ಕೊಡವ ಜನಾಂಗ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟನೆ ಮಾಡಿ ‘ಕೊಡವ ಮಾಜನಕ್ ನಾಡ ತಕ್ಕಾರ ಬಯಂದವಿ’ ಎಂದು ಕೊಡವ ಭಾಷೆಯಲ್ಲಿ ಮಾತು ಆರಂಭಿಸಿದ ಮುಖ್ಯಮಂತ್ರಿಗಳು, ಕೊಡಗಿನವರು ಅದ್ಭುತ, ಸುಂದರ, ಹೃದಯ ಇರುವಂತಹ ಜನರು, ದೈಹಿಕ ಶಕ್ತಿ ಇರುವ, ಆಟವಾಡುವ ನೈಪುಣ್ಯತೆ ಇರುವ ಜನ. ಇಡೀ ಭಾರತ ದೇಶವನ್ನು ಕಾಯುವ ಸ್ಫೂರ್ತಿ ಇರುವ ಜನರಾಗಿದ್ದಾರೆ. ನಿಮ್ಮ ಶ್ರೇಯೋಭಿವೃದ್ಧಿ ನಮ್ಮ ಕರ್ತವ್ಯ. ಕೊಡವ ಅಭಿವೃದ್ಧಿ ನಿಗಮ ಆಗಬೇಕೆಂಬುದು ಬಹಳ ದಿನಗಳ ಬೇಡಿಕೆ. ಆದಷ್ಟು ಬೇಗ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸುವುದಾಗಿ ಘೋಷಣೆ ಮಾಡಿದರು.
ವಿಶೇಷ ಕ್ರೀಡಾಕೂಟ: ಈ ಹಾಕಿ ಕ್ರೀಡಾಕೂಟ ವಿಶೇಷವಾದ ಕ್ರೀಡಾಕೂಟ. ಕೊಡಗಿನ ಎಲ್ಲ ಮನೆತನದವರು ಸೇರಿ ಕ್ರೀಡಾಕೂಟ ಮಾಡಿರುವುದು ಅದ್ಭುತವಾದ ಕಲ್ಪನೆ. ಕೊಡಗಿನ ಕುಟುಂಬಗಳು ಒಳ್ಳೆಯ ಸಂಬAಧ ಇರುವ ಕುಟುಂಬಗಳು. ಸಂಸ್ಕೃತಿ, ಆಚಾರ-ವಿಚಾರ ವಿಶೇಷ, ಉಡುಪು, ಆಹಾರ ಎಲ್ಲವೂ ವಿಶೇಷವಾಗಿದೆ. ಹಾಕಿ ಪ್ರಿಯವಾದ ಆಟ.
(ಮೊದಲ ಪುಟದಿಂದ) ಕುಟುಂಬ ಸಹಿತ ಮಾಡುತ್ತಿರುವುದು ಇನ್ನೂ ವಿಶೇಷವಾಗಿದೆ. ಇದು ನಶಿಸಿ ಹೋಗುತ್ತಿರುವ ನಮ್ಮ ಕುಟುಂಬಗಳನ್ನು ಪುನರ್ ಸ್ಥಾಪನೆ ಮಾಡಲು ಮಾದರಿಯಾಗಿದೆ.
ಕುಟುಂಬಗಳು ಒಂದಾಗಬೇಕು, ಸಂಬAಧಗಳು ಚಂದ ಇರಬೇಕು. ಇದು ಭಾರತದ ಪರಂಪರೆ. ನಾಗರಿಕತೆ ಬೆಳೆದಿದೆ. ನಮ್ಮೊಂದಿಗೆ ಇರುವುದು ನಾಗರಿಕತೆ ನಾವು ಏನು ಆಗಿದ್ದೇವೆಯೋ ಅದು ಸಂಸ್ಕೃತಿ. ಇದು ಕ್ರೀಡೆ ಮೂಲಕ ಆಗುತ್ತಿದೆ. ಈ ರೀತಿಯ ಕ್ರೀಡಾಕೂಟಗಳು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದು ಪ್ರತಿಪಾದಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ೧೯೯೭ರಿಂದಲೇ ಹಾಕಿ ಪಂದ್ಯಾವಳಿ ಆಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಅನೇಕ ಬಾರಿ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದ್ದರೂ, ಬರಲು ಸಾಧ್ಯವಾಗಲಿಲ್ಲ. ಇದೀಗ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸಿರುವುದಾಗಿ ಹೇಳಿದರು. ಹಾಕಿ ಪಂದ್ಯಾವಳಿಗೆ ೨೦೦೮ರ ವರೆಗೂ ಯಾವುದೇ ಅನುದಾನ ಬಂದಿರಲಿಲ್ಲ. ಬಿಜೆಪಿ ಸರಕಾರ ಬಂದ ಬಳಿಕ ಅಮ್ಮತ್ತಿಯಲ್ಲಿ ನಡೆದ ಮಂಡೇಪAಡ ಹಾಕಿ ಉತ್ಸವಕ್ಕೆ ಮೊದಲ ಬಾರಿಗೆ ರೂ. ೫ ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದು, ಇದೀಗ ೧ ಕೋಟಿಗೆ ತಲುಪಿದೆ ಎಂದರು.
ಈ ಸಂದರ್ಭ ಸಹಕಾರ ಸಚಿವ ಸಿ.ಟಿ. ಸೋಮಶೇಖರ್, ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಪ್ರತಾಪ್ ಸಿಂಹ ನಾಯಕ್À, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಒಲಂಪಿಯನ್ ಅಂಜಪರವAಡ ಸುಬ್ಬಯ್ಯ ಇನ್ನಿತರ ಪ್ರಮುಖರು ಇದ್ದರು.