ಕಣಿವೆ, ಮಾ. ೧೭: ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಕೆ.ಎಂ. ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆ ಅಧಿಕಾರಿ ನವ್ಯ ನಾಣಯ್ಯ, ಕೃಷಿ ಇಲಾಖೆಯ ಸವಲತ್ತುಗಳ ಜೊತೆಗೆ ರೂ. ೧೬೦೦ ಪಾವತಿಸಿ ಫೈಬರ್ ಏಣಿ ಪಡೆದು ಕೊಳ್ಳಲು ಸಲಹೆ ನೀಡಿದರು. ಅರಣ್ಯ ಇಲಾಖೆಯ ಫಾರೆಸ್ಟರ್ ಸಿದ್ದರಾಮ ಮಾತನಾಡಿ, ಕಾಡಾನೆಗಳು ಯಾವುದೇ ಸಂದರ್ಭ ಗ್ರಾಮಗಳಿಗೆ ಅಥವಾ ತೋಟಗಳಿಗೆ ನುಗ್ಗಿ ಹಾನಿ ಮಾಡುವ ಸಂದರ್ಭ ಸಾರ್ವಜನಿಕರು ೮೨೭೭೧೨೪೪೪೪ ಈ ನಂಬರ್‌ಗೆ ಮಾಹಿತಿ ನೀಡಿದರೆ ಕಾಡಾನೆಯ ಬಗ್ಗೆ ಇಲಾಖೆ ನಿಗಾ ವಹಿಸಲಿದೆ ಎಂದರು.

೧.೬೦ ಸಾವಿರ ವಿವಿಧ ಜಾತಿಯ ಗಿಡಗಳನ್ನು ಅರಣ್ಯ ಇಲಾಖೆಯಿಂದ ಬೆಳೆಸಲಾಗಿದೆ. ಆಸಕ್ತರು ಪಡೆದುಕೊಳ್ಳಲು ಸಲಹೆ ನೀಡಿದರು. ಈ ನಡುವೆ ಏಳನೇ ಹೊಸಕೋಟೆಯ ವ್ಯಾಪ್ತಿಗಳಲ್ಲಿ ನಡೆಸಿರುವ ಆನೆ ಕಂದಕ ಅಪೂರ್ಣ ಹಾಗೂ ಅವೈಜ್ಞಾನಿಕ ವಾಗಿದೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಏಳನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಜೋಸೆಫ್, ಸದಸ್ಯರಾದ ಸಿದ್ದಿಕ್, ಮುಸ್ತಾಫ, ಸೌಮ್ಯ, ವೇದಾವತಿ, ಚಂದ್ರಮತಿ, ಕಮಲ, ಸಿಂಧು, ಮಧುಸೂದನ್ ಇದ್ದರು. ನೋಡಲ್ ಅಧಿಕಾರಿಯಾಗಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಕಾರ್ಯ ನಿರ್ವಹಿಸಿದರು.

ಏಳನೇ ಹೊಸಕೋಟೆ ಗ್ರಾಮದ ಅನಂತ ಬಡಾವಣೆಯಲ್ಲಿ ಒಣಗಿನಿಂತ ಬೀಟೆ ಮರವೊಂದು ಮನೆ ಮೇಲೆ ಬೀಳುವ ಅಪಾಯದಲ್ಲಿದೆ. ಕೂಡಲೇ ತೆರವುಗೊಳಿಸಿ ಎಂದು ಕಳೆದ ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಸಿಂಧು, ಮಧುಸೂದನ್ ಇದ್ದರು. ನೋಡಲ್ ಅಧಿಕಾರಿಯಾಗಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಕಾರ್ಯ ನಿರ್ವಹಿಸಿದರು.

ಏಳನೇ ಹೊಸಕೋಟೆ ಗ್ರಾಮದ ಅನಂತ ಬಡಾವಣೆಯಲ್ಲಿ ಒಣಗಿನಿಂತ ಬೀಟೆ ಮರವೊಂದು ಮನೆ ಮೇಲೆ ಬೀಳುವ ಅಪಾಯದಲ್ಲಿದೆ. ಕೂಡಲೇ ತೆರವುಗೊಳಿಸಿ ಎಂದು ಕಳೆದ ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಮೂಲವನ್ನು ಹಾಳು ಮಾಡಲಾಗಿದೆ. ಗ್ರಾಮದಲ್ಲಿ ಹಿಂದೂಗಳ ಧಾರ್ಮಿಕ ಪೂಜಾ ವಿಧಿಗಳಿಗೆ ಬಳಕೆಯಾಗುತ್ತಿದ್ದ ಬಾವಿ, ಊರಿಗೆಲ್ಲಾ ನೀರುಣಿಸುತ್ತಿದ್ದ ಬಾವಿಯ ಮೂಲ ಸ್ಥಿತಿಯನ್ನು ಹಾಳು ಮಾಡಲಾಗಿದೆ. ಆದರೆ ಮೊದಲಿದ್ದ ಬಾವಿಯನ್ನು ನಿರ್ಮಿಸಬೇಕೆಂದು ನಿವಾಸಿಗಳಾದ ರಾಮಚಂದ್ರ, ಪ್ರಕಾಶ್, ನಾಗರಾಜು, ಕನಕರಾಜು, ಜಗದೀಶ್, ಕೃಷ್ಣ, ಶ್ರೀನಿವಾಸ್ ಗ್ರಾಮಸಭೆಯಲ್ಲಿ ಒಕ್ಕೊರಲಿನಿಂದ ಬಾವಿಗೆ ಸ್ಲಾö್ಯಬ್ ಅಳವಡಿಸಿದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಪಂಚಾಯಿತಿಯ ಹದಿನೈದನೇ ಹಣಕಾಸು ಯೋಜನೆಯಲ್ಲಿ ಬಾವಿಯನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಸದಸ್ಯ ಮುಸ್ತಾಫ ಹೇಳಿದಾಗ, ಉದ್ರಿಕ್ತರಾದ ನಿವಾಸಿಗಳು ನಿವಾಸಿಗಳ ಗಮನಕ್ಕೆ ತರದೇ ಬಾವಿಯನ್ನು ಒಡೆದು ಹಾಳು ಮಾಡಲಾಗಿದೆ. ಗ್ರಾಮಸ್ಥರ ಒಪ್ಪಿಗೆ ಪಡೆಯದೇ ಸದಸ್ಯ ಮುಸ್ತಾಫ ಅವರು ಬಾವಿಯ ಮೂಲ ಸ್ಥಿತಿಯನ್ನು ಹಾಳುಗೆಡವಿ ಇಂಗುಗುAಡಿಯಾಗಿ ಮಾರ್ಪಡಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಾಗ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್, ತೆರೆದ ಬಾವಿಯನ್ನು ಸ್ಥಳೀಯರ ಅಭಿಪ್ರಾಯ ಪಡೆಯದೇ ಸದಸ್ಯ ಮುಸ್ತಾಫ ತೆರವು ಮಾಡಿರುವುದು ಸರಿಯಲ್ಲ. ಇದಕ್ಕೆ ನನ್ನ ಒಪ್ಪಿಗೆಯಿಲ್ಲ. ಗ್ರಾಮಸ್ಥರ ಬೇಡಿಕೆಯಂತೆ ಮೊದಲಿದ್ದಂತೆಯೇ ಬಾವಿಯನ್ನು ನಿರ್ಮಿಸಿಕೊಡುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಸ್ವಾಗತಿಸಿ, ವಂದಿಸಿದರು.