ಮಡಿಕೇರಿ, ಮಾ. ೧೭: ಆಸ್ಟೆçÃಲಿಯಾದ ಸಿಡ್ನಿಯಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕದ ಸಾಧನೆಯೊಂದಿಗೆ ಕೀರ್ತಿ ತಂದ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳನ್ನು ಅದ್ಧೂರಿ ಸ್ವಾಗತದೊಂದಿಗೆ ಜಿಲ್ಲೆಯಲ್ಲಿ ಬರಮಾಡಿಕೊಳ್ಳಲಾಯಿತು.

ಪಾಲೇಕಂಡ ಬೋಪಯ್ಯ (೯೦+) ಇವರ ಸಹೋದರ ಬೆಳ್ಳಿಯಪ್ಪ (೮೫+) ಹಾಗೂ ಇವರ ಸಂಬAಧಿ ಕೂಡ ಆಗಿರುವ ಮಾರಮಾಡ ಮಾಚಮ್ಮ ಅವರುಗಳು ಪದಕ ಗಳಿಸಿದ್ದಾರೆ. ನಿನ್ನೆ ಸಂಜೆ ವೀರಾಜಪೇಟೆಯ ಪಂಜರಪೇಟೆಯಲ್ಲಿ ಇವರುಗಳನ್ನು ಪಾಲೇಕಂಡ ಕುಟುಂಬಸ್ಥರು

(ಮೊದಲ ಪುಟದಿಂದ) ಹಾಗೂ ಇತರರು ಬರಮಾಡಿಕೊಂಡರು. ಕುಟುಂಬದ ಉಪಾಧ್ಯಕ್ಷ ಪಿ.ಕೆ. ಉತ್ತಯ್ಯ ನೇತೃತ್ವದಲ್ಲಿ ಇವರುಗಳನ್ನು ಸ್ವಾಗತಿಸಿ ಒಡ್ಡೋಲಗ ಸಹಿತವಾಗಿ ವೀರಾಜಪೇಟೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಕದನೂರಿನಲ್ಲಿರುವ ಐನ್‌ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಟುಂಬದ ಹಿರಿಯರಾದ ಪೂಣಚ್ಚ, ಪ್ರಭು, ವಿನು ಬೋಪಣ್ಣ, ದಿವಿನ್, ಕರುಂಬಯ್ಯ, ರಮೇಶ್, ಪೊನ್ನು ಕುಶಾಲಪ್ಪ, ಮೋನಾ ಬೋಪಣ್ಣ, ನಮಿತಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.