ಸಿದ್ದಾಪುರ, ಮಾ. ೧೭: ವಿರೂಪಾಕ್ಷಪುರ ರಂಗಸಮುದ್ರ ಶ್ರೀ ಕುರುಂಭ ಭಗವತಿ ದೇವಸ್ಥಾನದ ೨೫ನೇ ಭರಣಿ ವಾರ್ಷಿಕ ಮಹೋತ್ಸವ ತಾ. ೧೮ ಮತ್ತು ೧೯ ರಂದು ಕಿಶಾನ್ ವೆಳಿಚ್ಚಪ್ಪಾಡ್ ನೇತೃತ್ವದಲ್ಲಿ ನಡೆಯಲಿದೆ.

ಉತ್ಸವದ ಅಂಗವಾಗಿ ತಾ. ೧೮ ರಂದು (ಇಂದು) ಬೆಳಿಗ್ಗೆ ೯.೩೦ ಗಂಟೆಗೆ ನಾಗನಿಗೆ ಅಲಂಕಾರ ಪೂಜೆ, ಪೂರ್ವಾಹ್ನ ೧೧.೩೦ ಗಂಟೆಗೆ ಮಹಾಮಂಗಳಾರತಿ, ಸಂಜೆ ೪ ಗಂಟೆಗೆ ಮುತ್ತಪ್ಪನ ಮಲೆ ಇಳಿಸುವುದು, ೫ ಗಂಟೆಗೆ ಮುತ್ತಪ್ಪನ ವೆಳ್ಳಾಟಂ, ೫.೩೦ ಗಂಟೆಗೆ ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಚಂಡೆ ವಾದ್ಯಗಳೊಂದಿಗೆ ತಾಲಪೊಲಿ ಮೆರವಣಿಗೆ, ರಾತ್ರಿ ೭ ಗಂಟೆಗೆ ಗುಳಿಗರಾಜನ ವೆಳ್ಳಾಟಂ, ೮ ಗಂಟೆಗೆ ಮಹಾಮಂಗಳಾರತಿ, ೮.೩೦ ಗಂಟೆಗೆ ಅನ್ನಸಂತರ್ಪಣೆ, ೯ ಗಂಟೆಗೆ ವಸೂರಿಮಾಲ ವೆಳ್ಳಾಟಂ, ೧೦ ಗಂಟೆಗೆ ಗುರುಧಿ ಪೂಜೆ.

ತಾ. ೧೯ ರಂದು ಬೆಳಿಗ್ಗೆ ೪ ಗಂಟೆಗೆ ಗುಳಿಗರಾಜನ ತೆರೆ, ೬ ಗಂಟೆಗೆ ಉಷಾ ಪೂಜೆ, ೧೦.೩೦ ಗಂಟೆಗೆ ಅಲಂಕಾರ ಪೂಜೆ ಮಹಾಮಂಗಳಾರತಿ, ಪೂರ್ವಾಹ್ನ ೧೧ ಗಂಟೆಗೆ ಭಗವತಿ ತೆರೆ, ಮಧ್ಯಾಹ್ನ ೧೨ ಗಂಟೆಗೆ ದೇವಿ ದರ್ಶನಂ, ೧೨.೩೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಕುರುಂಭ ಭಗವತಿ ದೇವಸ್ಥಾನದ ಮುಖ್ಯಸ್ಥ ವಿ.ಕೆ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.