೧೯೯೭ ರಲ್ಲಿ ಕರಡದಲ್ಲಿ ಪಾಂಡAಡ ಕಪ್ ಹಾಕಿ ಉತ್ಸವದ ಮೂಲಕ ಹೊಸ ಪರಿಕಲ್ಪನೆಯೊಂದು ಕೊಡಗಿನಲ್ಲಿ ಶುರುವಾಯಿತು. ಪಾಂಡAಡ ಕುಟ್ಟಪ್ಪ-ಕಾಶಿ ಸಹೋದರರು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಏರ್ಪಡಿಸಿದಾಗ ಬಹುಶಃ ಅದು ಭವಿಷ್ಯದಲ್ಲಿ ಇಷ್ಟು ದೊಡ್ಡಮಟ್ಟಕ್ಕೆ ತಲುಪಲಿದೆ ಎಂದು ಯಾರೂ ಊಹಿಸಿರಲಿಲ್ಲವೇನೋ...? ಆದರೆ ಕೊಡಗಿನಲ್ಲಿ ಅದರಲ್ಲೂ ಕೊಡವ ಜನಾಂಗದವರಲ್ಲಿ ರಕ್ತಗತವಾಗಿ ಬಂದಿದ್ದು, ಇದಕ್ಕೆ ಬಾರೀ ಸ್ಪಂದನ ದೊರೆತಿತ್ತು. ಆರಂಭಿಕ ವರ್ಷ ಕೇವಲ ೬೦ ಕುಟುಂಬಗಳ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭಗೊAಡ ಕೌಟುಂಬಿಕ ಹಾಕಿಗೆ ವರ್ಷಂಪ್ರತಿ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿತು. ಎರಡನೇಯ ವರ್ಷ ೧೧೬, ನಂತರದಲ್ಲಿ ೧೪೦, ೧೭೦, ೨೨೦, ೨೫೨ ಹೀಗೆ ಹೆಚ್ಚುತ್ತಾ ಬಂದ ಕುಟುಂಬಗಳ ಭಾಗವಹಿಸುವಿಕೆ ೨೦೦೩ ರಲ್ಲಿ ನಡೆದ ಕಲಿಯಂಡ ಕಪ್‌ನ ಸಂದರ್ಭ ೨೮೧ಕ್ಕೆ ಏರಿತ್ತು. ಪ್ರಸ್ತುತದ ವರ್ಷಗಳಲ್ಲಿ ೩೦೦ಕ್ಕೂ ಅಧಿಕ ತಂಡಗಳು ಉತ್ಸವದಲ್ಲಿ ಭಾಗಿ ಯಾಗುತ್ತಿವೆ. ೨೦೧೮ ರಲ್ಲಿ ಕುಲ್ಲೇಟಿರ ಕಪ್ ನಡೆದಿದ್ದು ೩೨೯ ತಂಡ ಪಾಲ್ಗೊಂಡಿತ್ತು. ಇದಾದ ನಂತರ ಕಾರಣಾಂತರಗಳಿAದ ನಾಲ್ಕು ವರ್ಷ ಹಾಕಿ ಉತ್ಸವ ಜರುಗಿರಲಿಲ್ಲ. ಇದೀಗ ಮತ್ತೆ ಹಾಕಿ ವೈಭವ ಅಪ್ಪಚೆಟ್ಟೋಳಂಡ ಕಪ್ - ೨೦೨೩ ಮೂಲಕ ಮರುಕಳಿಸುತ್ತಿದೆ. ಈ ಬಾರಿ ದಾಖಲೆಯ ೩೩೬ ತಂಡಗಳು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.