ್ತನೆ ತರಗತಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಮಧ್ಯಾಹ್ನ ೧೨.೩೦ ರಿಂದ ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ೨ ಗಂಟೆಗೆ ಸಾಹಿತ್ಯಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಜವಾಹರ್ ನವೋದಯ ವಿದ್ಯಾಲಯದ ಅಧ್ಯಾಪಕರಾದ ಸಾಹಿತಿ ಮಾರುತಿ ದಾಸಣ್ಣನವರ್ ವಹಿಸಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಆಶಯನುಡಿಗಳನ್ನಾಡಲಿದ್ದಾರೆ.
ಯುವ ಪೀಳಿಗೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಭಾಗಮಂಡಲ ಕಾವೇರಿ ಪ.ಪೂ. ಕಾಲೇಜು ಉಪನ್ಯಾಸಕ ವಿ.ವಿ. ಶಿವಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ ವಿಷಯದ ಕುರಿತು ಕೂಡಿಗೆ ಕ್ರೀಡಾ ರೈತಗೀತೆ ಹಾಡಲಿದೆ. ಉದ್ಘಾಟನೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದು, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಆಶಯನುಡಿಗಳನ್ನಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರ ಭಾಷಣವನ್ನು ಡಾ. ವಿಜಯ ಪೂಣಚ್ಚ ತಂಬAಡ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಬಿಡುಗಡೆ ಮಾಡಲಿದ್ದಾರೆ.
ಅತಿಥಿಗಳಾಗಿ ಶಾಸಕರುಗಳಾದ ಅಪ್ಪಚ್ಚುರಂಜನ್, ಸುಜಾ ಕುಶಾಲಪ್ಪ, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮತ್ತಿರರರು ಪಾಲ್ಗೊಳ್ಳಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಲಿದ್ದಾರೆ.
೨೦೨೧-೨೨ನೇ ಸಾಲಿನಲ್ಲಿ ಹತ್ತನೆ ತರಗತಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಮಧ್ಯಾಹ್ನ ೧೨.೩೦ ರಿಂದ ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ೨ ಗಂಟೆಗೆ ಸಾಹಿತ್ಯಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಜವಾಹರ್ ನವೋದಯ ವಿದ್ಯಾಲಯದ ಅಧ್ಯಾಪಕರಾದ ಸಾಹಿತಿ ಮಾರುತಿ ದಾಸಣ್ಣನವರ್ ವಹಿಸಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಆಶಯನುಡಿಗಳನ್ನಾಡಲಿದ್ದಾರೆ.
ಯುವ ಪೀಳಿಗೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಭಾಗಮಂಡಲ ಕಾವೇರಿ ಪ.ಪೂ. ಕಾಲೇಜು ಉಪನ್ಯಾಸಕ ವಿ.ವಿ. ಶಿವಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ ವಿಷಯದ ಕುರಿತು ಕೂಡಿಗೆ ಕ್ರೀಡಾ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಕೊಂಬಾರನ ಕುಂತಿ ಬೋಪಯ್ಯ, ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ವಿಷಯದ ಕುರಿತು ಸುಳ್ಯ ಶಾರದ ಮಹಿಳಾ ಪ.ಪೂ. ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕರಾದ ತಳೂರು ಸ್ವರ್ಣ ಕಿಶೋರ್ ಉಪನ್ಯಾಸ ನೀಡಲಿದ್ದಾರೆ.
೩ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಮಡಿಕೇರಿ ಸಂತಜೋಸೆಫರ ಪ.ಪೂ. ಕಾಲೇಜಿನ ಉಪನ್ಯಾಸಕಿ ಕೆ. ಜಯಲಕ್ಷಿö್ಮ ಆಶಯನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸೋಮವಾರಪೇಟೆ ಪ.ಪೂ. ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶಿವದೇವಿ ಅವನಿಶ್ಚಂದ್ರ ವಹಿಸಲಿದ್ದಾರೆ. ಸುಮಾರು ೧೩ ಕವಿಗಳು ಭಾಗವಹಿಸಲಿದ್ದಾರೆ. ಸಂಜೆ ೪ ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು, ಅಂಬೆಕಲ್ ನವೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್ ನಿರ್ಣಯ ಮಂಡನೆ ಮಾಡಲಿದ್ದಾರೆ. ಸಂಜೆ ೪.೩೦ ಗಂಟೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಬಾರಿಯಂಡ ಆರ್. ಜೋಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸನ್ಮಾನ ನೆರವೇರಿಸಲಿದ್ದಾರೆ. ಕೃಷಿ ಕ್ಷೇತ್ರದಿಂದ ತೆನ್ನೀರ ಗಣೇಶ್, ಸಾಹಿತ್ಯ ಕ್ಷೇತ್ರದಿಂದ ಡಾ. ಕುಶ್ವಂತ್ ಕೋಳಿಬೈಲು, ಮಕ್ಕಳ ಪಾಲನೆಗೆ ಅಂಗನವಾಡಿ ಕಾರ್ಯಕರ್ತೆ ಬಿ.ಎಂ. ಪುಷ್ಪಾವತಿ, ನಾಟಿ ವೈದ್ಯೆ ಪರಿಚನ ವಿಮಲ ವಾಸುದೇವ್, ಕ್ರೀಡೆಯಲ್ಲಿ ಸೂದನ ಡಾಲಿ, ಸಮಾಜ ಸೇವೆಯಲ್ಲಿ ತನಲ್ ಸಂಸ್ಥೆ, ಜಾನಪದದಲ್ಲಿ ಪುಟ್ಟು, ದೈವ ನರ್ತನದಲ್ಲಿ ಕೇಶವ ಪರೆವ, ಯೋಗದಲ್ಲಿ ಮುಕ್ಕಾಟಿ ದಿವ್ಯ, ಕ್ರೀಡೆನೃತ್ಯದಲ್ಲಿ ಬಿ.ಎಸ್. ಜೀಷ್ಮಾ, ತಂತ್ರಜ್ಞಾನದಲ್ಲಿ ನೀರ್ಕಜೆ ಕೆ.ಆಕಾಶ್, ಶಿಕ್ಷಣದಲ್ಲಿ ಎನ್.ಎ. ಪೊನ್ನಮ್ಮ, ತೋಟಗಾರಿಕೆಯಲ್ಲಿ ಸುಧೀರ್ ಮಕ್ಕಿಮನೆ, ಕರಕುಶಲದಲ್ಲಿ ಕುಟ್ಟೇರಿರ ಕಾವೇರಿಯಪ್ಪ, ಸೇನೆ ಕ್ಷೇತ್ರದಲ್ಲಿ ಗೋವಿಂದಮ್ಮನ ಕೆ. ಮುತ್ತಪ್ಪ ಇವರುಗಳನ್ನು ಸನ್ಮಾನಿಸಲಾಗುತ್ತದೆ.
ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಅಂಬೆಕಲ್ ನವೀನ್ ಅಧ್ಯಕ್ಷತೆಯಲ್ಲಿ ಡಾ. ವಿಜಯ ಪೂಣಚ್ಚ ತಂಬAಡ ಆಶಯ ನುಡಿಗಳನ್ನಾಡಲಿದ್ದಾರೆ. ರಾಷ್ಟç ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ.ಆರ್. ಗಂಗಾಧರ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಡಿವೈಎಸ್ಪಿ ಗಜೇಂದ್ರಪ್ರಸಾದ್ ಉದ್ಘಾಟಿಸಲಿದ್ದಾರೆ. ಜಿ.ಪಂ. ಮಾಜಿ ಉಪಾಧ್ಯಕ್ಷೆ ಬೀನಾ ಬೊಳ್ಳಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕಸಾಪ ಗೌರವ ಕಾರ್ಯದರ್ಶಿ ಶ್ವೇತಾರವೀಂದ್ರ, ಬೆಟ್ಟಗೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ. ಉದಯ, ಪತ್ರಕರ್ತ ಪಿ.ವಿ. ಪ್ರಭಾಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅಂಬೆಕಲ್ ನವೀನ್ ವಿವರಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಬೆಟ್ಟಗೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಾಹಿತ್ಯಾಸಕ್ತರು ಇರುವ ಹಿನ್ನೆಲೆಯಲ್ಲಿ ಅಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು. ಸಮ್ಮೇಳನಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಉದಯ ವಿದ್ಯಾಸಂಸ್ಥೆ ಅಧ್ಯಕ್ಷ ತಳೂರು ಕಿಶೋರ್ಕುಮಾರ್ ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮ್ಮೇಳನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕೆ.ಯು. ರಂಜಿತ್, ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು.