ನಾಪೋಕ್ಲು, ಮಾ. ೧೭: ತಾ. ೧೮ ರಿಂದ (ಇಂದಿನಿAದ) ೨೩ನೇ ವರ್ಷದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಸಾರಥ್ಯದಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
೩ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾಟಕ್ಕೆ ವೀಕ್ಷಕ ಗ್ಯಾಲರಿ ಸೇರಿದಂತೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅಪ್ಪಚೆಟ್ಟೋಳಂಡ ಹಾಕಿ ಕಪ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ನಾಪೋಕ್ಲು, ಮಾ. ೧೭: ತಾ. ೧೮ ರಿಂದ (ಇಂದಿನಿAದ) ೨೩ನೇ ವರ್ಷದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಸಾರಥ್ಯದಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
೩ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾಟಕ್ಕೆ ವೀಕ್ಷಕ ಗ್ಯಾಲರಿ ಸೇರಿದಂತೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅಪ್ಪಚೆಟ್ಟೋಳಂಡ ಹಾಕಿ ಕಪ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಈ ಬಾರಿಯ ಹಾಕಿ ನಮ್ಮೆಯಲ್ಲಿ ೩೩೬ ತಂಡಗಳು ಭಾಗವಹಿಸುವುದರ ಮೂಲಕ ವಿಶ್ವ ದಾಖಲೆ ಸೃಷ್ಟಿಯಾಗಲಿದೆ. ಪ್ರತೀ ದಿನ ೩ ಮೈದಾನದಲ್ಲಿ ೨೧ ಪಂದ್ಯಾಟಗಳು ನಡೆಯಲಿವೆ. ಹಾಕಿ ನಮ್ಮೆಯ ಒಟ್ಟು ಖರ್ಚು ರೂ. ೧.೫೦ ರಿಂದ ೨ ಕೋಟಿ ಆಗಲಿದೆ ಎಂದು ಮಾಹಿತಿ ನೀಡಿದರು.
೨೫ ಯುವಕರ ಉತ್ತಮ ತಂಡವನ್ನು
(ಮೊದಲ ಪುಟದಿಂದ) ಆಯ್ಕೆ ಮಾಡಲು ಉದ್ದೇಶಿಸಲಾಗಿದ್ದು, ಅವರಿಗೆ ಸಕಲ ತರಬೇತಿ ನೀಡುವುದರ ಮೂಲಕ ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದರು.
ಕೊಡವ ಹಾಕಿ ನಮ್ಮೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡಲಿದ್ದು, ಸರಕಾರದಿಂದ ರೂ. ೧ ಕೋಟಿ ಬಿಡುಗಡೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊಡವ ಹಾಕಿ ನಮ್ಮೆಯ ವ್ಯವಸ್ಥೆಗಳನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ, ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ, ಚೆಯ್ಯಂಡ ಸತ್ಯ ಗಣಪತಿ ಪರಿಶೀಲಿಸಿದರು.
ನಂತರ ಮಾತನಾಡಿದ ಪಾಂಡAಡ ಬೋಪಣ್ಣ, ನಾಲ್ಕು ವರ್ಷಗಳ ನಂತರ ಆರಂಭಗೊAಡ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ೩೩೬ ತಂಡಗಳು ಪಾಲ್ಗೊಳ್ಳುವುದರ ಮೂಲಕ ದಾಖಲೆ ಸೃಷ್ಟಿಯಾಗಿದೆ. ಅಪ್ಪಚೆಟ್ಟೋಳಂಡ ಕುಟುಂಬಸ್ಥರು ನಿರಂತರವಾಗಿ ಶ್ರಮ ವಹಿಸಿ ಹಾಕಿ ನಮ್ಮೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಹಾಕಿ ನಮ್ಮೆಗೆ ಕೊಡವ ಹಾಕಿ ಅಕಾಡೆಮಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
-ಪಿ.ವಿ.ಪ್ರಭಾಕರ್