ಬಾಳೆಲೆ, ಮಾ. ೧೮: ನಿಟ್ಟೂರು ಕಾರ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ೪ನೇ ವರ್ಷದ ಫುಟ್ಟಬಾಲ್ ಪಂದ್ಯಾಟಕ್ಕೆ ರಾಷ್ಟಿçÃಯ ರಗ್ಬಿ ಅಟಗಾರ ಕಾಂಡೇರ ತರುಣ್ ತಿಮ್ಮಯ್ಯ ಚಾಲನೆ ನೀಡಿದರು. ಸಣ್ಣ ವಯಸ್ಸಿನಲ್ಲೇ ಮಕ್ಕಳು ಕ್ರೀಡೆ ಮೇಲೆ ಆಸಕ್ತಿ ಬೆಳಸಿಕೊಳ್ಳಲು ಯುವಕ ಸಂಘಗಳು ಮತ್ತು ಬೇರೆ ಬೇರೆ ಸಂಘ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ನಡೆಸುವುದರಿಂದ ಪ್ರೇರಣೆಯಾಗುತ್ತಿದೆಯೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ ಅವರ ಸಣ್ಣ ಗ್ರಾಮದಲ್ಲಿ ದೊಡ್ಡ ಮಟ್ಟದ ಕ್ರೀಡೋತ್ಸವವನ್ನು ಆಯೋಜಿಸಿ ನಿರಂತರವಾಗಿ ನಡೆಸಿಕೊಂಡು ಬರುವುದು ಅಭಿನಂದನಾರ್ಹವೆAದು ತಿಳಿಸಿದರು. ಫುಟ್ಬಾಲ್ ಪಂದ್ಯಾಟಕ್ಕೆ ೩೧ ತಂಡಗಳು ನೋಂದಾಯಿಸಿ ಕೊಂಡಿದ್ದು, ವಿಜೇತರಿಗೆ ಐವತ್ತು ಸಾವಿರ ನಗದು, ರನ್ನರ್-ಅಪ್ ತಂಡಕ್ಕೆ ಮೂವತ್ತು ಸಾವಿರ ನಗದು ಟ್ರೋಫಿ ನೀಡಲಾಗುತ್ತಿದ್ದು, ಕ್ರೀಡಾಕೂಟ ಮೂರು ದಿನ ನಡೆದು ಸೋಮವಾರ ಸಂಜೆ ಫೈನಲ್ ಪಂದ್ಯ ನಡೆಯಲಿದೆ. ಮುಕ್ಕಾಟಿರ ಸೋಮಯ್ಯ ಅವರು ಸ್ವಾಗತಿಸಿದರು. ವಿಜಯ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಮುಕ್ಕಾಟಿರ ವಿಕಾಸ್ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯೆ ಪಡಿಞರಂಡ ಕವಿತಾ ಪ್ರಭು, ಪ್ರಮುಖರಾದ ಪೊನ್ನಿಮಾಡ ಸಂತೋಷ್, ಹೊಟ್ಟೇಂಗಡ ಅಜಿತ್, ಪೊನ್ನಿಮಾಡ ಕಟ್ಟಿ ಪೂಣಚ್ಚ, ಪೊನ್ನಿಮಾಡ ನಂಜಪ್ಪ, ಮುಕ್ಕಾಟಿರ ತೇಜ, ರೋಷನ್. ಸೇರಿದಂತೆ ವಿಜಯ ಗ್ರಾಮೀಣ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.