ಮಡಿಕೇರಿ, ಮಾ. ೧೭: ತಾ. ೧೮ರಂದು (ಇಂದು) ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಗು ಜಿಲ್ಲೆಯ ಮಡಿಕೇರಿ ಗಾಂಧಿ ಮೈದಾನ ಹಾಗೂ ನಾಪೋಕ್ಲುವಿಗೆ ಭೇಟಿ ನೀಡಲಿದ್ದು, ಭೇಟಿ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿ ನಗರಕ್ಕೆ ಆಗಮಿಸಲಿರುವುದರಿಂದ ನಗರದಲ್ಲಿ ಸಾರ್ವಜನಿಕ ಸುಗಮ ಸಂಚಾರ, ವಾಹನ ನಿಲುಗಡೆಯ ಹಿತದೃಷ್ಟಿಯಿಂದ ಇಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಮಡಿಕೇರಿ ನಗರದಲ್ಲಿ ವಾಹನ ಸಂಚಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
* ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ಸುದರ್ಶನ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಮಂಗಳೂರು ರಸ್ತೆಯ ದೊಡ್ಡ ತಿರುವು (ಎಂಆರ್‌ಎಫ್ ಟೈರ್ ಶಾಪ್) ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ಮಾರ್ಗವಾಗಿ ಸಾಯಿ ಗ್ರೌಂಡ್ ತಿರುವಿನವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ
(ಮೊದಲ ಪುಟದಿಂದ) ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಮಡಿಕೇರಿ ನಗರದ ಮೋಣಪ್ಪ ಗ್ಯಾರೇಜ್ ಜಂಕ್ಷನ್‌ನಿAದ ಪತ್ರಿಕಾಭವನ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಹಾಗೂ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಸಮಾವೇಶಕ್ಕೆ ಬರುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹೊಸ ಖಾಸಗಿ ಬಸ್ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
* ಸಮಾವೇಶಕ್ಕೆ ಬರುವ ಎಲ್ಲಾ ೪ ಚಕ್ರ ವಾಹನಗಳಿಗೆ ಎಪಿಎಂಸಿ ಹಾಗೂ ಕೋಟೆ ಆವರಣದಲ್ಲಿ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
* ಸಮಾವೇಶಕ್ಕೆ ಬರುವ ಎಲ್ಲಾ ಸರ್ಕಾರಿ ವಾಹನಗಳನ್ನು ಮೂರ್ನಾಡು ರಸ್ತೆಯಲ್ಲಿರುವ ನಿರೀಕ್ಷಣಾ ಮಂದಿರದ ಮುಂದಿನ ಆವರಣದಲ್ಲಿ ಹಾಗೂ ಸಂತ ಮೈಕಲರ ಚರ್ಚ್ನ ಆವರಣದಲ್ಲಿ ನಿಲುಗಡೆಗೊಳಿಸಬೇಕಿದೆ.