ಶನಿವಾರಸಂತೆ, ಮಾ. ೧೭: ಸಮೀಪದ ದುಂಡಳ್ಳಿ ಗ್ರಾಮದಲ್ಲಿ ಸರ್ವೆ ನಂ. ೧೬ ರ ೧೬.೦೮ ಎಕರೆ ಜಮೀನಿನಲ್ಲಿ ಹಿಂದಿನ ತಲೆಮಾರಿನ ಗ್ರಾಮಸ್ಥರು ೭೨ ವರ್ಷಗಳಿಂದ ಸಾಗುವಳಿ ಮಾಡಿ ಕಾಫಿ, ಏಲಕ್ಕಿ, ಕರಿಮೆಣಸು, ಸಿಲ್ವರ್, ಬಾಳೆ ಮತ್ತಿತರ ಕಾಡು ಜಾತಿಯ ಮರಗಳನ್ನು ಬೆಳೆದಿದ್ದರು. ಇದರಿಂದ ಬರುತ್ತಿದ್ದ ಆದಾಯವನ್ನು ಗ್ರಾಮಾಭಿವೃದ್ಧಿಗೆ ಉಪಯೋಗಿಸುತ್ತಿದ್ದರು. ಇಂದಿನ ಗ್ರಾಮಸ್ಥರು ಅದೇ ಪದ್ಧತಿ ಅನುಸರಿಸಿ ಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ರಾತ್ರೋರಾತ್ರಿ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಯಾವುದೇ ಮಾಹಿತಿ ನೀಡದೇ ಸಿಬ್ಬಂದಿಗಳು ತೋಟಕ್ಕೆ ನುಗ್ಗಿ ೩ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಪಡಿಸಿರುತ್ತಾರೆ ಎಂದು ಗ್ರಾಮದ ಸಾಮೂಹಿಕ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ. ಶಂಭುಲಿAಗಪ್ಪ ಹಾಗೂ ೧೧ ಮಂದಿ ನಿರ್ದೇಶಕರು, ಸದಸ್ಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಇರುವ ಸರ್ವೆ ನಂ. ೧೬ ರಲ್ಲಿ ಈ ಹಿಂದೆ “ಗ್ರಾಮಸ್ಥರು’’ ಎಂದೇ ಪಹಣಿ ದಾಖಲಿಸಿದ್ದು ಇತ್ತೀಚಿನ ದಿನಗಳಲ್ಲಿ “ಅರಣ್ಯ ಇಲಾಖೆ’’ ಹಾಗೂ “ಗ್ರಾಮಸ್ಥರು’’ ಎಂದು ದಾಖಲಿಸಲಾಗಿದೆ. ಈ ಜಾಗದಲ್ಲಿ ಗ್ರಾಮಸ್ಥರು ಸಾಗುವಳಿ ಮಾಡಲು ಅವಕಾಶವಿದ್ದು ೭೨ ಶನಿವಾರಸಂತೆ, ಮಾ. ೧೭: ಸಮೀಪದ ದುಂಡಳ್ಳಿ ಗ್ರಾಮದಲ್ಲಿ ಸರ್ವೆ ನಂ. ೧೬ ರ ೧೬.೦೮ ಎಕರೆ ಜಮೀನಿನಲ್ಲಿ ಹಿಂದಿನ ತಲೆಮಾರಿನ ಗ್ರಾಮಸ್ಥರು ೭೨ ವರ್ಷಗಳಿಂದ ಸಾಗುವಳಿ ಮಾಡಿ ಕಾಫಿ, ಏಲಕ್ಕಿ, ಕರಿಮೆಣಸು, ಸಿಲ್ವರ್, ಬಾಳೆ ಮತ್ತಿತರ ಕಾಡು ಜಾತಿಯ ಮರಗಳನ್ನು ಬೆಳೆದಿದ್ದರು. ಇದರಿಂದ ಬರುತ್ತಿದ್ದ ಆದಾಯವನ್ನು ಗ್ರಾಮಾಭಿವೃದ್ಧಿಗೆ ಉಪಯೋಗಿಸುತ್ತಿದ್ದರು. ಇಂದಿನ ಗ್ರಾಮಸ್ಥರು ಅದೇ ಪದ್ಧತಿ ಅನುಸರಿಸಿ ಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ರಾತ್ರೋರಾತ್ರಿ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಯಾವುದೇ ಮಾಹಿತಿ ನೀಡದೇ ಸಿಬ್ಬಂದಿಗಳು ತೋಟಕ್ಕೆ ನುಗ್ಗಿ ೩ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಪಡಿಸಿರುತ್ತಾರೆ ಎಂದು ಗ್ರಾಮದ ಸಾಮೂಹಿಕ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ. ಶಂಭುಲಿAಗಪ್ಪ ಹಾಗೂ ೧೧ ಮಂದಿ ನಿರ್ದೇಶಕರು, ಸದಸ್ಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಇರುವ ಸರ್ವೆ ನಂ. ೧೬ ರಲ್ಲಿ ಈ ಹಿಂದೆ “ಗ್ರಾಮಸ್ಥರು’’ ಎಂದೇ ಪಹಣಿ ದಾಖಲಿಸಿದ್ದು ಇತ್ತೀಚಿನ ದಿನಗಳಲ್ಲಿ “ಅರಣ್ಯ ಇಲಾಖೆ’’ ಹಾಗೂ “ಗ್ರಾಮಸ್ಥರು’’ ಎಂದು ದಾಖಲಿಸಲಾಗಿದೆ. ಈ ಜಾಗದಲ್ಲಿ ಗ್ರಾಮಸ್ಥರು ಸಾಗುವಳಿ ಮಾಡಲು ಅವಕಾಶವಿದ್ದು ೭೨ ಮಂತ್ರಿ ಕಿತ್ತೂರು ಮಲ್ಲಪ್ಪ ಅವರು “ಸಾಮೂಹಿಕ ವ್ಯವಸಾಯ ಸಹಕಾರ ಸಂಘ’’ವನ್ನು ಉದ್ಘಾಟಿಸಿದ್ದರು. ಡಿ.ಎಂ. ಸಿದ್ದೇಗೌಡ ಸಂಘದ ಪ್ರಥಮ ಅಧ್ಯಕ್ಷರಾಗಿದ್ದು ೧೧ ಮಂದಿ ಸದಸ್ಯರು ಗ್ರಾಮದ ಊರುಡುವೆ ಜಾಗದಲ್ಲಿ ಸಾಗುವಳಿ ಆರಂಭಿಸಿದ್ದರು. ೫ ವರ್ಷ ಕ್ಕೊಮ್ಮೆ ಚುನಾವಣೆ ನಡೆಯುತ್ತಿದ್ದು ಹಲವಾರು ಆಡಳಿತ ಮಂಡಳಿಗಳು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿವೆ. ವರ್ಷ ಕ್ಕೊಮ್ಮೆ ಖರ್ಚು-ವೆಚ್ಚದ ಆಡಿಟ್ ಮಾಡಿಸುತ್ತಿದ್ದು ಪ್ರತಿ ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಮಹಾಸಭೆ ನಡೆಯುತ್ತದೆ. ಪ್ರಸಕ್ತ ಸಾಲಿನಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಿ.ಸಿ. ಶಂಭುಲಿAಗಪ್ಪ, ಉಪಾಧ್ಯಕ್ಷರಾಗಿ ಡಿ.ಎಸ್. ಮಲ್ಲೇಶ್, ಕಾರ್ಯದರ್ಶಿ ಯಾಗಿ ಡಿ.ಎಸ್. ಧರ್ಮಪ್ಪ, ೧೧ ಮಂದಿ ನಿರ್ದೇಶಕರು ಹಾಗೂ ೪೪ ಸದಸ್ಯರಿದ್ದಾರೆ. ಇವರೆಲ್ಲರೂ ೧೬.೮ ಎಕರೆ ದುಂಡಳ್ಳಿ ಗ್ರಾಮದ ಊರುಡುವೆ ಹಾಗೂ ಕಾಜೂರು ಗ್ರಾಮದ ಅಂದಾಜು ೧ ಎಕರೆ ಊರುಡುವೆ ಜಾಗವನ್ನು ಸ್ವಾಧೀನದಲ್ಲಿಟ್ಟುಕೊಂಡು ಒಗ್ಗಟ್ಟಿನಿಂದ ಬೇಸಾಯ ಮಾಡಿ ಕೊಂಡು ಬರುತ್ತಿ ದ್ದಾರೆ. ಕಾಫಿ, ಏಲಕ್ಕಿ, ಕರಿಮೆಣಸು, ಬಾಳೆ, ಸಿಲ್ವರ್ ಬೆಳೆಯುತ್ತಿದ್ದು ಆದಾಯವನ್ನು ಗ್ರಾಮಾ ಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ. ಆಗಾಗ್ಗೆ ತೋಟದ ದುರಸ್ತಿಯೂ ನಡೆದಿದೆ. ದೇವಾಲಯವೇ ಇಲ್ಲದಿದ್ದ ಗ್ರಾಮದಲ್ಲಿ ೨೦೨೦ ರಲ್ಲಿ ರೂ. ೩೦ ಲಕ್ಷ ವೆಚ್ಚದಲ್ಲಿ ಶ್ರೀ ಲಕ್ಷಿö್ಮÃ ವೆಂಕಟೇಶ್ವರ ದೇವಾಲಯ ನಿರ್ಮಾಣ ಕಾಮಗಾರಿ ಆರಂಭ ವಾಗಿದ್ದು, ಬೇಸಾಯದ ಆದಾಯ ಹಾಗೂ ಗ್ರಾಮಸ್ಥರ ಧನ ಸಹಾಯ ದಿಂದ ಹಂತಹAತವಾಗಿ ಕಾಮಗಾರಿ ನಡೆದಿದೆ. ಆದಿಯಲ್ಲಿ ೩ ಮನೆಗಳಿದ್ದ ಗ್ರಾಮದಲ್ಲಿ ಪ್ರಸ್ತುತ ೭೦ ಕುಟುಂಬಗಳು ನೆಲೆಸಿವೆ. ೩೯೩ ಮತದಾರರಿದ್ದಾರೆ.

“೧೯೫೨ ರಲ್ಲಿ ಸಂಘ ಸ್ಥಾಪನೆ ಯಾದಂದಿನಿAದ ಇಂದಿನವರೆಗೂ ೭೨ ವರ್ಷಗಳಿಂದ ಬೇಸಾಯ ಮಾಡಿ ಕೊಂಡು ಬಂದಿದ್ದು ಬಿಟ್ಟು ಕೊಡುವ ಉದ್ದೇಶವೇ ಇಲ್ಲ. ಗ್ರಾಮ ಪಂಚಾ ಯಿತಿಯಲ್ಲಿ ಈ ವಿಚಾರ ತೀರ್ಮಾನ ವಾಗಿದ್ದು ಪಂಚಾಯಿತಿ ಸಹಕಾರ ನೀಡುತ್ತಿದೆ. ಅರಣ್ಯ ಇಲಾಖೆ ಸಮ್ಮತಿಸಿದರೂ ಬರವಣಿಗೆ ರೂಪದಲ್ಲಿ ನೀಡಲಿಲ್ಲ. ಇಲಾಖೆಯ ಸಮ್ಮತಿಯ ನಿರೀಕ್ಷೆಯಲ್ಲಿದ್ದು ಜಾಗವನ್ನು ಗ್ರಾಮಸ್ಥರಿಗೆ, ಗ್ರಾಮಾಭಿವೃದ್ಧಿಗೆ ಮೀಸಲಿಡದಿದ್ದರೇ ಮತ್ತೆ ಕಾನೂನು ಪ್ರಕಾರ ಹೋರಾಟಕ್ಕೆ ಸಂಘ ಸಿದ್ಧವಿದೆ’’ ಎಂದು ಸಂಘದ ಅಧ್ಯಕ್ಷ ಡಿ.ಸಿ. ಶಂಭುಲಿAಗಪ್ಪ, ಉಪಾಧ್ಯಕ್ಷ ಡಿ.ಎಸ್. ಮಲ್ಲೇಶ್, ಕಾರ್ಯದರ್ಶಿ ಡಿ.ಎಸ್. ಧರ್ಮಪ್ಪ ಹಾಗೂ ೧೧ ಮಂದಿ ನಿರ್ದೇಶಕರು ತಿಳಿಸಿದ್ದಾರೆ. ‘ಅರಣ್ಯಾ ಧಿಕಾರಿ ಗ್ರಾಮದ ಮನೆಯೊಂದಕ್ಕೆ ನೋಟೀಸ್ ಜಾರಿ ಮಾಡಿದ್ದು ಸಂಘಕ್ಕೆ ನೋಟೀಸ್ ಬಂದಿಲ್ಲ. ನಿಯಮದ ಪ್ರಕಾರ ೩ ಬಾರಿ ನೋಟೀಸ್ ಕೊಟ್ಟು ಸಮಯಾ ವಕಾಶ ಕೊಡಬೇಕಾಗಿತ್ತು. ನಮ್ಮ ಹೋರಾಟ ಗ್ರಾಮಾಭಿ ವೃದ್ಧಿಗಾಗಿ. ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ’ ಎನ್ನುತ್ತಾರೆ ಗ್ರಾಮದ ಹಿರಿಯರು.

ಅರಣ್ಯಾಧಿಕಾರಿ ಪ್ರತಿಕ್ರಿಯೆ

ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅವರು ಮಾತನಾಡಿ, ದುಂಡಳ್ಳಿ ಗ್ರಾಮದ ಊರುಡುವೆ ಜಾಗದ ಬಗ್ಗೆ ಸರಿಯಾದ ದಾಖಲಾತಿಗಳಿಲ್ಲ. ಊರುಡುವೆ ಜಾಗವೆಲ್ಲ ಸರ್ಕಾರದ ಸಂರಕ್ಷಿತ ಜಾಗವೆಂದು ಆದೇಶ ವಾಗಿದೆ. ತೋಟ ಮಾಡುವಂತಿಲ್ಲ. ಗ್ರಾಮಸ್ಥರಿಗೆ ಜಾಗದ ಸರ್ವೆ ನಂಬರಿನ ಬಗ್ಗೆ ಗೊಂದಲವಿದೆ. ನಾವು ಸರ್ವೆ ನಂ.೨೩/೨ ರಲ್ಲಿ ಗಿಡಗಳನ್ನು ತೆರವುಗೊಳಿಸಿರುವುದು. ಹೊಸ ಗಿಡಗಳನ್ನಷ್ಟೇ ತೆರವು ಗೊಳಿಸಿರುವುದು.

ಸಂಘದ ತೋಟ ವೆಂದು ಹೇಳಿದರೂ ಕಾಜೂರು ಊರುಡುವೆ ಜಾಗ ಒತ್ತುವರಿ ಯಾಗಿರುವ ಬಗ್ಗೆ ಕೋರ್ಟ್ನಲ್ಲಿ ೨೦೧೩ ಮತ್ತು ೨೦೧೪ ರಲ್ಲಿ ಮೊಕದಮೆ ದಾಖಲಾಗಿದೆ. ಈಗಲೂ ಜಾಗದ ಬಗ್ಗೆ ಸರಿಯಾದ ದಾಖಲೆಯಿದ್ದು ಅವರು ಕಾನೂನು ಬದ್ಧವಾಗಿ ಹೋರಾಟ ಮಾಡಿದರೇ ಒಳ್ಳೆ ಯದೆ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಪ್ರತಿಕ್ರಿಯಿಸಿದರು.

- ಶ.ಗ. ನಯನತಾರಾ