ಕುಶಾಲನಗರ, ಮಾ. ೧೭: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ನಡೆದ ಶುದ್ಧ ಶಕ್ತಿ ಪರಿವರ್ತನೆ ವಿಷಯದ ಅಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ ಉದ್ಘಾಟಿಸಿ ಮಾತನಾಡಿದರು. ಅನುಚಿತ ವ್ಯಾಪಾರ ಪದ್ಧತಿ ತಡೆಗಟ್ಟುವಲ್ಲಿ ಗ್ರಾಹಕರು ಎಚ್ಚರ ವಹಿಸಬೇಕು. ವಸ್ತುಗಳ ನ್ಯೂನತೆ ತೊಂದರೆ ಬಗ್ಗೆ ಪರಿಹಾರ ಕಂಡುಕೊಳ್ಳುವುದು ಗ್ರಾಹಕರ ಹಕ್ಕು ಆಗಿದೆ ಎಂದರು. ಪ್ರತಿಯೊಬ್ಬ ಗ್ರಾಹಕರು ಕಾಯ್ದೆಯ ಸದ್ಬಳಕೆ ಮಾಡುವಂತಾಗಬೇಕು ಎಂದು ಕರೆ ನೀಡಿದರು. ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕೊಡಗು ಜಿಲ್ಲಾಧ್ಯಕ್ಷರಾದ ರೇಣುಕಾಂಬ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ. ಚಂಗಪ್ಪ, ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸತೀಶ್ ಕಾಳೇಗೌಡ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್, ತೂಕ ಅಳತೆ ಮತ್ತು ಕಾನೂನು ಮಾಪನಶಾಸ್ತç ಇಲಾಖೆಯ ಸಹಾಯಕ ನಿಬಂಧಕ ಡಿ.ಆರ್. ಲಿಂಗರಾಜು ಉಪಸ್ಥಿರಿದ್ದು ಮಾತನಾಡಿದರು.
ಗ್ರಾಹಕರ ವೇದಿಕೆಯ ಪ್ರಮುಖರಾದ ಗಿರೀಶ್, ನವೀನ್ ಮತ್ತಿತರರು ಇದ್ದರು.