ಸುಂಟಿಕೊಪ್ಪ, ಮಾ. ೧೯: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಭಾಗ-೨ರಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಭಾಗ-೨ರಲ್ಲಿ ೨೫ ವಾಸದ ಮನೆಗಳಿದ್ದು ಸುಮಾರು ೧೫೦ ಮತದಾರರಿದ್ದು ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷÀ್ಕರಿಸುವುದಾಗಿ ಈ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ‘‘ನಮ್ಮ ವಾಸದ ಮನೆಗಳಿಗೆ ಏಕೈಕ ರಸ್ತೆಯನ್ನು ೧೯೯೧ರಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿತ್ತು. ಆನಂತರ ೩೦೦ ಮೀಟರ್ ರಸ್ತೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಿಸಿ ೨೦೦ ಮೀಟರ್ ಡಾಂಬರೀಕರಣ ಮಾಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಸುರಿದ ೬ ಇಂಚು ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಈ ಬಗ್ಗೆ ರಸ್ತೆ ಸರಿಪಡಿಸುವಂತೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷö್ಯ ವಹಿಸಿದ್ದಾರೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ಧರು ನಡೆದಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಬಾಡಿಗೆ ವಾಹನಗಳು ಬರುತ್ತಿಲ;್ಲ ಬಂದರೆ ೪೦೦ ರೂ. ಬಾಡಿಗೆ ನೀಡಬೇಕಾಗುತ್ತದೆ. ಕೆಲವು ವಾಹನಗಳು ಈ ರಸ್ತೆಯಲ್ಲಿ ಕೆಟ್ಟು ನಿಂತು ನಾನಾ ತೊಂದರೆ ಅನುಭವಿಸುವಂತಾಗಿದೆ. ಆದುದರಿಂದ ನಾವುಗಳು ಮುಂಬರುವ ಚುನಾವಣೆ ಬಹಿಷÀ್ಕರಿಸುವುದಾಗಿ ತೀರ್ಮಾಣ ಕೈಗೊಂಡಿದ್ದೇವೆ’’ ಎಂದು ಗ್ರಾಮಸ್ಥರು ತಿಳಿಸಿದರು. ಮಾಹಿತಿ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ ಆಗಮಿಸಿ ಮಾತನಾಡಿ ಮಳೆ ಅಧಿಕವಾಗಿ ಈ ರಸ್ತೆ ಹಾಳಾಗಿದೆ. ಸರ್ಕಾರದ ನಿಧಿಯಿಂದ ರೂ.೫ ಲಕ್ಷ ಹಣ ಬಿಡುಗಡೆಯಾಗಿದ್ದು, ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ರೂ.೨ ಲಕ್ಷ ಹಣವನ್ನು ಬಳಸಿ ಒಟ್ಟು ೭ ಲಕ್ಷ ಹಣದಲ್ಲಿ ಈ ರಸ್ತೆಯನ್ನು ಸರಿಪಡಿಸಲಾಗುವುದು ಎಂದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಅರುಣಾಕುಮಾರಿ, ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಗ್ರಾಮಸ್ಥರಾದ ಅಭಿ, ದಿವಾಕರ, ಕರುಣಾಕರ, ಕಾವ್ಯ, ಸುಬ್ಬರಾಜ್, ಸೌಮ್ಯ, ಗೋಪಾಲ, ಅಜೇಶ್, ಪವನ್ ಇತರರು ಹಾಜರಿದ್ದರು.