*ಗೋಣಿಕೊಪ್ಪ, ಮಾ. ೧೯: ನೂತನವಾಗಿ ನಿರ್ಮಿಸಿದ ನೀರಿನ ಟ್ಯಾಂಕ್ ಕುಸಿದ ಪರಿಣಾಮ ಅರಣ್ಯ ವೀಕ್ಷಕ ಗಂಭೀರ ಗಾಯಗೊಂಡ ಘಟನೆ ತಿತಿಮತಿ ಮಜ್ಜಿಗೆ ಹಳ್ಳ ಅರಣ್ಯ ಇಲಾಖೆಗೆ ಸೇರಿದ ನರ್ಸರಿಯಲ್ಲಿ ನಡೆದಿದೆ.
ಅರಣ್ಯ ವೀಕ್ಷಕ ಮಾಧು (೪೫) ಎಂಬವರು ನೀರಿನ ಟ್ಯಾಂಕ್ ಕುಸಿತದಿಂದ ಗಂಭೀರ ಗಾಯಗೊಂಡವರಾಗಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆಗೆ ಸಂಬAಧಿಸಿದ ಮಜ್ಜಿಗೆ ಹಳ್ಳ ಫಾರಂನಲ್ಲಿ ಭಾನುವಾರ ಬೆಳಿಗ್ಗೆ ಅರಣ್ಯ ವೀಕ್ಷಕ ಮಾಧು ಗಿಡಗಳಿಗೆ ನೀರು ಹಾಕುತ್ತಿದ್ದ ಸಂದರ್ಭವೇ ನೀರಿನ ಟ್ಯಾಂಕ್ ಕುಸಿದು ಬಿದ್ದಿದೆ. ಈ ವೇಳೆ ಗಾಯಗೊಂಡ ಅವರನ್ನು ಅರಣ್ಯ ಅಧಿಕಾರಿಗಳು ತುರ್ತು ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಜ್ಜಿಗೆ ಹಳ್ಳ ಫಾರಂನಲ್ಲಿರುವ ಗಿಡಗಳಿಗೆ ನೀರು ಹಾಕಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಳೆದ ಒಂದು ತಿಂಗಳ ಹಿಂದೆ ೧ ಲಕ್ಷ ಅನುದಾನದಲ್ಲಿ ೧೦ ಅಡಿ ಎತ್ತರದ ನೀರಿನ ಟ್ಯಾಂಕನ್ನು ನಿರ್ಮಿಸಲಾಗಿತ್ತು.
-ಎನ್. ಎನ್. ದಿನೇಶ್