ಮಡಿಕೇರಿ, ಮಾ. ೧೯: ಕೊಡಗು ಗೌಡ ವಿದ್ಯಾ ಸಂಘದ ಚುನಾವಣೆ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬೆಕಲ್ಲು ನವೀನ್ ಕುಶಾಲಪ್ಪ ೧,೧೧೮ ಮತ ಪಡೆದು ಜಯಗಳಿಸಿದ್ದಾರೆ. ಎದುರಾಳಿ ಕಟ್ಟೆಮನೆ ಸೋನಾ ೯೪೯ ಮತ ಪಡೆದು ಪರಾಜಿತಗೊಂಡಿದ್ದಾರೆ.

ನಗರದ ಕೊಡಗು ಗೌಡ ಸಮಾಜ ಆವರಣದಲ್ಲಿ ಬೆಳಿಗ್ಗೆ ೭.೩೦ ರಿಂದ ಮಧ್ಯಾಹ್ನ ೨.೩೦ರ ತನಕ ೬ ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ೫,೧೦೦ ಸದಸ್ಯರ ಪೈಕಿ ೨೦೮೮ ಸದಸ್ಯರು ಮತದಾನ ಮಾಡಿದರು. ಇದರಲ್ಲಿ ೩೮ ಮತಗಳು ಅಸಿಂಧುಗೊAಡವು.

ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧಿಕಾರಿ ಪ್ರತಿ ಸ್ಥಾನಕ್ಕೆ ಇಬ್ಬರು ಹಾಗೂ ಉಳಿದ ೬ ನಿರ್ದೇಶಕ ಸ್ಥಾನಕ್ಕೆ ಒಟ್ಟು ೧೨ ಮಂದಿ ಸ್ಪರ್ಧಿಸಿದ್ದರು. ಕಾರ್ಯದರ್ಶಿಯಾಗಿ ಪೇರಿಯನ ಉದಯಕುಮಾರ್, ಜಂಟಿ ಕಾರ್ಯದರ್ಶಿಯಾಗಿ ತಳೂರು ಕೆ.ದಿನೇಶ್‌ಕುಮಾರ್, ನಿರ್ದೇಶಕರು ಗಳಾಗಿ (ಮಹಿಳಾ ಮೀಸಲು) ಕೆದಂಬಾಡಿ ಕಾಂಚನ ಕೀರ್ತನ್, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ರೇವತಿ ರಮೇಶ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಅಮೆ ಸಿ ಸೀತಾರಾಮ ೧೧೦೯ ಮತ ಪಡೆದು ಜಯಗಳಿಸಿದರೆ, ಕೆದಂಬಾಡಿ ಎಸ್. ಕೀರ್ತಿಕುಮಾರ್ ೯೪೫ ಮತದಿಂದ ಸೋಲು ಅನುಭವಿಸಿದರು. ಕೋಶಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಳೇರಮ್ಮನ ಎನ್. ಲತಾ ೧೦೪೫ ಮತಗಳಿಸಿ ಗೆದ್ದರೆ, ಪೈಕೇರ ಮನೋಹರ ಮಾದಪ್ಪ ೧೦೧೫ ಅಲ್ಪಮತಗಳಿಂದ ಪರಭಾವಗೊಂಡರು.

ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಈರಪ್ಪ ಎಸ್. ಸೂದನ (೧೪೨೧ ಮತ), ಕುಂಭಗೌಡನ ಡಿ. ವಿನೋದ್ ಕುಮಾರ್ (೧೨೯೯),

(ಮೊದಲ ಪುಟದಿಂದ) ದೇವಂಗೋಡಿ ಹರ್ಷ (೧೨೯೪), ಜ್ಯೋತಿಶಂಕರ ಮೊಟ್ಟನ (೧೨೨೭), ಪರಿಚನ ಸತೀಶ್ (೧೨೧೬), ಮೂಲೆಮಜಲು ಮನೋಜ್ ಕುಮಾರ್ (೧೧೦೫) ಗೆಲುವು ಸಾಧಿಸಿದರು.

ಉಳಿದಂತೆ ಸ್ಪರ್ಧಾ ಕಣದಲ್ಲಿದ್ದ ಚೊಕ್ಕಾಡಿ ಅಪ್ಪಯ್ಯ (೧೦೭೧), ಹರೀಶ್ ಊರುಬೈಲು (೧೦೦೦), ನಡುಮನೆ ಪವನ್ (೯೮೭), ಚೋಂಡೀರ ಪ್ರಕಾಶ್ ಕಾರ್ಯಪ್ಪ (೯೦೩), ಬಾಕಿಲನ ಸಂಜೀವಕುಮಾರ್ (೮೮೧), ಪಂಜಿಕಲ್ಲು ಎಲ್. ಸುರೇಶ್ (೮೦೭) ಪರಾಜಿತಗೊಂಡರು.

ಚುನಾವಣಾಧಿಕಾರಿಯಾಗಿ ಕಾಳೇರಮ್ಮನ ಗೋಪಾಲ ಹಾಗೂ ಸಹಾಯಕರಾಗಿ ದೇವಜನ ಮೋಹನ್, ದಿವಾಕರ್ ಸೇರಿದಂತೆ ಶಿಕ್ಷಕರು ಕಾರ್ಯನಿರ್ವಹಿಸಿದರು.