ಮಡಿಕೇರಿ,ಮಾ.೧೭: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಕೊಡಗು ಗೌಡ ವಿದ್ಯಾಸಂಘಕ್ಕೆ ಶತಮಾನಗಳ ಇತಿಹಾಸವಿದ್ದು, ಹಲವಾರು ಮಂದಿ ಪರಿಶ್ರಮದಿಂದ ಕಟ್ಟಿ ಬೆಳೆಸಿದ್ದಾರೆ. ಅಧ್ಯಕ್ಷರುಗಳಾಗಿಯೂ ಹಲವಾರು ಮಂದಿ ಮುನ್ನಡೆಸಿದ್ದಾರೆ. ಇದೀಗ ಈ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಎದುರಾಗಿದ್ದು, ಅಧ್ಯಕ್ಷಗಾದಿಯಿಂದ ಹಿಡಿದು ಪ್ರಮುಖ ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿದೆ. ಕೆಲವೊಂದು ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಸದಸ್ಯರುಗಳ ಮತ ಸೆಳೆಯುವಲ್ಲಿ ತೊಡಗಿದ್ದು, ಚುನಾವಣಾ ಕಣ ರಂಗೇರಿದೆ..!
೧೯೦೮ರಲ್ಲಿ ಆರಂಭಗೊAಡ ವಿದ್ಯಾಸಂಘಕ್ಕೆ ೧೧೫ವರ್ಷಗಳ ಇತಿಹಾಸವಿದೆ. ಶತಮಾನೋತ್ಸವ ಆಚರಿಸಿಕೊಂಡ ಸಂಘದಲ್ಲಿ ಹಲವು ಮಂದಿ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ಪೈಕಿ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಹೊಸೂರು ರಮೇಶ್ ಜೋಯಪ್ಪ ಅವರು; ಸುದೀರ್ಘ ನಾಲ್ಕು ಅವಧಿಗೆ (೨೨ವರ್ಷ) ಅಧ್ಯಕ್ಷರಾಗಿದ್ದವರು. ನಾಲ್ಕು ಅವಧಿಯಲ್ಲೂ ಕೂಡ ಚುನಾವಣೆ ಮೂಲಕವೇ ಗೆಲುವು ಸಾಧಿಸಿದವರು. ಇವರಿಗಿಂತ ಮೊದಲು ಕುಯ್ಯಮುಡಿ ಪೂರ್ಣಯ್ಯ ಅವರು ಅಧ್ಯಕ್ಷರಾಗಿದ್ದರೆ, ಅದಕ್ಕಿಂತ ಹಿಂದೆ ಕುದುಪಜೆ ಕೃಷ್ಣಪ್ಪ ಅವರು ಸುಮಾರು ೧೨ ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.
ಈ ಹಿಂದೆ ಸಂಘಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಸಂಘ ಬೆಳವಣಿಗೆ ಕಾಣುತ್ತಿರುವಂತೆ ಪದಾಧಿಕಾರಿಗಳಾಗಲು ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿರುವಂತೆ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ನಾಲ್ಕು ಅವಧಿಯಿಂದ ಚುನಾವಣೆ ನಡೆಯುತ್ತಿದೆ.
ಎರಡು ಬಣಗಳ ನಡುವೆ ಪೈಪೋಟಿ
ಈ ಬಾರಿ ಅಧ್ಯಕ್ಷ ಸ್ಥಾನ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡು ಬಂದಿದೆ. ಅಧ್ಯಕ್ಷ ಸ್ಥಾನಕ್ಕೆ ಅಂಬೆಕಲ್ಲು ನವೀನ್ ಕುಶಾಲಪ್ಪ ಹಾಗೂ ಕಟ್ಟೆಮನೆ ಆರ್.ಸೋನಾಜಿತ್ ಅವರುಗಳು ಸ್ಪರ್ಧಾಕಣದಲ್ಲಿದ್ದಾರೆ. ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಯನ್ಸ್
(ಮೊದಲ ಪುಟದಿಂದ) ಕ್ಲಬ್ ಟ್ರಸ್ಟ್ ಅಧ್ಯಕ್ಷರಾಗಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿಯಾಗಿರುವ ನವೀನ್ ವಿದ್ಯಾಸಂಘದ ಜಂಟಿ ಕಾರ್ಯದರ್ಶಿಯಾಗಿ, ಕಾರ್ಯದರ್ಶಿಯಾಗಿ ಹಾಗೂ ಹಿಂದಿನ ಸಾಲಿನಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕಟ್ಟೆಮನೆ ಸೋನಾಜಿತ್ ನಿರ್ದೇಶಕನಾಗಿ, ಜಂಟಿ ಕಾರ್ಯದರ್ಶಿಯಾಗಿ ಹಾಗೂ ಹಿಂದಿನ ಸಾಲಿನಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದು, ಮರಗೋಡು ಭಾರತಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ ನೇತೃತ್ವದ ಬಣದ ನಿವೃತ್ತ ಡಿಐಜಿ ಅಮೆ.ಸಿ.ಸೀತಾರಾಂ ಹಾಗೂ ಸೋನಾಜಿತ್ ಬಣದ, ಈ ಹಿಂದೆ ನಿದೇರ್ಶಕರಾಗಿದ್ದ, ಕುಂದಚೇರಿ ವಿಎಸ್‌ಎಸ್‌ಎನ್ ಅಧ್ಯಕ್ಷ ಕೆದಂಬಾಡಿ ಕೀರ್ತಿಕುಮಾರ್ ಸ್ಪರ್ಧೆಯಲ್ಲಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ನವೀನ್ ಬಣದ ಕುಶಾಲನಗರ ಗೌಡ ಮಹಿಳಾ ಸ್ವಸಹಾಯ ಸಂಘದ ಖಜಾಂಚಿ, ಈ ಹಿಂದೆ ವಿದ್ಯಾ ಸಂಘದ ನಿರ್ದೇಶಕಿಯಾಗಿದ್ದ ಕಾಳೇರಮ್ಮನ ಎನ್.ಲತಾ ಹಾಗೂ ಸೋನಾಜಿತ್ ಬಣದ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರಾಗಿದ್ದ, ಗೌಡ ಸಮಾಜ ಹಾಗೂ ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾಗಿರುವ, ರೋಟರಿ ಮಿಸ್ಟಿ ಹಿಲ್ಸ್ ಸೇರಿದಂತೆ ಇತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೈಕೇರ ಮನೋಹರ್ ಮಾದಪ್ಪ ಸ್ಪರ್ಧೆಯಲ್ಲಿದ್ದಾರೆ.
ಇನ್ನೂ ನಿರ್ದೇಶಕರುಗಳ ಸ್ಥಾನಕ್ಕೆ ನವೀನ್ ಬಣದಿಂದ ನಿವೃತ್ತ ಎಸ್‌ಪಿ ಅಪ್ಪಯ್ಯ ಎನ್. ಚೊಕ್ಕಾಡಿ, ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಈರಪ್ಪ ಎಸ್. ಸೂದನ, ನಿರ್ದೇಶಕ ಕುಂಭಗೌಡನ ಡಿ. ವಿನೋದ್‌ಕುಮಾರ್, ವಿದ್ಯಾ ಸಂಘದ ಮಾಜಿ ನಿರ್ದೇಶಕ, ವಕೀಲ ಜ್ಯೋತಿಶಂಕರ್ ಮೊಟ್ಟನ, ವಿದ್ಯಾ ಸಂಘದ ಈ ಹಿಂದಿನ ಸಾಲಿನಲ್ಲಿ ನಿರ್ದೇಶಕರಾಗಿದ್ದ ದೇವಂಗೋಡಿ ಹರ್ಷ, ಸಂಪಾಜೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಂಜಿಕಲ್ಲು ಎಲ್.ಸುರೇಶ್, ಹಾಕತ್ತೂರು ಸಹಕಾರ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಬಾಕಿಲನ ಎಂ.ಸAಜೀವ ಕುಮಾರ್ ಅವರುಗಳು ಸ್ಪರ್ಧಾಕಣದಲ್ಲಿದ್ದರೆ, ಇತ್ತ ಸೋನಾಜಿತ್ ಬಣದಿಂದ ವಾಯು ಸೇನಾ ನಿವೃತ್ತ ಅಧಿಕಾರಿ ಚೋಂಡೀರ ಪ್ರಕಾಶ್ ಕಾರ್ಯಪ್ಪ, ನಂಜರಾಯಪಟ್ಟಣ ಗೌಡ ಯುವಕ ಸಂಘದ ಅಧ್ಯಕ್ಷ, ಗೌಡ ಯುವ ವೇದಿಕೆ ನಿರ್ದೇಶಕ ನಡುಮನೆ ಪವನ್, ವಿದ್ಯಾ ಸಂಘದ ಹಿಂದಿನ ಸಾಲಿನ ನಿರ್ದೇಶಕ, ಯುವ ವೇದಿಕೆ ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಯುವ ವೇದಿಕೆ ನಿರ್ದೇಶಕ, ಐಗೂರು ಗೌಡ ಸಂಘದ ಕಾರ್ಯದರ್ಶಿ ಮೂಲೆಮಜಲು ಮನೋಜ್‌ಕುಮಾರ್, ಯುವ ವೇದಿಕೆ ಕ್ರೀಡಾ ಸಮಿತಿ ಮಾಜಿ ಅಧ್ಯಕ್ಷ, ಕಲ್ಲುಗುಂಡಿಯಲ್ಲಿ ಶೈಕ್ಷಣಿಕ ಟ್ಯುಟೋರಿಯಲ್ ನಡೆಸುತ್ತಿರುವ ಹರೀಶ್ ಊರುಬೈಲು ಅವರುಗಳು ಸ್ಪರ್ಧಾಕಣದಲ್ಲಿದ್ದಾರೆ.
ಅವಿರೋಧ ಆಯ್ಕೆ
ಕೆಲವೊಂದು ಸ್ಥಾನಗಳಿಗೆ ಸಂಘದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಪೇರಿಯನ ಉದಯಕುಮಾರ್, ಜಂಟಿ ಕಾರ್ಯದರ್ಶಿಯಾಗಿ ತಳೂರು ಕೆ.ದಿನೇಶ್‌ಕುಮಾರ್, ನಿರ್ದೇಶಕರುಗಳಾಗಿ
(ಮಹಿಳಾ ಮೀಸಲು) ಕೆದಂಬಾಡಿ ಕಾಂಚನ ಕೀರ್ತನ್, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ರೇವತಿ ರಮೇಶ್ ಅವರುಗಳು ಅವಿರೋಧವಾಗಿ ಆಯ್ಕೆಯಾದವರಾಗಿದ್ದಾರೆ. ಈ ಬಾರಿಯ ಚುನಾವಣಾ ಕಣದಲ್ಲಿ ಅನುಭವಿಗಳೊಂದಿಗೆ ಬಹುತೇಕ ಹೊಸ ಮುಖಗಳ ಯುವಕರೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ವಿದ್ಯಾಸಂಘದ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳ ಭರವಸೆಗಳೊಂದಿಗೆ ಮತದಾರ ಸದಸ್ಯರುಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಮತದಾರ ಯಾರ ಕೈಹಿಡಿಯಲಿದ್ದಾರೆ ಎಂಬದನ್ನು ಕಾದು ನೋಡಬೇಕಿದೆ. ?ಕುಡೆಕಲ್ ಸಂತೋಷ್