ಮನೀಶ್ ಸಿಸೋಡಿಯಾ ಮತ್ತೆ ಇ.ಡಿ. ವಶಕ್ಕೆ
ನವದೆಹಲಿ, ಮಾ. ೧೭: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಕೋರ್ಟ್ ಮತ್ತೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಎರಡು ದಿನಗಳ ವಿಚಾರಣೆಯ ನಂತರ ದೆಹಲಿಯ ಮದ್ಯ ನೀತಿ ವಿಷಯಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ ೯ ರಂದು ಹಣಕಾಸು ತನಿಖಾ ಸಂಸ್ಥೆ ಬಂಧಿಸಿತ್ತು. ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ ಏಳು ದಿನಗಳವರೆಗೆ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಸಿಸೋಡಿಯಾ ಅವರ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ದೆಹಲಿ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ ಏಳು ದಿನಗಳವರೆಗೆ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇಡಿ ಬೇಡಿಕೆಯ ಮೇರೆಗೆ ನ್ಯಾಯಾಲಯ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ ೫ ದಿನಗಳವರೆಗೆ ವಿಸ್ತರಿಸಿದೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ ೨೨ ರಂದು ನಡೆಯಲಿದೆ. ಅಂತೆಯೇ ಮನೀಶ್ ಸಿಸೋಡಿಯಾ ಅವರ ಕುಟುಂಬದ ವೆಚ್ಚ ಮತ್ತು ಅವರ ಪತ್ನಿಯ ವೈದ್ಯಕೀಯ ವೆಚ್ಚ ೪೦,೦೦೦ ಮತ್ತು ೪೫,೦೦೦ ರೂ.ಗಳ ಚೆಕ್‌ಗಳಿಗೆ ಸಹಿ ಹಾಕಲು ನ್ಯಾಯಾಲಯವು ಅನುಮತಿ ನೀಡಿದೆ.
ಮಹಾರಾಷ್ಟç : ಬಸ್‌ಗಳಲ್ಲಿ ಮಹಿಳೆಯರಿಗೆ ಶೇ. ೫೦ ರಿಯಾಯಿತಿ
ಮುಂಬೈ, ಮಾ. ೧೭: ಮಹಾರಾಷ್ಟç ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಬಸ್ಸುಗಳಲ್ಲಿ ಇಂದಿನಿAದ ಮಹಿಳಾ ಪ್ರಯಾಣಿಕರಿಗೆ ಶೇ. ೫೦ ರಷ್ಟು ರಿಯಾಯಿತಿಯನ್ನು ಪ್ರಕಟಿಸಲಾಗಿದೆ. ಮಹಿಳಾ ಸಮ್ಮಾನ್ ಯೋಜನೆಯಡಿ ಈ ಪ್ರಯೋಜನವನ್ನು ಒದಗಿಸಲಿದ್ದು, ರಾಜ್ಯ ಸರ್ಕಾರ ನಿಗಮಕ್ಕೆ ರಿಯಾಯಿತಿ ಮೊತ್ತವನ್ನು ಮರುಪಾವತಿಸಲಿದೆ ಎಂದು ಮಹಾರಾಷ್ಟç ರಾಜ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ ೯ ರಂದು ೨೦೨೩-೨೪ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದ ಹಣಕಾಸು ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸಾರ್ವಜನಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಶೇ. ೫೦ ರಷ್ಟು ರಿಯಾಯಿತಿಯನ್ನು ಘೋಷಿಸಿದ್ದರು.
‘ಉರಿಗೌಡ, ನಂಜೇಗೌಡ ಕುರಿತು ಇತಿಹಾಸ ಮರು ಪರಿಶೀಲನೆ’
ಚಿತ್ರದುರ್ಗ, ಮಾ. ೧೭: ಇತ್ತೀಚಿಗೆ ಸಾರ್ವಜನಿಕ ಹಾಗೂ ರಾಜಕೀಯವಾಗಿ ಉರಿಗೌಡ- ನಂಜೇಗೌಡ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಇಬ್ಬರು ನಾಯಕರು ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಒಕ್ಕಲಿಗ ನಾಯಕರೆಂದು ಆಡಳಿತಾರೂಢ ಬಿಜೆಪಿ ನಾಯಕರು ಬಿಂಬಿಸುತ್ತಿದ್ದರೆ, ಇವರು ಕಾಲ್ಪನಿಕ ವ್ಯಕ್ತಿಗಳು ಎಂಬುದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾದವಾಗಿದೆ. ಈ ವಿಚಾರದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ವಾಕ್ ಸಮರ ಮುಂದುವರೆದಿದೆ. ಈ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿಂದು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಉರಿಗೌಡ ಹಾಗೂ ನಂಜೇಗೌಡ ಅವರದು ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.
ಸರ್ಕಾರದ ಭರವಸೆ ತಿರಸ್ಕರಿಸಿದ ಸಾರಿಗೆ ನೌಕರರು
ಬೆಂಗಳೂರು, ಮಾ. ೧೭: ಶೇ. ೧೫ರಷ್ಟು ವೇತನ ಹೆಚ್ಚಳ ಮಾಡುವ ಸರ್ಕಾರದ ಭರವಸೆಯನ್ನು ಸಾರಿಗೆ ನೌಕರರು ತಿರಸ್ಕರಿಸಿದ್ದು, ಈ ಹಿಂದೆ ನಿರ್ಧರಿಸಿದಂತೆಯೇ ಮಾರ್ಚ್ ೨೧ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ವೇತನ ಹೆಚ್ಚಳ ಸಂಬAಧ ಅಧಿಕೃತ ಆದೇಶಗಳು ಬಂದಿಲ್ಲ. ಈ ಕುರಿತ ವಿವರಗಳೂ ನಮಗೆ ಸಿಕ್ಕಿಲ್ಲ. ಶೇ. ೨೦ಕ್ಕಿಂತ ಕಡಿಮೆ ವೇತನ ಆದೇಶವನ್ನು ನಾವು ಸ್ವೀಕರಿಸುವುದಿಲ್ಲ. ಸರಕಾರ ಏಕಪಕ್ಷೀಯವಾಗಿ ಶೇ. ೧೫ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಇದು ನ್ಯಾಯಸಮ್ಮತವಲ್ಲ. ಹೀಗಾಗಿ ಈ ಹಿಂದೆ ಘೋಷಿಸಿದಂತೆ ಮಾರ್ಚ್ ೨೧ ರಿಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಅನುಮತಿ ಪಡೆಯದೆ ಅಧಿಕಾರಿಗಳ ವರ್ಗಾವಣೆ : ಚುನಾವಣಾ ಆಯೋಗ ಅಸಮಾಧಾನ
ಬೆಂಗಳೂರು, ಮಾ. ೧೭: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಅನುಮತಿ ಇಲ್ಲದೆ ಚುನಾವಣಾ ಸಂಬAಧಿತ ಕಾರ್ಯಗಳಲ್ಲಿ ನಿರತರಾಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ತೀವ್ರ ಅಸಮಾಧಾನ ಹೊರಹಾಕಿದೆ. ಈ ಸಂಬAಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅವರು ಪತ್ರ ಬರೆದಿದ್ದು, ಆಯೋಗ ಅನುಮತಿ ಇಲ್ಲದೆ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಪರಿಸ್ಥಿತಿ ಹೀಗಿರುವಾಗ ಈ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಹಲವು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಆಯೋಗದ ಅನುಮತಿ ಪಡೆಯದೆಯೇ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಸೂಚಿಸಿರುವುದು ಪತ್ರದಲ್ಲಿ ತಿಳಿದುಬಂದಿದೆ.
ಮಾAಸ ಮಾರಾಟಗಾರರೊಂದಿಗೆ ಪೊಲೀಸರ ಅಮಾನುಷ ವರ್ತನೆ
ನವದೆಹಲಿ, ಮಾ. ೧೭: ಇಬ್ಬರು ಮಾಂಸ ಮಾರಾಟಗಾರರೊಂದಿಗೆ ಪೊಲೀಸರು ಅಮಾನುಷವಾಗಿ ವರ್ತಿಸಿದ ಪ್ರಕರಣವೊಂದು ದೆಹಲಿಯ ಶಾಹದಾರದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಮಾಂಸ ಮಾರಾಟಗಾರರನ್ನು ಥಳಿಸಿದ್ದಲ್ಲದೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿ ಪೊಲೀಸರು ೩ ಪೊಲೀಸರನ್ನು ಅಮಾನತುಗೊಳಿಸಿದ್ದು, ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಾರ್ಚ್ ೭ ರಂದು ಆನಂದ್ ವಿಹಾರ್ ಪ್ರದೇಶದಲ್ಲಿ ಮಾಂಸ ಮಾರಾಟಗಾರರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಸ್ಕೂಟರ್‌ಗೆ ಡಿಕ್ಕಿ ಹೊಡೆದಾಗ ಘಟನೆ ಪ್ರಾರಂಭವಾಯಿತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆರೋಪಿಗಳು 'ಗೋರಕ್ಷಕ' ಎಂದು ಹೇಳಿಕೊಂಡು ಸಂತ್ರಸ್ತರ ಮುಖದ ಮೇಲೆ ಮೂತ್ರ ವಿಸರ್ಜಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ರವಿ ಚೌಧರಿ
ವಾಷಿಂಗ್‌ಟನ್, ಮಾ. ೧೭: ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ. ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆ ಪೆಂಟಗನ್‌ನಲ್ಲಿ ಪ್ರಮುಖ ನಾಯಕತ್ವದ ಹುದ್ದೆಯಾಗಿದೆ. ಈ ವಿಭಾಗದ ಅಧಿಕಾರಿಗಳ ನೇಮಕಕ್ಕೆ ಸೆನೆಟ್‌ನಲ್ಲಿ ಮತದಾನ ನಡೆದಿದ್ದು, ಪರವಾಗಿ ೬೫ ಮಂದಿ ವಿರುದ್ಧ೨೯ ಮಂದಿ ಮತ ಚಲಾವಣೆ ಮಾಡಿದ್ದಾರೆ. ರವಿ ಚೌಧರಿ ಈ ಹಿಂದೆ ಅಮೇರಿಕಾದ ಸಾರಿಗೆ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸಿದ್ದರು ಅಲ್ಲಿ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ, ವಾಣಿಜ್ಯ ಸ್ಥಳದ ಕಚೇರಿಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟೆçÃಷನ್‌ನಲ್ಲಿ ನಿರ್ದೇಶಕರಾಗಿದ್ದರು.