ಮಡಿಕೇರಿ, ಮಾ. ೧೯: ಕೈಕೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ತಾ.೧೫ರಂದು ಕೊಡಿಮರ ನಿಲ್ಲಿಸುವ ಮೂಲಕ ದೇವರ ಕಟ್ಟು ಬಿದ್ದಿದ್ದು, ತಾ. ೨೧ರ ಮಂಗಳವಾರ ವಾರ್ಷಿಕ ಉತ್ಸವ ಜರುಗಲಿದೆ. ಈ ಅವಧಿಯಲ್ಲಿ ಅಲಂಕಾರ ಪೂಜೆ, ಹರಕೆಬಳಕು ಇತ್ಯಾದಿ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಅಲ್ಲದೆ, ಉತ್ಸವ ಅಂಗವಾಗಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.