ನಾಪೋಕ್ಲು, ಮಾ. ೧೮: ನಾಲ್ಕುನಾಡು ವಿಭಾಗದಲ್ಲಿ ಇಂದು ಒಂದು ರೀತಿಯ ಹಬ್ಬದ ಕಳೆ... ಸುತ್ತಮುತ್ತಲ ಗ್ರಾಮಗಳ ಬಹುತೇಕ ಜನರು ಸೇರಿದಂತೆ ಜಿಲ್ಲೆಯ ಹಲವೆಡೆಗಳಿಂದಲೂ ಕೇಂದ್ರ ಸ್ಥಾನವಾದ ನಾಪೋಕ್ಲು ಪಟ್ಟಣದಲ್ಲಿ ಜನರು ಜಮಾಯಿಸಿದ್ದರು.
ಒಡ್ಡೋಲಗ... ದುಡಿಕೊಟ್ಟ್ ಪಾಟ್... ತಳಿಯತಕ್ಕಿ ಬೊಳಕ್ ಸಹಿತವಾಗಿ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪುರುಷರು-ಮಹಿಳೆಯರು ಉತ್ಸಾಹಭರಿತರಾಗಿದ್ದರು. ಈ ಸಂಭ್ರಮವೆಲ್ಲವೂ ಕೊಡವ ಕೌಟುಂಬಿಕ ಹಾಕಿ ಉತ್ಸವದ ಪ್ರಾರಂಭೋತ್ಸವಕ್ಕಾಗಿ ಮೇಳೈಸಿತ್ತು ಹಾಗೂ ೨೦೧೮ರಲ್ಲಿ ನಾಪೋಕ್ಲುವಿನಲ್ಲೇ ಜರುಗಿದ್ದ ಬಿದ್ದಾಟಂಡ ಕಪ್ ಹಾಗೂ ಕುಲ್ಲೇಟಿರ ಕಪ್ನ ಬಳಿಕ ಕಾರಣಾಂತರಗಳಿAದ ೪ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಅಪ್ಪಚೆಟ್ಟೋಳಂಡ ಕಪ್ ೨೦೨೩ರ ಮೂಲಕ ಮತ್ತೆ ನಾಪೋಕ್ಲುವಿನಲ್ಲೇ ಮರು ಚಾಲನೆ ಪಡೆಯಿತು.
೨೩ನೇ ವರ್ಷವಾದರೂ ನಾಲ್ಕು ವರ್ಷಗಳ ಅಂತರದ ನೋವನ್ನು ಮರೆಯುವಂತೆ ಮಾಡುವ ಪ್ರಯತ್ನವೆಂಬAತೆ ವಿಜೃಂಭಣೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಉತ್ಸವದ ಅಂಗವಾಗಿ ನಾಪೋಕ್ಲು ಪಟ್ಟಣದಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನ ಹಾಕಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆಯೂ ಈ ಬಾರಿಯ ವಿಶೇಷವಾಗಿತ್ತು.
ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ನಿಂದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ತನಕ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸೇರಿದಂತೆ ಇನ್ನಿತರ ಎಲ್ಲಾ ಅಭಿಮಾನಿಗಳು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಆಗಮಿಸಿದರು.
ದುಡಿಕೊಟ್ಟ್ ಪಾಟ್, ವಾಲಗ ತಳಿಯತಕ್ಕಿ ಬೊಳಕ್ ಸಹಿತವಾಗಿ ಪುರುಷರು-ಮಹಿಳೆಯರು, ಮಕ್ಕಳು, ಸಂಭ್ರಮದಿAದ ಹೆಜ್ಜೆ ಹಾಕಿದರು. ಬಳಿಕ ಮೈದಾನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ, ಕೊಡವ ಹಾಕಿ ಅಕಾಡೆಮಿಯ ಹಾಗೂ ಅಪ್ಪಚೆಟ್ಟೋಳಂಡ ಕುಟುಂಬದ ಧ್ವಜಾರೋಹಣ ನಡೆಯಿತು.
ಮೆರವಣಿಗೆಗೆ ಈತನಕ ವಿವಿಧೆಡೆ ಹಾಕಿ ಉತ್ಸವಗಳನ್ನು ಆಯೋಜನೆ ಮಾಡಿರುವ ೨೩ ಕುಟುಂಬಗಳ ಪ್ರಮುಖರು ೨೩ ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು.
ಸಾಂಸ್ಕೃತಿಕ ರಂಗು: ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕೊಡವ ಸಾಂಪ್ರದಾಯಿಕ ಜನಪದ ಪ್ರದರ್ಶನಗಳೊಂದಿಗೆ ಮಂಡ್ಯದ ಕಲಾವಿದರಿಂದ ಡೊಳ್ಳುಕುಣಿತ, ಕಂಸಾಳೆ ನೃತ್ಯ, ನಾಣಚ್ಚಿಯ ಗದ್ದೆ ಹಾಡಿ ಬುಡಕಟ್ಟು ತಂಡದಿAದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.
ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕು
ಈ ಸಂದರ್ಭ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ೨೩ನೇ ಹಾಕಿ ಹಬ್ಬದಲ್ಲಿ ಹೆಚ್ಚಿನ ತಂಡಗಳು ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. ಕೊಡವ ಕೌಟುಂಬಿಕ ಪಂದ್ಯಾವಳಿ ದೇಶ, ವಿದೇಶದಲ್ಲಿ ಮೆಚ್ಚುಗೆ ಗಳಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಸರಕಾರದ ಸಹಕಾರವೂ ಅಗತ್ಯವಿದೆ. ಇದೀಗ ಸರಕಾರ ಒಂದು ಕೋಟಿ ಅನುದಾನ ನೀಡಿದ್ದು, ಆದಷ್ಟು ಬೇಗ ಸಿಗುವಂತಾಗಲಿ. ಆದೇಶವನ್ನು ಪರಿಪಾಲನೆ ಮಾಡಬೇಕೆಂದು ಹೇಳಿದರು. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಪ್ರಯತ್ನಿಸಬೇಕೆಂದರು.
(ಮೊದಲ ಪುಟದಿಂದ)
ಸೇನೆಗೆ ಆಯ್ಕೆ: ೩೭ನೇ ಕೂರ್ಗ್ ರೆಜಿಮೆಂಟ್ ನ ಲೆ.ಕ. ರವಿ ಮಾತನಾಡಿ; ಸೇನೆಯಲ್ಲಿ ಕೊಡಗಿನ ಪರವಾಗಿ ಇರುವ ಏಕೈಕ ರೆಜಿಮೆಂಟ್ ಇದಾಗಿದೆ. ಹಾಕಿ ಅಕಾಡೆಮಿ ಕೌಟುಂಬಿಕ ಪಂದ್ಯಾವಳಿ ಯಶಸ್ಸಿಗೆ ಸಾಕಷ್ಟು ಪ್ರಯತ್ನ ಪಟ್ಟಿದೆ. ಆ ಮೂಲಕ ಆಟಗಾರರು ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳಲು ಉತ್ತೇಜನ ನೀಡಿದೆ. ಇಂತಹ ಕ್ರೀಡಾಕೂಟಗಳಿಂದ ಸೇನೆಗೆ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಾಗಬೇಕು
ಮಾಜಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ ಪೊನ್ನಣ್ಣ ಮಾತನಾಡಿ, ಕೊಡವ ಹಾಕಿ ಪಂದ್ಯಾವಳಿ ಇದೇ ರೀತಿ ಇತಿಹಾಸ ಸೃಷ್ಟಿಸಲಿ, ಇಲ್ಲಿನ ಆಟಗಾರರು ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಲಿ. ಜಿಲ್ಲೆಯ ಎಲ್ಲ ಕಡೆಗಳಲ್ಲೂ ಟರ್ಫ್ ಮೈದಾನದಲ್ಲಿ ಆಡುವಂತಾಗಬೇಕೆAದು ಅಭಿಪ್ರಾಯಿಸಿದರು. ರಾಜಕೀಯ ಚಿಂತನೆ ಇದ್ದೇ ಇರುತ್ತದೆ. ಆದರೆ, ಸಂಸ್ಕೃತಿ,