ಕೊಡಗಿನ ಬದಲಾಗಿ ಈ ಕ್ರಿಕೆಟ್ ಸ್ಟೇಡಿಯಂ ಯೋಜನೆಯನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಲಾಗುವುದು ಎಂಬದಾಗಿ ವದಂತಿ ಸೃಷ್ಟಿಯಾಗಿತ್ತು. ಆದರೆ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೀಗ ನ್ಯಾಯಾಲಯವೂ ಕೆಎಸ್ಸಿಎ ಪರವಾಗಿ ತೀರ್ಪು ನೀಡಿದೆ. ಕ್ರಿಕೆಟ್ ಸ್ಟೇಡಿಯಂ ಸುಸಜ್ಜಿತವಾಗಿ ನಿರ್ಮಾಣವಾಗಲಿದ್ದು, ಇದು ಕೊಡಗಿನ ಪ್ರತಿಭೆಗಳಿಗೆ ಅನುಕೂಲಕರವಾಗಲಿದೆ. ಕ್ರಿಕೆಟ್ ಎಂಬುದು ಪ್ರಸ್ತುತ ಮತ್ತಷ್ಟು ಜನಪ್ರಿಯತೆ ಕಾಣುತ್ತಿದ್ದು, ಇದಕ್ಕೆ ಜನಬೆಂಬಲದ ಅಗತ್ಯವೂ ಇದೆ ಎಂದು ಕೆಎಸ್ಸಿಎಯ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ರಘು ರಾಮ್ಭಟ್ ಅವರು ಜಿಲ್ಲಾಡಳಿತ, ಪೊಲೀಸ್ ಇಲಾಖೆ , ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.