ಮಡಿಕೇರಿ, ಮಾ. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ಇದೀಗ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ಜಾರಿಯಾಗಿದೆ. ಈ ಕುರಿತಾಗಿ ಇರುವ ದಾಖಲೆ ಮತ್ತಿತರ ಸಮಸ್ಯೆಗಳನ್ನು ಸರಿಪಡಿಸಿ ತಕ್ಷಣವೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ)ಗೆ ಜಾಗವನ್ನು ಹಸ್ತಾಂತರಿಸಲು ನ್ಯಾಯಾಲಯ ಆದೇಶ ನೀಡಿದೆ.

ಈ ಬಗ್ಗೆ ಕೆಎಸ್‌ಸಿಎ ಹಿರಿಯ ವಕೀಲರಾದ ಕೆ.ಎನ್. ಘಣೀಂದ್ರ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಈ ಬಗ್ಗೆ ನಿರ್ದೇಶನ ನೀಡಿದೆ. ಈಗಾಗಲೇ ಕೆಎಸ್‌ಸಿಎಗೆ ಜಿಲ್ಲಾಡಳಿತ ಮೂಲಕ ಗುರುತಿಸಿ ನೀಡಲಾಗಿರುವ ೧೧.೭೦ ಎಕರೆ ಜಾಗದ ಪೋಡಿ... ದುರಸ್ತಿಯಂತಹ ದಾಖಲೆಗಳನ್ನು ಸರಿಪಡಿಸಿ ನ್ಯಾಯಾಲಯ ಆದೇಶದ ಪ್ರತಿ ದೊರೆತ ಬಳಿಕದ ಎರಡು ವಾರದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಕೆಎಸ್‌ಸಿಎಗೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೆಎಸ್‌ಸಿಎ ಮೂಲಕ ಆಧುನಿಕ ಮಾದರಿಯಲ್ಲಿ ಅಂತರರಾಷ್ಟಿçÃಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಬಗ್ಗೆ ಕ್ಯಾಬಿನೆಟ್‌ನ ಒಪ್ಪಿಗೆಯಂತೆ ೨೦೧೫ರಲ್ಲೇ ಜಿಲ್ಲಾಡಳಿತದಿಂದ ಹೊದ್ದೂರು ಗ್ರಾಮದ ಪಾಲೆಮಾಡುವಿನ ಸರ್ವೆ ನಂ. ೧೬೭/ ೧ ಂ ನಲ್ಲಿ ೧೨.೭೦ ಎಕರೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಆದರೆ ಪಾಲೆಮಾಡುವಿನಲ್ಲಿ ಇದು ಬಡ ಜನರ ಸ್ಮಶಾನಕ್ಕೆಂದು ನಿಗದಿಯಾದ ಜಾಗ ಎಂಬ ವಾದದೊಂದಿಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಯೋಜನೆ ವಿವಾದದ ಸ್ವರೂಪ ಪಡೆದುಕೊಂಡಿತ್ತು.

ಈ ಬಗ್ಗೆ ಪರ - ವಿರೋಧ ಮಾತ್ರವಲ್ಲದೆ, ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಈ ಜಾಗದ ವಿವಾದ ಕಳೆದ ಹಲವು ವರ್ಷಗಳಿಂದಲೂ ಮುಂದುವರಿ ದಿತ್ತಲ್ಲದೆ ಹಿಂದೆಯೂ ನ್ಯಾಯಾಲಯದ

(ಮೊದಲ ಪುಟದಿಂದ) ಮೆಟ್ಟಿಲೇರಿತ್ತು. ಜಿಲ್ಲಾಡಳಿತ ಮಂಜೂರು ಮಾಡಿದ್ದ ಜಾಗದಲ್ಲೇ ಪರಿಶಿಷ್ಟ - ಜಾತಿ ಜನಾಂಗದ ಸ್ಮಶಾನ ಜಾಗ ಸೇರಿದೆ ಎಂಬ ಆಕ್ಷೇಪ ಇಲ್ಲಿ ಮುಖ್ಯ ವಿವಾದವಾಗಿತ್ತು. ಆ ನಂತರದಲ್ಲಿ ೧೨.೭೦ ಎಕರೆ ಜಾಗದ ಪೈಕಿ ೫೦ ಸೆಂಟ್ ಜಾಗವನ್ನು ಸ್ಮಶಾನಕ್ಕೆಂದು ಮೀಸಲಿರಿಸಿ ನಿರ್ಣಯ ಕೈಗೊಳ್ಳಲಾಗಿತ್ತಾದರೂ ಮತ್ತೆ ೫೦ ಸೆಂಟ್ ಹೆಚ್ಚು ಜಾಗದ ಬೇಡಿಕೆ ಎದುರಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯೂ ತಿರಸ್ಕೃತಗೊಂಡಿತ್ತು.

ಜಿಲ್ಲಾಡಳಿತ ಈ ಬಗ್ಗೆ ಅಂತಿಮ ತೀರ್ಮಾನವೊಂದನ್ನು ಕೈಗೊಂಡು ೧೨.೭೦ ಎಕರೆಯಲ್ಲಿ ೧ ಎಕರೆ ಜಾಗವನ್ನು ಪ್ರತ್ಯೇಕಿಸಿ ಉಳಿದ ೧೧.೭೦ ಎಕರೆ ಜಾಗವನ್ನು ಕೆಎಸ್‌ಸಿಎಗೆ ನೀಡಲಾಗಿತ್ತು. ಈ ಒಡಂಬಡಿಕೆಯAತೆ ಕೆಎಸ್‌ಸಿಎ ಮೂಲಕ ನಂತರದಲ್ಲಿ ಸಂಸ್ಥೆಗೆ ನೀಡಲಾದ ೧೧.೭೦ ಎಕರೆ ಜಾಗದಲ್ಲಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೂ ಮತ್ತೆ ಮತ್ತೆ ಜಾಗ ವಿವಾದ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಕೆಎಸ್‌ಸಿಎ ಸಂಸ್ಥೆ ಇದರ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರ ಮೂಲಕ ರಾಜ್ಯ ಉಚ್ಚನ್ಯಾಯಾಲದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಕೂಲಂಕುಶ ವಿಚಾರಣೆ ನಡೆದಿದ್ದು, ಇದೀಗ ನ್ಯಾಯಾಲಯದ ಮೂಲಕ ಆದೇಶ ಜಾರಿಯಾಗಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಮಡಿಕೇರಿ ತಹಶೀಲ್ದಾರ್, ಡಿಡಿಎಲ್‌ಆರ್ ಅವರುಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್. ದೇವದಾಸ್ ಅವರು ಫೆಬ್ರವರಿ ೨೨ ರಂದು ಆದೇಶ ಜಾರಿ ಮಾಡಿದ್ದಾರೆ.