ಸುಂಟಿಕೊಪ್ಪ, ಮಾ. ೧೮: ಕೊಡಗರಹಳ್ಳಿ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ದಲ್ಲಿ ಯುಗಾದಿ ಹಬ್ಬಾಚರಣೆಯನ್ನು ತಾ. ೨೨ ರಂದು ನಡೆಸಲಾಗುವು ದೆಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.
ತಾ. ೨೨ ರಂದು ಕೊಡಗರ ಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಚಂದ್ರಮಾನ ಯುಗಾದಿ ಹಬ್ಬವನ್ನು ಆಚರಿಲಾಗುತ್ತಿದ್ದು ಪೂರ್ವಾಹ್ನ ೭ ಗಂಟೆಯಿAದ ವಿಶೇಷ ಪೂಜೆ, ಪಂಚಾAಗ ಶ್ರವಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಅಪರಾಹ್ನ ೧ ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.