ಕಡಂಗ, ಮಾ. ೧೮: ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನೀ ಯುವಜನ ಸಂಘ (ಎಸ್‌ವೈಎಸ್)ನ ವಾರ್ಷಿಕ ಮಹಾಸಭೆ ಇತ್ತೀಚಿಗೆ ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸುಲೈಮಾನ್ ಸಿ.ಎಂ. ಅಧ್ಯಕ್ಷತೆಯಲ್ಲಿ ನಡೆಯಿತು. ಸ್ವಾಗತವನ್ನು ಅಬ್ದುಲ್ ಸಲಾಂ ನಡೆಸಿದರೆ, ಉದ್ಘಾಟನೆಯನ್ನು ಸ್ಥಳೀಯ ಮಸೀದಿ ಖತೀಬ್ ಶಹಜಹಾನ್ ಶಾಖಾಫಿ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವೀರಾಜಪೇಟೆ ಸೆಂಟರ್‌ನ ಅಹ್ಮದ್ ಮದನಿ ಗುಂಡಿಗೆರೆ ಸಂಘಟನೆ ನಡೆದು ಬಂದ ಹಾದಿ ಹಾಗೂ ಸಂಘಟನೆಯ ಧ್ಯೆಯೋದ್ದೇಶ, ಸಂಘಟನೆ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಳೆದ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಿ.ಎ. ಮಂಡಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್‌ಗೆ ಅಧ್ಯಕ್ಷರಾಗಿ ಸುಲೈಮಾನ್ ಸಿ.ಎಂ. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಯು.ಎ. ಕೋಶಾಧಿಕಾರಿಯಾಗಿ ಸಲಾಂ ಪಿ.ಎ., ಉಪಾಧ್ಯಕ್ಷರಾಗಿ ಹಸೈನಾರ್ ಸಿ.ಪಿ. ಹಾಗೂ ಅಬೂಬಕ್ಕರ್ ಫೊದ್ದಮಾನಿ, ಸಹ ಕಾರ್ಯದರ್ಶಿಯಾಗಿ ಕುಂಜಿ ಮೊಹಮ್ಮದ್, ಉಸ್ಮಾನ್ ಸಿ.ಇ., ಕಾರ್ಯಕಾರಿಣಿ ಸದಸ್ಯರಾಗಿ ಸಮದ್ ಎ.ಎ., ಹಸೈನಾರ್ ಕೆ.ಜಿ., ಅಬೂಬಕ್ಕರ್ ಪಿ.ಎ., ಇಸ್ಮಾಯಿಲ್ ಹಾಜಿ, ಮಮ್ಮುಟ್ಟಿ ಪಿ.ಸಿ., ಮೂಸ ಅವರನ್ನು ಆಯ್ಕೆ ಮಾಡಲಾಯಿತು.
ಎಸ್‌ವೈಎಸ್‌ಗೆ ಅಧ್ಯಕ್ಷರಾಗಿ ಅಶ್ರಫ್ ಸಿ.ಎ., ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಸಿ.ಎಂ., ಕೋಶಾಧಿಕಾರಿ ರಜಾಕ್ ಸಿ.ಎ., ಉಪಾಧ್ಯಕ್ಷರಾಗಿ ರಾಝಿಕ್ ಪಿ.ಎ., ಸಹ ಕಾರ್ಯದರ್ಶಿಯಾಗಿ ಷಂಶುದ್ದಿನ್ ಕಲ್ಲುಮೊಟ್ಟೆ, ದಆವಾ ಕಾರ್ಯದರ್ಶಿಯಾಗಿ ಸಮದ್ ಸಅದಿ, ಕಾರ್ಯಕಾರಿಣಿ ಸದಸ್ಯರಾಗಿ ರಶೀದ್ ಐಬಿಎಂ, ರಜಾಕ್ ಆಟೋ, ಕಬೀರ್ ಸಿ.ಇ., ರಂಶೀದ್ ಪಿ.ಎ., ಸಿರಾಜ್ ಕೆ.ಎಂ., ಫಿರೋಜ್ ಖಾನ್, ರಾಝೀಕ್ ಎಂ.ಎ. ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ಪೊನ್ನತ್‌ಮೊಟ್ಟೆ, ಅಜೀಜ್ ಸಖಾಫಿ ಮತಿತ್ತರರು ಇದ್ದರು. ಕೊನೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‌ನ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ವಂದಿಸಿದರು.